ಎಂಕೆ ಹುಬ್ಬಳ್ಳಿ ವಿಭಾಗದ ಆಶಾ ಕಾರ್ಯಕರ್ತೆಯರಿಗೆ k .m.f ನಿಂದ ಕರೋನಾ ವಾರಿಯರ್ಸ್ ಗೌರವ ಧನದ ಚೆಕ್ ವಿತರಿಸಿ: ಕಿತ್ತೂರು ಶಾಸಕರಲ್ಲಿ ಮನವಿ ಮಾಡಿದ ಪತ್ರಕರ್ತ ಬಸವರಾಜು

0

ಹೌದು ರಾಜ್ಯಾದ್ಯಂತ ಕರೋನಾ ವಾರಿಯರ್ಸ್ ಗಳ ಪಟ್ಟಿಯಲ್ಲಿ ಮಂಚೂಣಿಯಲ್ಲಿ ಬರುವವರು ಸಮಸ್ತ ಆಶಾ ಕಾರ್ಯಕರ್ತೆಯರು. ವಿಶೇಷವಾಗಿ ಈ ಕರೋನಾ ಮಹಾಮಾರಿಯ ಸಂದರ್ಭದಲ್ಲಿ ವೈರಸ್ ತಡೆಗಟ್ಟುವಿಕೆ ಪ್ರಮುಖ ಪಾತ್ರ ವಹಿಸಿದವರು ಈ ಆಶಾ ಕಾರ್ಯಕರ್ತೆಯರು. ತನ್ನ ಆರೋಗ್ಯ, ಜೀವನದ ಹಂಗನ್ನು ತೊರೆದು, ಕುಟುಂಬದ ಹಿತಾಸಕ್ತಿಯನ್ನು ಲೆಕ್ಕಿಸದೇ, ಸವಾಲುಗಳನ್ನು ಎದುರಿಸಿ ಸಮಸ್ತ ಆಶಾ ಕಾರ್ಯಕತೆಯರು ಕೆಲಸ ಮಾಡುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಸರ್ಕಾರ ಹಾಗೂ ಕೆ ಎಂ ಎಫ್ ಸಹಯೋಗದಲ್ಲಿ ಆಶಾ ಕಾರ್ಯಕರ್ತೆಯರು ಗಳಿಗೆ ಗೌರವ ಧನದ ಚೆಕ್ ಗಳನ್ನು ಬೆಳಗಾವಿ ಜಿಲ್ಲೆಯ ಹಲವಾರು ತಾಲ್ಲೂಕುಗಳಲ್ಲಿ ವಿತರಣೆ ಮಾಡಲಾಗಿದೆ. ಇಂತಹ ಸಂದರ್ಭದಲ್ಲಿ ಕಿತ್ತೂರು ತಾಲ್ಲೂಕಿನಲ್ಲಿ ವಿತರಣೆ ಮಾಡಲಾಗಿದ್ದು ಇರುತ್ತದೆ. ಆದರೇ ಎಂಕೆ ಹುಬ್ಬಳ್ಳಿ ಸರ್ಕಾರಿ ಅಸ್ಪತ್ರೆ ವಿಭಾಗದಲ್ಲಿ ಬರುವ ಆಶಾ ಕಾರ್ಯಕರ್ತೆಯರು ಗಳಿಗೆ ಇನ್ನೂ ವಿತರಣೆಯಾಗಿಲ್ಲ, ಆದ್ದರಿಂದ ಇಂದು ಪತ್ರಕರ್ತ ಬಸವರಾಜು ಭೇಟಿಕೊಟ್ಟು ಇವರ ಸಮಸ್ಯೆಗಳ ಬಗ್ಗೆ ಕಿತ್ತೂರು ಶಾಸಕರಾದ ಮಹಾಂತೇಶ್ ದೊಡ್ಡ ಗೌಡರು ಹಾಗೂ ತಾಲ್ಲೂಕು ಆರೋಗ್ಯ ಕೇಂದ್ರದ ಅಧಿಕಾರಿಗಳು ಆದ ಸಿದ್ದಣ್ಣನವರ್ ಹಾಗೂ ಬಿಜೆಪಿ ಮುಖಂಡರು ಆದ ಶ್ರೀ ಉಳವಪ್ಪ ಉಳ್ಳಾಗಡ್ಡಿಯವರ ಅವರ ಗಮನಕ್ಕೆ ತೆಗೆದುಕೊಂಡು ಬಂದರು. ಇನ್ನಾದರೂ ಇವರಿಗೆ ಕರೋನಾ ವಾರಿಯರ್ಸ್ ಚೆಕ್ ಅನ್ನು ವಿತರಣೆ ಮಾಡುವವರೇ ಎಂಬುದನ್ನು ಕಾದು ನೋಡಬೇಕಿದೆ. 👍🙏 ವಂದನೆಗಳು. ಶ್ರೀ ಬಸವರಾಜು. ಪತ್ರಕರ್ತರು. 👍🙏

LEAVE A REPLY

Please enter your comment!
Please enter your name here