ಎರಡು ಸಾವಿರ ಕಿ.ಮೀ. ಪಾದಯಾತ್ರೆ ಹೊರಟ ಜೆ.ಎಚ್​. ಪಟೇಲ್​ರ ಪುತ್ರ ಮಹಿಮಾ!

0

ಮಾಜಿ ಮುಖ್ಯಮಂತ್ರಿ ಜೆ.ಎಚ್.ಪಟೇಲ್​ರ ಪುತ್ರ ಮಹಿಮಾ ಜೆ.ಪಟೇಲ್ ರಾಜ್ಯದಲ್ಲಿ 2,000 ಕಿಲೋ ಮೀಟರ್ ಪಾದಯಾತ್ರೆ ಕೈಗೊಂಡಿದ್ದಾರೆ.

ನಾಲ್ಕೈದು ಹಂತಗಳಲ್ಲಿ ಕರ್ನಾಟಕದ ಪರಿಕ್ರಮಣ ಮಾಡಲು ನಿರ್ಧರಿಸಿರುವ ಮಹಿಮಾ ಪಟೇಲ್, ಇದೀಗ ಬೆಂಗಳೂರಿನಿಂದ – ಕಾರಿಗನೂರಿಗೆ ಪಾದಯಾತ್ರೆ ಹಮ್ಮಿಕೊಂಡಿದ್ದಾರೆ. ಇದಾದ ಬಳಿಕ ಕಾರಿಗನೂರಿನಿಂದ ಕೂಡಲಸಂಗಮ, ಬೀದರ್‌ನಿಂದ -ಚಾಮರಾಜನಗರಕ್ಕೆ ಪ್ಲಾನ್ ರೂಪಿಸಿದ್ದಾರೆ. ಶುಕ್ರವಾರ ಬೆಳಗ್ಗೆ 11ಕ್ಕೆ ಬೆಂಗಳೂರಿನ ಅಶೋಕ ಹೋಟೆಲ್ ಹಿಂಭಾಗದ ಗಾಂಧಿ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ಬಳಿಕ ಜೆಡಿಯು ಕಚೇರಿಯಿಂದ ಪಾದಯಾತ್ರೆ ಹೊರಟಿದ್ದಾರೆ. ಆರಂಭದಲ್ಲಿ 10 ಜನರೊಂದಿಗೆ ಶುರುವಾಗುವ ಪಾದಯಾತ್ರೆ ಮುಂದೆ ತನ್ನ ಸಂಖ್ಯೆಯನ್ನು ನೂರಕ್ಕೆ, ಸಾವಿರಕ್ಕೆ ಹಿಗ್ಗಿಸಿಕೊಳ್ಳಲಿದೆ ಎಂಬ ನಿರೀಕ್ಷೆ ಮಹಿಮಾ ಅವರದ್ದು. ಅಂದಹಾಗೆ ಈ ಪಾದಯಾತ್ರೆ ಉದ್ದೇಶ ಏನು ಗೊತ್ತಾ?

ಯಾವುದೇ ಸರ್ಕಾರ ಮತ್ತು ಪಕ್ಷದ ವಿರುದ್ಧದಲ್ಲ ಈ ಪಾದಯಾತ್ರೆ. ಕರ್ನಾಟಕ ಕಲ್ಯಾಣ ಹಾಗೂ ಗ್ರಾಮ ಸ್ವರಾಜ್ಯ ಸಾಕಾರದ ಆಶಯ ಹೊತ್ತು ಗಾಂಧಿ ಜಯಂತಿ ದಿನದಿಂದ ಪಾದಯಾತ್ರೆ ನಡೆಸುತ್ತಿರುವುದಾಗಿ ಮಹಿಮಾ ಪಾಟೀಲ್​ ತಿಳಿಸಿದ್ದಾರೆ.

ಮಹಿಮಾ ಜತೆಗೆ ಚಿಕ್ಕಬಳ್ಳಾಪುರದ ಶ್ರೀ ನಿರಂಜನ ದೇಶೀಕೇಂದ್ರ ಸ್ವಾಮೀಜಿ, ಕೆ.ವಿ.ಶಿವರಾಂ, ಸೂರ್ಯ ಪ್ರಕಾಶ್ ಮಹಡೇಕ್ ಇತರರು ಸಾಥ್ ಕೊಡಲಿದ್ದಾರೆ. ಜೆ.ಎಚ್.ಪಟೇಲ್ ಪ್ರತಿಷ್ಠಾನ, ಸಂಯುಕ್ತ ಜನತಾದಳದ ಈ ಕಾರ್ಯಕ್ಕೆ ಜನತಾ ಪರಿವಾರ, ಹೆಗಡೆ-ಪಟೇಲ್-ಬೊಮ್ಮಾಯಿ-ನಜೀರ್ ಸಾಬ್ ಅನುಯಾಯಿಗಳು ಕೈಜೋಡಿಸಿದ್ದಾರೆ.

ಪಾದಯಾತ್ರೆ ಪ್ರತಿದಿನ 20 ಕಿಲೋ ಮೀಟರ್ ಕ್ರಮಿಸಲಿದೆ. ನೆಲಮಂಗಲ, ದಾಬಸ್‌ಪೇಟೆ, ತುಮಕೂರು, ಶಿರಾ ಮಾರ್ಗವಾಗಿ ಸಾಗಲಿದೆ. ಮಾರ್ಗ ಮಧ್ಯೆ ಮಠಗಳಲ್ಲಿ, ಸ್ನೇಹಿತರ ಮನೆಗಳಲ್ಲಿ ತಂಗಲಿದ್ದಾರೆ.

ಇದಾದ ಬಳಿಕ, ನವೆಂಬರ್ ಅಂತ್ಯಕ್ಕೆ ಕಾರಿಗನೂರಿನ ಪಟೇಲ್​ರ ಸಮಾಧಿ ಸ್ಥಳದಿಂದ ಪಾದಯಾತ್ರೆ ಹೊರಟು ಅವರ ಪುಣ್ಯ ಸ್ಮರಣೆ ದಿನ ಡಿಸೆಂಬರ್ 12ರಂದು ಕೂಡಲ ಸಂಗಮ ತಲುಪಲಿದ್ದಾರೆ. 2021ರಲ್ಲಿ ಬೀದರ್‌ನಿಂದ -ಚಾಮರಾಜನಗರಕ್ಕೆ ಪಾದಯಾತ್ರೆಗೆ ಉದ್ದೇಶಿಸಲಾಗಿದೆ.

LEAVE A REPLY

Please enter your comment!
Please enter your name here