ಎಟಿಎಂನಿಂದ 46 ಲಕ್ಷ ರೂ.ಲೂಟಿ ಮಾಡಿದ ಗ್ಯಾಂಗ್‌ ಕಿಂಗ್‌ಪಿನ್ ಕೋವಿಡ್ ಆಸ್ಪತ್ರೆಯಿಂದ ಎಸ್ಕೇಪ್

0

ಎಟಿಎಂ ದರೋಡೆ ಪ್ರಕರಣದಲ್ಲಿ ಭಾಗಿಯಾಗಿದ್ದ ಯುವಕನೋರ್ವ ಮಧ್ಯಪ್ರದೇಶದ ದಾಮೋಹ್ ಜಿಲ್ಲೆಯಲ್ಲಿ ಕರೊನಾಗೆ ಚಿಕಿತ್ಸೆ ಪಡೆಯುತ್ತಿದ್ದ ಆಸ್ಪತ್ರೆಯಿಂದ ಪರಾರಿಯಾಗಿದ್ದಾನೆ.
ಎಟಿಎಂಗಳಿಂದ 46 ಲಕ್ಷ ರೂ.ಗಳನ್ನು ಲೂಟಿ ಮಾಡಿದ ಗ್ಯಾಂಗ್‌ನ ಕಿಂಗ್‌ಪಿನ್ ದೇವೇಂದ್ರ ಪಟೇಲ್ ಸೋಮವಾರ ಮಧ್ಯರಾತ್ರಿ ಜಿಲ್ಲಾ ಆಸ್ಪತ್ರೆಯಿಂದ ಪರಾರಿಯಾಗಿದ್ದಾನೆ ಎಂದು ದಾಮೋ ಪೊಲೀಸ್ ವರಿಷ್ಠಾಧಿಕಾರಿ ಹೇಮಂತ್ ಚೌಹಾನ್ ತಿಳಿಸಿದ್ದಾರೆ.

 

ಕಳೆದ ತಿಂಗಳು ಬಂಧನಕ್ಕೊಳಗಾದ ಆರೋಪಿಗೆ ಕರೊನಾ ಸೋಂಕು ದೃಢಪಟ್ಟ ಹಿನ್ನೆಲೆ ಆತನ ಕಣ್ಗಾವಲಿಗೆ ಜೈಲು ಸಿಬ್ಬಂದಿಯನ್ನು ಆಸ್ಪತ್ರೆಯಲ್ಲಿ ನಿಯೋಜಿಸಲಾಗಿತ್ತು. ಪರಾರಿಯಾದ ಆತನಿಗೆ ಶೋಧ ಕಾರ್ಯ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸಿವಿಲ್ ಎಂಜಿನಿಯರಿಂಗ್ ಪದವೀಧರನಾದ ಪಟೇಲ್, ದಮೋಹ್, ಪನ್ನಾ, ಜಬಲ್ಪುರ್ ಮತ್ತು ಕಾಟ್ನಿ ಜಿಲ್ಲೆಗಳಲ್ಲಿ ಏಳು ಎಟಿಎಂಗಳನ್ನು ಸ್ಫೋಟಕಗಳ ಸಹಾಯದಿಂದ ದೋಚಿದ ಆರು ಸದಸ್ಯರ ಗ್ಯಾಂಗ್‌ನ ಮಾಸ್ಟರ್ ಮೈಂಡ್ ಆಗಿದ್ದಾನೆ.

 

LEAVE A REPLY

Please enter your comment!
Please enter your name here