ಎಲ್ಲಾ ಅಧಿಕಾರಿಗಳು ತಮ್ಮ ತಮ್ಮ ಕ್ರೀಟಗಳನ್ನು ಮೆರತು ಒಂದು ಸಾಮನ್ಯ ಮನುಷ್ಯನಂತೆ ಕೊರೋನಾ ವೈರಾಣು ನಿಯಂತ್ರಣದಲ್ಲಿ ನಾವು ಎಲ್ಲಾರೂ ಒಂದಾಗಿ ಕೆಲಸ ಮಾಡಬೇಕು ಎಂದು ಜಿಲ್ಲಾ ಅಧಿಕಾರಿ ಮಾಹಂತೇಶ್ ಬೀಳಗಿ ಹೇಳಿದರು.

0

ಎಲ್ಲಾ ಅಧಿಕಾರಿಗಳು ತಮ್ಮ ತಮ್ಮ ಕ್ರೀಟಗಳನ್ನು ಮೆರತು ಒಂದು ಸಾಮನ್ಯ ಮನುಷ್ಯನಂತೆ ಕೊರೋನಾ ವೈರಾಣು ನಿಯಂತ್ರಣದಲ್ಲಿ ನಾವು ಎಲ್ಲಾರೂ ಒಂದಾಗಿ ಕೆಲಸ ಮಾಡಬೇಕು ಎಂದು ಜಿಲ್ಲಾ ಅಧಿಕಾರಿ ಮಾಹಂತೇಶ್ ಬೀಳಗಿ ಹೇಳಿದರು.

ಹರಿಹರ

ನಗರಸಭೆ ಸಭಾಂಗಣದಲ್ಲಿ ನಡೆದ ಕೊರೋನಾ ವೈರನು ನಿಯಂತ್ರಣ ಬಗ್ಗೆ ತಾಲ್ಲೂಕ ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು ಕೊರೋನಾ ನಿಯಂತ್ರಣ ಹಿನ್ನೆಲೆಯಲ್ಲಿ ಕೈಗೊಂಡ ಕ್ರಮಗಳ ಬಗ್ಗೆ ಆರೋಗ್ಯ ಇಲಾಖೆ ,ನಗರಸಭೆ, ಪೊಲೀಸ್ ಇಲಾಖೆ ತಾ ಪಂ ಅಧಿಕಾರಿಗಳಿಂದ ಪರಿಶೀಲನೆ ನಡೆಸಿದರು.

ಭೋತ ಲೇವಲ್ ಟಾಸ್ಕ ಫೋರ್ಸ್ ಕಮಿಟಿಯ ಮತ್ತು ಸಾರ್ವಜನಿಕರ ಸಹಕಾರದೊಂದಿಗೆ ಕೆಲಸ ಮಾಡಿ ಕೊರೋನಾ ವೈರಾಣು ನಿಯಂತ್ರಣಕ್ಕೆ ಆರೋಗ್ಯ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿಯೊಂದಿಗೆ ಎಲ್ಲರೂ ಸಹಕರಿಸಿದಲ್ಲಿ ಮಾತ್ರ ಇದರ ನಿಯಂತ್ರಣ ಸಾಧ್ಯವಾಗುತ್ತದೆ ಹಾಗೂ ವಾರ್ಡ ಸದಸ್ಯರು ಹಾಗೂ ಭೋತ ಲೇವಲ್ ಟಾಸ್ಕ್ ಫೋರ್ಸ ಅರೀವು ಮೂಡಿಸು ಕೆಲಸ ಮಾಡ ಬೇಕು ಎಂದರು

ಪೊಲೀಸ್ ವೃತ ನಿರಕ್ಷರಾದ ಶಿವಪ್ರಸಾದರವರ ಹತ್ತಿರ ಬಂದೋಬಸ್ತ್ ಬಗ್ಗೆ ಮಾಹಿತಿ ಪಡೆದು ಯಾರು ಮಾಸ್ಕ ಹಾಕುವುದಿಲ್ಲ ಹಾಗೂ ರಸ್ತೆಯ ಮೇಲ್ಲೆ ಉಗಳುವುದು ಗುಂಪಾಗಿ ಸೇರುವುದು ಸಮಾಜಿಕ ಅಂತ್ರ ಉಲಂಘನೆ ಮಾಡಿದವರ ಮೆಲ್ಲೆ ಕಟ್ಟು ನಿಟ್ಟಾಗಿ ಕ್ರಮ ಜರುಗಿಸಿ ಎಂದು ಸೂಚಿಸಿದರು.

ಗ್ರಾಮೀಣ ಭಾಗದಲ್ಲಿ ಸಾಮಾಜಿಕ ಅಂತರವನ್ನು ಕಂಡುಕೊಳ್ಳುವ ನಿಟ್ಟಿನಲ್ಲಿ ಎಲ್ಲರೂ ಸ್ವಯಂ ಪ್ರೇರಣೆಯಿಂದ ಮುಂದಾಗಬೇಕಿದೆ. ಕಳೆದ ಸುಮಾರು  ದಿನಗಳಿಂದ ತಾಲ್ಲೂಕು ಮಟ್ಟದ ಅಧಿಕಾರಿಗಳು ನಿರಂತರವಾಗಿ ಗ್ರಾಮೀಣ ಪ್ರದೇಶಗಳಿಗೆ ಭೇಟಿ ನೀಡಿ ಈ ವೈರಾಣು ವಿರುದ್ದ ಜಾಗೃತಿ ಮೂಡಿಸುವಲ್ಲಿ ಸಾಕಷ್ಟು ಪ್ರಯತ್ನ ನಡೆಸಿದ್ದಾರೆ. ನಾನು ಮತ್ತು ಜಿಲ್ಲಾಡಳಿತ  ಕೊರೋನಾ  ನಿಯಂತ್ರಣಕ್ಕೆ ಸಾಕಷ್ಟು ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದರು.

ಅತೀಖ ಸಾಹೇಬರು ಹೇಳಿರುವ ರ್ಯಾಪೀಡ್ ಕಿಟ್ಟಗಳು ಬಗ್ಗೆ ತಾಲ್ಲೂಕು ಅರೋಗ್ಯ ಅಧಿಕಾರಿ ಡಾ.ಚಂದ್ರಮೊಹನ್ ರವರ ಹತ್ತಿರ ಮಾಹಿತಿ ಪಡೆದು  ಮ್ಯಾಕಸೀಂಮ ರ್ಯಾಪೀಡ್ ಕೀಟ್ ಗಳಿಂದ ಕೇಲಸ ಮಾಡಿ ಇದರಿಂದ ಕಂಟೇನ್‍ಮೇಂಟ್ ಜೂನನಲ್ಲಿ ಸೋಂಕಿತರನ್ನ ಪತೆ ಹಚ್ಚುವಲ್ಲಿ ಕೆಲಸ ಮಾಡುತ್ತದೆ ಮತ್ತು ಕೊವೀಡ್ ಆಸ್ಪತ್ರೆಯಲ್ಲಿ ಯಾರೀಗೂ ಫೊನಗಳು ಒಳಗಡೆ ತೆಗದು ಕೊಂಡು ಹೊಗಬಾರದು ಮತ್ತು ಪ್ರೈಮರಿ ಕಾಂಟೇಕ್ಟ್‍ಗೆ ಬಂದವರನ್ನು ರೋಗ ನೀರೋಧಕ ಶಕ್ತಿ ಬೆಳಸಲು ಅವರಿಗೆ ಮಾತ್ರೆಗಳು ನೀಡಿ ಎಂದು ಸೂಚಿಸಿದರು.

ತಾಲೂಕ ಆರೋಗ್ಯ ಅಧಿಕಾರಿ ಡಾ.ಚಂದ್ರಮೊಹನ್ ಮಾತನಾಡಿ ನಮ್ಮ ತಾಲ್ಲೂಕಿಗೆ 100 ಕೀಟಗಳು ನೀಡಿದ್ದಾರೆ ಸರಕಾರಿ ಆಸ್ಪತ್ರೆಗೆ 50 ನಮ್ಮಗೆ 50  ತೇಗೆನ್ ಕೇರಿ ಯಲ್ಲಿ 20 ಕೇಸಗಳು ಇವೆ ನಗರದಲ್ಲಿ 29 ಕಂಟೇನ್ ಮೇಂಟ್ ಜೂನಗಳು ಇದರೆ ಗ್ರಾಮಿಣ ಭಾಗಳಲ್ಲಿ 18 ಜೂನಗಳು ಇವೆ ಎಂದು ಮಾಹಿತಿ ನೀಡಿದರು,

ನಗರ ಹಾಗೂ ಗ್ರಾಮೀಣ ಪ್ರದೇಶ ಗಳಲ್ಲಿ ಆರೋಗ್ಯ ಇಲಾಖೆಯೂ ಸೇರಿದಂತೆ ಎಲ್ಲಾ ಇಲಾಖೆಗಳು ಜಾಗೃತಿ ಮೂಡಿಸುವಲ್ಲಿ ಯಶಸ್ವಿಯಾಗಿದ್ದರೂ ಗ್ರಾಮೀಣ ಭಾಗದ ಬಹುತೇಕ ಜನತೆಗೆ ಕೊರೋನಾ ವೈರಾಣು ಅಪಾಯದ ಬಗ್ಗೆ ಹೆಚ್ಚು ತಿಳಿದಿಲ್ಲ. ಆರೋಗ್ಯ ಇಲಾಖೆ ಇತರೆ ಇಲಾಖೆಗಳ ಸಹಯೋಗದೊಂದಿಗೆ ಜನರ ಮನಪರಿವರ್ತನೆಗೆ ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎಂದರು.

ನಂತರ ಜಿಲ್ಲಾ ವರಿಷ್ಠಾಧಿಕಾರಿ ಹನುಮಂತರಾಯ ಮಾತನಾಡಿ ಕರೋನಾ ವೈರಸ್ ನಿಯಂತ್ರಣ ಕ್ರಮಗಳನ್ನು ಎಲ್ಲರೂ ಚಾಚು ತಪ್ಪದೇ ಪಾಲಿಸಬೇಕು ಮತ್ತು ಯಾರೂ ಮಾಸ್ಕ ಹಾಕುವುದಿಲ್ಲ ಅಂತಹ ವೆಕ್ತಿಗಳಿಗೆ ಕೆಸು ದಾಖಿಲು ಮಾಡಿ ದಂಡಾ ಹಾಕಿ ಸಾಮಾಜಿಕ ಅಂತರ ಕಾಪಾಡಿಸಿ ಕಂಟೇನ್ ಮೇಂಟ್ ಜೂನನಿಂದ ಯಾರು ಹೊರಗೆ ಬರದಿರುವ ಹಾಗೆ ನೊಡಿಕೊಳ್ಳಿ ಯಾರದರು ಉಲಂಘನೆ ಮಾಡಿದರೆ ಅವರ ಮೇಲೆ ಕೇಸು ದಾಖಿಲೀಸಿ ಅವರಿಗೆ ಜೈಲು ಕಳುಹಿಸಿ ಎಂದು ತಿಳಿಸಿದರು.

 

ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಮಾತನಾಡಿ ರೋಗಲಕ್ಷಣಗಳು ಕಂಡುಬಂದರೆ ತಕ್ಷಣ ಹತ್ತಿರದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ತಿಳಿಸಿ ಅದೇ ರೀತಿ ಸಾರ್ವಜನಿಕರಿಗೆ ತಪ್ಪು ಮಾಹಿತಿಯನ್ನು ನೀಡದಂತೆ ತಿಳಿಸುತ್ತಾ ಕೊರೊನಾ ನಿಯಂತ್ರಣದ ಬಗ್ಗೆ ಅರಿವು ಮೂಡಿಸುವಂತೆ ಸೂಚಿಸಿದರು. ಯಾವುದೇ ವದಂತಿಗಳನ್ನು ನಂಬಬಾರದು ಮತ್ತು ಹರಡಬಾರದು ಹಾಗೂ ಸಮಾಜಿಕ ಜಾಲತಾಣಗಳಲ್ಲಿ ಬರುವ ಸಂದೇಶಗಳನ್ನು ಪೂರ್ವಾಪರ ತಿಳಿದುಕೊಳ್ಳದೇ ಹಂಚಿಕೊಳ್ಳಬಾರದು ಎಂದು  ತಾಲ್ಲೂಕ ಪಂಚಾಯತ್ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಲಕ್ಷ್ಮೀಪತಿರವರಿಗೆ ಸೂಚಿಸಿದರು

 

 

ನಂತರ ಶಾಸಕ ಎಸ್ ರಾಮಪ್ಪ ಮಾತನಾಡಿ ಎಲ್ಲಾ ಅಧಿಕಾರಿಗಳು ಕೊರೋನಾ ವೈರಾಣು ನಿಯಂತ್ರಣದಲ್ಲಿ ಕೆಲಸ ಮಾಡುತ್ತಿದ್ದಾರೆ ಕೆಲವುರು ಮಾಡುತ್ತಿಲ್ಲ ಅವರು ಸ್ವಲ್ಪ ಜಾಗೃತರಾಗಿ ಕೆಲಸ ಮಾಡ ಬೇಕು ತಾಲ್ಲೂಕಿನ  ಗ್ರಾಮೀಣ ಭಾಗದ ವಿದ್ಯಾವಂತ ಯುವಕ, ಯುವತಿಯರು ಈ ಬಗ್ಗೆ ಜಾಗೃತಿಗೊಳಿಸುವಲ್ಲಿ ಮುಂದಾಗಬೇಕೆಂದರು. ಕೊರೋನಾ ವೈರಾಣು ನಿಯಂತ್ರಣಕ್ಕೆ ಪಕ್ಷ ಭೇದ ಮರೆತು ಎಲ್ಲರೂ ದೇಶದ ಹಿತಕ್ಕಾಗಿ ಎಲ್ಲರ ಆರೋಗ್ಯಕ್ಕಾಗಿ ಕೆಲಸ ಮಾಡಿ ಎಂದರು

 

ಈ ಸಬೆಯಲ್ಲಿ ಜಿಲ್ಲಾ ಸರ್ವಕ್ಷಣಾದಿಕಾರಿ ಡಾ.ರಾಘವನ್,ತಾಲ್ಲೂಕ ದಂಡಾಧಿಕಾರಿ ಕೆ.ಬಿ ರಾಮಚಂದ್ರಪ್ಪ,,ಡಾ.ನಟರಾಜ,  ನಗರಸಭೆ ಅಯುಕ್ತೆ ಎಸ್ ಲಕ್ಷ್ಮೀ,ಪಿಎಸ್‍ಐ ರವಿಕುಮಾರ,ತಾಲ್ಲೂಕಿನ ವಿವಿಧ ಇಲಾಖೆಯ ಅಧಿಕಾರಿಗಳು ನಗರಸಭೆ ಸದಸ್ಯರು ಹಾಗೂ ಸಿಬ್ಬಂದಿಗಳು ಪಾಲ್ಗೋಂಡಿದ್ದರು.

LEAVE A REPLY

Please enter your comment!
Please enter your name here