ಐಗಳಿ ವಿದ್ಯುತ್ ಕೇಂದ್ರದಲ್ಲಿ, ವಿದ್ಯುತ್ ಅವಘಡ ಇಬ್ಬರು ಪವರ ಮ್ಯಾನಗಳಿಗೆ ಗಾಯ.

0

ಅಥಣಿ ವರದಿ

ಐಗಳಿ ವಿದ್ಯುತ್ ಕೇಂದ್ರದಲ್ಲಿ, ವಿದ್ಯುತ್ ಅವಘಡ ಇಬ್ಬರು ಪವರ ಮ್ಯಾನಗಳಿಗೆ ಗಾಯ.

 

ಅಥಣಿ: ತಾಲೂಕಿನ ಐಗಳಿ ಗ್ರಾಮದ ವಿದ್ಯುತ್ ಸರಬರಾಜು ಕೇಂದ್ರದ ಆವರಣದಲ್ಲಿ ವಿದ್ಯುತ್ ಅವಘಡ ಸಂಭವಿಸಿದೆ ಇಬ್ಬರು ಪವರ್ ಮ್ಯಾನ್ ಗಳ ಸ್ಥಿತಿ ಗಂಭೀರವಾಗಿದೆ.

 

ಪವರ್ ಮ್ಯಾನಗಳಾದ ಆಕಾಶ ಕುಲಕರ್ಣಿ ಗಂಭೀರವಾಗಿ ಗಾಯಗೊಂಡಿದ್ದಾರೆ, ಇನ್ನೋರ್ವ ರಾವಸಾಬ ಜಾಧವಗೆ ಸಣ್ಣ ಪುಟ್ಟ ಗಾಯಗಳಾಗಿವೆ ಎಂದು ತಿಳಿದುಬಂದಿದೆ.

 

ಅಥಣಿ ತಾಲೂಕಿನ ಐಗಳಿ ೧೧೦ ವಿದ್ಯುತ್ ಪ್ರಸರಣ ಕೇಂದ್ರದ ಮುಂಭಾಗದ ವಿದ್ಯುತ್ ಸರಬರಾಜಿನಲ್ಲಿ ತೊಂದರೆ ಕಾಣಿಸಿದಾಗ ಕಂಬದ ಮೇಲೆ ರಿಪೇರಿ ಕಾರ್ಯ ನಡೆಸುವಾಗ ವಿದ್ಯುತ್ ಹರಿದು ಗಾಯಗೊಂಡಿದ್ದಾರೆ.

 

ಗಾಯಗೊಂಡವರಿಗೆ ಸ್ಥಳೀಯ ಅಥಣಿ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಪಡೆದು ಬೆಳಗಾವಿ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಮಾಹಿತಿ ತಿಳಿದು ಬಂದಿದೆ. ಐಗಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ  ಘಟನೆ ಜರುಗಿದೆ.

 

ವರದಿ: ಡಾ.ಆರ್ ಎಸ್ ದೊಡ್ಡನಿಂಗಪ್ಪಗೋಳ ಅಥಣಿ

LEAVE A REPLY

Please enter your comment!
Please enter your name here