ಕಾಗವಾಡ ವರದಿ
ಉಪಯೋಗಕ್ಕೆ ಬಾರದ ಶಿರಗುಪ್ಪಿ ಕೋವಿಡ್ ಸೆಂಟರ್
ಕಾಗವಾಡ ತಾಲ್ಲೂಕಿನ ಇವರೆಗೆ ಹಲವು ಕೊರೊನಾ ಪಾಸಿಟಿವ್ ದೃಢವಾಗಿದ್ದು ಬೇಕಾಬಿಟ್ಟಿಯಾಗಿ ಸೊಂಕಿತರು ಗ್ರಾಮಗಳಲ್ಲಿ ತಿರುಗಾಡುತ್ತಿದ್ದಾರೆ
ಕೊರೊನಾ ಹತೋಟಿಗೆ ತರಲು ಮೊನ್ನೆ ತಾನೆ ಶಿರಗುಪ್ಪಿಯಲ್ಲಿ ಕೋವಿಡ್ ಸೆಂಟರ್ ತೆರೆಯಲಾಗಿದ್ದು ಅದರಲ್ಲಿ ೫೦ ಬೆಡ್ ವ್ಯವಸ್ಥೆ ಮಾಡಲಾಗಿದೆ
ಶಿರಗುಪ್ಪಿಯ ಕೋವಿಡ್ ಸೆಂಟರಗೆ ಜವಳಿ ಹಾಗೂ ಅಲ್ಪಸಂಖ್ಯಾತರ ಸಚಿವ ಶ್ರೀಮಂತ ಪಾಟೀಲ್ ಅಲ್ಲಿ ಭೇಟಿ ಕೊಟ್ಟು ಪರಿಶೀಲನೆ ಕೂಡಾ ಮಾಡಿದ್ದರು.ಆದರೆ ಆ ಕೋವಿಡ್ ಸೆಂಟರಲ್ಲಿ ಯಾವುದೇ ಸೊಂಕಿತರನ್ನ ಇಟ್ಟಿಲ್ಲ ಹಾಗೂ ನೆಪ ಮಾತ್ರಕ್ಕೆ ಕೊವಿಡ್ ಸೆಂಟರ್ ನ್ನು ತೆರೆದು ಸರ್ಕಾರ ಹಣ ನುಂಗಲು ಮಾಡಿರುವ ಕುತಂತ್ರ ಇದು ಎಂದು ಸಾರ್ವಜನಿಕರ ಆರೋಪವಾಗಿದೆ
ಕೇಂದ್ರ ಮತ್ತು ರಾಜ್ಯ ಸರ್ಕಾರ ಕೊಟ್ಯಾಂತರ ಖರ್ಚು ಮಾಡಿ ಕಾಗವಾಡ ತಾಲೂಕಿನ ಶಿರಗುಪ್ಪಿಯಲ್ಲಿ ಕೋವಿಡ್ ಸೆಂಟರ್ ತೆರೆದು ಹಲವು ದಿನಗಳೇ ಕಳೆದಿವೆ ಆದರೂ ಅಲ್ಲಿ ಯಾವದೇ ಸೊಂಕಿತರನ್ನ ಇಡಲಾಗಿಲ್ಲ ಕಾಗವಾಡ ತಾಲೂಕಿನ ಎಲ್ಲ ಸೊಂಕಿತರು ಮನೆಗಳಲ್ಲಿ ಕ್ವಾರಂಟೈನ್ ನಲ್ಲಿ ಇದ್ದಾರೆ ಹಾಗಾದರೇ ಈ ಕೊವಿಡ್ ಕೇಂದ್ರ ಮಾಡಿದ್ದು ಯಾವ ಪುರುಷಾರ್ಥಕ್ಕಾಗಿ ಮಾಡಿ ಕೂಡಲೇ ಕಾಗವಾಡ ತಾಲೂಕಿನ ಎಲ್ಲ ಸೊಂಕಿತರನ್ನ ಶಿರಗುಪ್ಪಿ ಕೊವಿಡ್ ಕೇಂದ್ರಕ್ಕೆ ಸ್ಥಳಾಂತರ ಮಾಡಿ ಅವರಿಗೆ ಸರಿಯಾದ ಚಿಕಿತ್ಸೆ ನೀಡಬೇಕು ಮತ್ತು ಇದರ ಬಗ್ಗೆ ಮೇಲಾಧಿಕಾರಿಗಳು ಸರಿಯಾದ ತನಿಖೆ ಮಾಡಬೇಕು ಎಂದು ಸರ್ಕಾರಕ್ಕೆ ಒತ್ತಾಯಿಸುತ್ತೇನೆ ಎಂದು ಸಾಮಾಜಿಕ ಹೋರಾಟಗಾರ ಚಂದ್ರಕಾಂತ ಹುಕ್ಕೇರಿ ಆಗ್ರಹಿಸಿದ್ದಾರೆ
ವರದಿ. ಅಮರ ಕಾಂಬಳೆ.ಕಾಗವಾಡ