ಎಲ್ ಎಸಿ ಬಳಿ ವಾಯುನೆಲೆಗಳು, ವಾಯು ರಕ್ಷಣಾ ಸ್ಥಾನ, ಹೆಲಿಪೋರ್ಟ್ ಗಳನ್ನು ದ್ವಿಗುಣಗೊಳಿಸುತ್ತಿರುವ ಚೀನಾ: ವರದಿ

0

2017ರಲ್ಲಿ ಡೊಕ್ಲಾಮ ವಿವಾದ ಸಂಭವಿಸಿದ ನಂತರ ವಾಸ್ತವ ನಿಯಂತ್ರಣ ರೇಖೆ ಬಳಿ ಐದು ಹೆಲಿಪೋರ್ಟ್ ಗಳು, ಐದು ಶಾಶ್ವತ ವಾಯು ರಕ್ಷಣಾ ಸ್ಥಾನಗಳು, ಮೂರು ವಾಯುನೆಲೆಗೆಳು ಸೇರಿದಂತೆ ಕನಿಷ್ಠ 13 ಹೊಸ ಮಿಲಿಟರಿ ಸ್ಥಾನಗಳ ನಿರ್ಮಾಣ ಕಾರ್ಯವನ್ನು ಚೀನಾ ಆರಂಭಿಸಿದೆ ಎಂದು ಜಾಗತಿಕ ಭದ್ರತಾ ಕನ್ಸಲ್ ಟೆನ್ಸಿ ಸ್ಟಾರ್ಟ್ ಫಾರ್ ತಿಳಿಸಿದೆ.

ಪೂರ್ವ ಲಡಾಖ್ ನಲ್ಲಿ ಮೇ ತಿಂಗಳ ಆರಂಭದಲ್ಲಿ ಗಡಿ ವಿವಾದ ತಲೆದೋರಿದ ಬಳಿಕ ನಾಲ್ಕು ಹೊಸ ಹೆಲಿಪೋರ್ಟ್ ಗಳ ನಿರ್ಮಾಣವನ್ನು ಪ್ರಾರಂಭಿಸಲಾಗಿದೆ ಎಂದು ವರದಿಯಲ್ಲಿ ಹೇಳಲಾಗಿದೆ.

2017 ರ ಡೋಕ್ಲಾಮ್ ಬಿಕ್ಕಟ್ಟು ಚೀನಾದ ಕಾರ್ಯತಂತ್ರದ ಉದ್ದೇಶಗಳನ್ನು ಬದಲಿಸಿದಂತೆ ತೋರುತ್ತಿದ್ದು, ಕಳೆದ ಮೂರು ವರ್ಷಗಳಲ್ಲಿ ಒಟ್ಟು ವಾಯುನೆಲೆಗಳು, ವಾಯು ರಕ್ಷಣಾ ಸ್ಥಾನಗಳು ಮತ್ತು ಹೆಲಿಪೋರ್ಟ್‌ಗಳನ್ನು ದ್ವಿಗುಣಗೊಳಿಸುತ್ತಿದೆ ಎಂದು ತಿಳಿಸಲಾಗಿದೆ.

ಭದ್ರತಾ ತಜ್ಞ ಸಿಮ್ ಟ್ಯಾಕ್ ಬರೆದಿರುವ ವರದಿ ಇಂದು ಬಿಡುಗಡೆಯಾಗಿದ್ದು, ಇತ್ತೀಚಿನ ವಿವಾದಗಳು ಉಭಯ ದೇಶಗಳ ನಡುವೆ ಪ್ರಾದೇಶಿಕ ಉದ್ವಿಗ್ನತೆಯನ್ನು ಹೆಚ್ಚಿಸುತ್ತಿದ್ದಂತೆ ಕಾಣುತ್ತಿದ್ದು, ಚೀನಾದ ಈ ನಿರ್ಮಾಣ ಕಾರ್ಯವು ಭವಿಷ್ಯದ ಮಿಲಿಟರಿ ಸಾಮರ್ಥ್ಯವನ್ನು ಯೋಜಿಸಿದಂತೆ ಕಾಣುತ್ತಿದೆ ಎಂದು ವರದಿಯಲ್ಲಿ ಹೇಳಲಾಗಿದೆ.

ಭಾರತವು ಇತ್ತೀಚಿಗೆ ರಫೆಲ್ ಯುದ್ಧ ವಿಮಾನವನ್ನು ಖರೀದಿಸಿರುವುದರಿಂದ ಸ್ವಲ್ಪ ನಿರಾಳವಾದಂತೆ ಕಾಣುತ್ತಿದೆ. ಆದರೆ, ಸ್ವದೇಶಿ ಉತ್ಪಾದನೆ ಮತ್ತು ವಿದೇಶಿ ಸ್ವಾಧೀನಗಳು ನಿಜವಾಗಿಯೂ ಭಾರತದ ವಾಯುಪಡೆ ಸಾಮರ್ಥ್ಯವನ್ನು ಬಲಪಡಿಸಲಿದೆ.

LEAVE A REPLY

Please enter your comment!
Please enter your name here