ಎಸ್/ಎಸ್ಟಿ ಪ್ರಕರಣದಲ್ಲಿ ತಾರತಮ್ಯ ಧೋರಣೆ – ಚಿಕ್ಕಪೇಟೆ ಎಸಿಪಿ ವಿರುದ್ದ ನಾಗರೀಕ ಹಕ್ಕು ಜಾರಿ ನಿರ್ದೇಶನಾಲಯಕ್ಕೆ ದೂರು

0

ಎಸ್/ಎಸ್ಟಿ ಪ್ರಕರಣದಲ್ಲಿ ತಾರತಮ್ಯ ಧೋರಣೆ – ಚಿಕ್ಕಪೇಟೆ ಎಸಿಪಿ ವಿರುದ್ದ ನಾಗರೀಕ ಹಕ್ಕು ಜಾರಿ ನಿರ್ದೇಶನಾಲಯಕ್ಕೆ ದೂರು

ಬೆಂಗಳೂರು ಜುಲೈ 29: ಸಾಮಾಜಿಕ ಜಾಲತಾಣಗಳಲ್ಲಿ ದಲಿತ ವಿರೋಧಿ ಪೋಸ್ಟ್ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಉಪ್ಪಾರಪೇಟೆ ಪೊಲೀಸ್ ಠಾಣೆಯಲ್ಲಿ ಪರಿಶಿಷ್ಟರ ಮೇಲಿನ ದೌರ್ಜನ್ಯಕ್ಕೆ ಸಂಬಂಧಿಸಿದಂತೆ ನೀಡಿದ ದೂರಿನಲ್ಲಿ ತಾರತಮ್ಯ ಧೋರಣೆ ಹಾಗೂ ನಿರ್ಲಕ್ಷತೆ ತೋರಿಸಿದ್ದಾರೆ ಎಂದು ಚಿಕ್ಕಪೇಟೆ ವಿಭಾಗದ ಎಸಿಪಿ ಅವರ ವಿರುದ್ದ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಯ ರಾಜ್ಯಾಧ್ಯಕ್ಷರಾದ ಡಾ ಸಿ ಎಸ್ ರಘು ಹಾಗೂ ಕೆ. ಅಯ್ಯಪ್ಪ ಚಳುವಳಿ ಅವರು ನಾಗರೀಕ ಹಕ್ಕು ಜಾರಿ ನಿರ್ದೇಶನಾಲಯಕ್ಕೆ ದೂರು ಸಲ್ಲಿಸಿದ್ದಾರೆ.
ಸಾಮಾಜಿಕ ಜಾಲ ತಾಣದಲ್ಲಿ ದಲಿತ ರ ಬಗ್ಗೆ ಅವಹೇಳನಕಾರಿಯಾಗಿ ಪೋಸ್ಟ್ ಮಾಡಿದ್ದ ವ್ಯಕ್ತಿಯ ವಿರುದ್ದ ಉಪ್ಪಾರಪೇಟೆ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಲಾಗಿತ್ತು. ಈಈ ಪ್ರಕರಣದಲ್ಲಿ ನಾಗರೀಕ ಹಕ್ಕು ಜಾರಿ ನಿರ್ದೇಶನಾಲಯದ ಹಾಗೂ ಬೆಂಗಳೂರು ನಗರ ಪೊಲೀಸ್ ಆಯುಕ್ತರ ಕಾನೂನು ಕೋಶದ ಸೂಚನೆ ಮೆರೆಗೆ ಒಂದು ತಿಂಗಳ ನಂತರ ದೂರು ದಾಖಲಿಸಲಾಗಿತ್ತು. ಎಫ್.ಐ.ಆರ್ ದಾಖಲಾದ ನಂತರವೂ ಆರೋಪಿಯು ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿಯಾಗಿ ಪೋಸ್ಟ್ ಮಾಡುವುದನ್ನು ಮುಂದುವರೆಸಿದ್ದ. ಅದನ್ನು ಪ್ರಿಂಟ್ ಔಟ್ ಮುಖಾಂತರ ಮತ್ತೊಮ್ಮೆ ಜುಲೈ 22 ರಂದು ಎಸಿಪಿ ಅವರ ಗಮನಕ್ಕೆ ತರಲಾಗಿತ್ತು. ಇದಕ್ಕೆ ಸಂಬಂಧಿಸಿದಂತೆ ಶಿವಮೊಗ್ಗ ಹಾಗೂ ಚಿಕ್ಕಮಗಳೂರು ನಗರದಿಂದ ಆರೋಪಿಯನ್ನು ಬಂಧಿಸಿ ಕರೆತರಲಾಗಿತ್ತು. ಆದರೆ, ಆ ಆರೋಪಿಯನ್ನು ನ್ಯಾಯಾಲಯಕ್ಕೂ ಹಾಜರು ಪಡಿಸದೆ ವಿಚಾರಣೆ ನೆಪದಲ್ಲಿ ಬಿಟ್ಟು ಕಳುಹಿಸಿದ್ದಾರೆ. ಸರಿಯಾಗಿ ತನಿಖೆ ನಡೆಸದೆ ಕರ್ತವ್ಯಲೋಪವೆಸಗಿದ್ದಾರೆ ಎಂದು ದಲಿತ ಸಂಘರ್ಷ ಸಮಿತಿ ರಾಜ್ಯಾಧ್ಯಕ್ಷ ಡಾ ಸಿ ಎಸ್ ರಘು ಹೇಳಿದರು.
ಈ ಬಗ್ಗೆ ನಾಗರೀಕ ಹಕ್ಕು ಜಾರಿ ನಿರ್ದೇಶನಾಲಯಕ್ಕೆ ದೂರು ಸಲ್ಲಿಸಿದ ಅವರು ಈ ಬಗ್ಗೆ ಕ್ರಮ ಕೈಗೊಂಡು ಆರೋಪಿಗೆ ತಕ್ಕ ಶಿಕ್ಷೆಯನ್ನು ನೀಡಬೇಕು. ಇಲ್ಲದಿದ್ದಲ್ಲಿ ಪ್ರತಿಭಟನೆ ನಡೆಸಿ ಮಾನ್ಯ ಗೃಹ ಸಚಿವರಿಗೆ ಮನವಿ ಸಲ್ಲಿಸಿ ಸರಕಾರದ ಗಮನ ಸೆಳೆಯುವುದಾಗಿ ಎಚ್ಚರಿಕೆ ನೀಡಿದರು.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ
ಡಾ. ಸಿ ಎಸ್ ರಘು

LEAVE A REPLY

Please enter your comment!
Please enter your name here