ಕಳೆದ ವರ್ಷದ ಸಾರ್ವತ್ರಿಕ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷ ಸೇರಲು ಕಾಂಗ್ರೆಸ್ ತೊರೆದಿದ್ದ ಅಜೊಯ್ ಕುಮಾರ್ ಈಗ ಭಾನುವಾರ ಮತ್ತೊಮ್ಮೆ ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ.
ಜಾರ್ಖಂಡ್ ಕಾಂಗ್ರೆಸ್‌ನ ಮಾಜಿ ಅಧ್ಯಕ್ಷ ಅಜೊಯ್ ಕುಮಾರ್ ಅವರು ಪಕ್ಷಕ್ಕೆ ಸೇರುವ ಪ್ರಸ್ತಾವನೆಯನ್ನು ಕಾಂಗ್ರೆಸ್ ಅಧ್ಯಕ್ಷ ಸೋನಿಯಾ ಗಾಂಧಿ ಸಮ್ಮತಿಸಿದ್ದಾರೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಹೇಳಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅಜೊಯ್ ಕುಮಾರ್, “ಸಂಪೂರ್ಣ ಸತ್ಯ ಹೇಳುವ ಅಗತ್ಯವಿದ್ದಾಗ ಮೌನವಾಗಿರುವುದು ಹೇಡಿತನವಾಗುತ್ತದೆ-ಮಹತ್ಮಾಗಾಂಧಿ. ನಾನು ರಾಹುಲ್ ಗಾಂಧಿಯಿಂದ ಸ್ಫೂರ್ತಿ ಪಡೆದಿದ್ದೇನೆ ಎಂದಿದ್ದಾರೆ.