ಐಂದ್ರಿತಾ, ದಿಗಂತ್ ರಿಂದ ಸಾಕಷ್ಟು ಮಾಹಿತಿ ಸಂಗ್ರಹ: ಸಿಸಿಬಿ ಮುಖ್ಯಸ್ಥ ಸಂದೀಪ್ ಪಾಟೀಲ್

0

ಸ್ಯಾಂಡಲ್ ವುಡ್ ನಲ್ಲಿ ಡ್ರಗ್ಸ್ ನಂಟು ಪ್ರಕರಣಕ್ಕೆ ಸಂಬಂಧಿಸಿ ಸ್ಟಾರ್ ದಂಪತಿಗಳಾದ ಐಂದ್ರಿತಾ ರೇ ಹಾಗೂ ದಿಂಗಂತ್ ಸಿಸಿಬಿ ಅಧಿಕಾರಿಗಳು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದ್ದು, ಮೊದಲ ಹಂತದ ವಿಚಾರಣೆ ಮುಕ್ತಾಯವಾಗಿದೆ.

ಐಂದ್ರಿತಾ ಮತ್ತು ದಿಗಂತ್ ರನ್ನು ವಿಚಾರಣೆಗೆ ಒಳಪಡಿಸಿ ಸಾಕಷ್ಟು ಮಾಹಿತಿ ಕಲೆಹಾಕಲಾಗಿದೆ ಎಂದು ಸಿಸಿಬಿ ಮುಖ್ಯಸ್ಥರು ತಿಳಿಸಿದ್ದಾರೆ.

ಡ್ರಗ್ಸ್ ಪ್ರಕರಣದಲ್ಲಿ ದಿಗಂತ್ ಮತ್ತು ಐಂದ್ರಿತಾ ಅವರಿಗೆ ನೋಟಿಸ್ ನೀಡಲಾಗಿತ್ತು. ಇಂದು ವಿಚಾರಣೆಯಲ್ಲಿ ಸಾಕಷ್ಟು ಮಾಹಿತಿ ಕಲೆ ಹಾಕಲಾಗಿದ್ದು ಮುಂದೆ ಇನ್ನೇನಾದರೂ ಹೆಚ್ಚಿನ ಮಾಹಿತಿ ಅಗತ್ಯ ಕಂಡು ಬಂದಲ್ಲಿ ಮತ್ತೊಮ್ಮೆ ಸಮನ್ಸ್ ನೀಡಿ ಕರೆಸಿಕೊಳ್ಳುತ್ತೇವೆ ಎಂದು ಅವರು ಹೇಳಿದ್ದಾರೆ.

ಇದೇ ವೇಳೆ ಪ್ರಕರಣ ಸಂಬಂಧ ಆಫ್ರಿಕನ್ ಪ್ರಜೆ ಬೆನಾಲ್ಡ್ ಉಡೆನ್ನ ಎಂಬಾತನನ್ನು ಕಾಟನ್ ಪೇಟೆ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಬಂಧಿಸಿದ್ದಾಗಿ ಸಂದೀಪ್ ಪಾಟೀಲ್ ಹೇಳಿದ್ದಾರೆ. ಬಂಧಿತನಿಂದ ಕೊಕೇನ್ ಕೂಡ ವಶಕ್ಕೆ ಪಡೆದಿದ್ದಾರ ಎಂದು ವರದಿಯಾಗಿದೆ.

LEAVE A REPLY

Please enter your comment!
Please enter your name here