ಎಮ್ಮೆ ಮೇಯಿಸಲು ಹೋಗಿದ್ದ ಮಹಿಳೆ ಮೇಲೆ ಚಿರತೆ ದಾಳಿ

0

ಎಮ್ಮೆ ಮೇಯಿಸಲು ಹೋಗಿದ್ದ ಮಹಿಳೆ ಮೇಲೆ ಚಿರತೆ ದಾಳಿ ನಡೆಸಿದ ಘಟನೆ ತಾಲೂಕಿನ ಜಂಗ್ಲಿ ಅಂಜನಹಳ್ಳಿ ಕ್ಯಾಂಪ್ ಹತ್ತಿರ ಇಂದು ನಡೆದಿದೆ. ಘಟನೆಯಲ್ಲಿ ಚಿರತೆಯಿಂದ ಗಾಯಗೊಂಡ ಮಹಿಳೆಯನ್ನು ಮಾಬಮ್ಮ ನರಸಿಂಹಲು (46) ಎಂಬ ಮಹಿಳೆ ಚಿರತೆ ದಾಳಿಗೆ ಸಿಕ್ಕಿದ್ದು, ಕಿವಿ, ತಲೆಗೆ ತೀವ್ರ ಗಾಯಗಳಾಗಿವೆ.

ಕಿಷ್ಕಿಂದ ಅಂಜನಾದ್ರಿ ಹಾಗು ಏಳುಗುಡ್ಡದ ಪ್ರದೇಶದಲ್ಲಿ ಚಿರತೆಗಳ ಕಾಟ ಹೆಚ್ಚಾಗಿದ್ದು ಒಂದು ವರ್ಷದ ಹಿಂದೆ ಇದೇ ಪ್ರದೇಶದಲ್ಲಿ ಚಿರತೆಗಳು ಕಾಣಿಸಿಕೊಂಡು ಸ್ವಲ್ಪ ಅಂತರದಲ್ಲಿ ಚಿರತೆ ದಾಳಿಯಿಂದ ಬಾಲಕನೋರ್ವ ತಪ್ಪಿಸಿ ಕೊಂಡಿದ್ದ ಗಾಯಗೊಂಡ ಮಹಿಳೆ ಗಂಗಾವತಿ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಬೋನ್ ಇಡಲು ಒತ್ತಾಯ: ಹನುಮನಹಳ್ಳಿ‌, ಚಿಕ್ಕರಾಂಪೂರ, ಜಂಗ್ಲಿ, ಸಾಣಾಪೂರ ಸೇರಿ ಸುತ್ತಲಿನ‌ ಪ್ರದೇಶಗಳಲ್ಲಿ ಚಿರತೆ ಕರಡಿಗಳ ಸಂಖ್ಯೆ ಹೆಚ್ಚಿದ್ದು ಅರಣ್ಯ ಇಲಾಖೆಯವರು ಬೋನ್ ಇಟ್ಟು ಸೆರೆ ಹಿಡಿದು ದೂರದ ಪ್ರದೇಶಗಳಿಗೆ ಬಿಡುವಂತೆ ಜಂಗ್ಲಿ ಗ್ರಾಮಸ್ಥರು ಒತ್ತಾಯಿಸಿದ್ದಾರೆ.

LEAVE A REPLY

Please enter your comment!
Please enter your name here