ಐಪಿಎಲ್​​ನಲ್ಲಿ ಹೆಚ್ಚು ಕಿಲೋ ಮೀಟರ್​ ಕ್ರಮಿಸಿದ ಆಟಗಾರ ಯಾರು ಗೊತ್ತಾ..?

0

ಟಿ20 ಕ್ರಿಕೆಟ್​​ ಲೀಗ್​ ಅಂದಾಕ್ಷಣ ನಮ್ಮ ಕಣ್ಮುಂದೆ ಬರುವುದು ಬ್ಯಾಟ್ಸ್​ಮನ್​​ಗಳು ಸಿಡಿಸುವ ಸಿಕ್ಸರ್​ಗಳು ಹಾಗೂ ಬೌಂಡರಿಗಳು. ಹೌದು..! ಸಿಕ್ಸರ್​, ಬೌಂಡರಿಗಳು ಪಂದ್ಯದ ಗತಿಯನ್ನೇ ಬದಲಿಸೋದ್ರಲ್ಲಿ, ಯಾವುದೇ ಅನುಮಾನ ಇಲ್ಲ. ಆದ್ರೆ ಕ್ರಿಕೆಟ್​​ ಅನ್ನೋ ಜಂಟಲ್​ಮೆನ್​ ಗೇಮ್​​ನಲ್ಲಿ ಸಿಂಗಲ್ಸ್​, ಡಬಲ್ಸ್​, ಟ್ರಿಪಲ್ಸ್​​ ಕೂಡ ಮಹತ್ವದ ಪಾತ್ರ ವಹಿಸುತ್ತವೆ. ಕ್ರಿಕೆಟ್​​ನ ಯಾವುದೇ ಫಾರ್ಮೆಟ್​ ಆಗಲಿ, ಅಲ್ಲಿ ಸಿಂಗಲ್ಸ್ ಹಾಗೂ ಡಬಲ್ಸ್​ ರನ್​ಗಳು ಹೆಚ್ಚು ಮಹತ್ವ ಪಡೆದಿದೆ. ಇದಕ್ಕೆ ಕಾರಣ ಪ್ರತಿ ಎಸೆತದಲ್ಲಿ ಡಿಫೆನ್ಸ್​ ಮಾಡುತ್ತಾ ಒಂದೊಂದು, ಎರಡೂ ರನ್ ಕಲೆಹಾಕುವುದರ ಜೊತೆಗೆ, ಒಂದು ಬೌಂಡರಿ ಬಾರಿಸಿದ್ರೆ ಸಾಕು ಎದುರಾಳಿ ತಂಡದ ಮೇಲೆ ಒತ್ತಡ ಹೇರುವುದರ ಜೊತೆಗೆ, ಪಂದ್ಯವನ್ನ ಹಿಡಿತ ಸಾಧಿಸುವುದರಲ್ಲಿ ಎರಡು ಮಾತಿಲ್ಲ. ಹಾಗಾದ್ರೆ ಐಪಿಎಲ್ ಟೂರ್ನಿಯಲ್ಲಿ ಸಿಂಗಲ್ಸ್​, ಡಬಲ್ಸ್​​, ಟ್ರಿಪಲ್​ ಓಟದಿಂದ ಹೆಚ್ಚು ರನ್ ಕಲೆಹಾಕಿದ ಹಾಗೂ 22 ಯಾರ್ಡ್ಸ್​ನಲ್ಲಿ ಹೆಚ್ಚು ಕಿಲೋ ಮೀಟರ್ ಕ್ರಮಿಸಿದ ಆ ಆಟಗಾರರು ಯಾರು?

1. ವಿರಾಟ್ ಕೊಹ್ಲಿ – 47.31 ಕಿಲೋ ಮೀಟರ್​​
ರಾಯಲ್​​ ಚಾಲೆಂಜರ್ಸ್​ ಬೆಂಗಳೂರು ತಂಡದ ನಾಯಕ ವಿರಾಟ್​ ಕೊಹ್ಲಿ, ಕ್ರಿಕೆಟ್​​​ನ ಎಲ್ಲಾ ಫಾರ್ಮೆಟ್​ನಲ್ಲೂ ಕಿಂಗ್​​. ಸಿಕ್ಸರ್​, ಬೌಂಡರಿ ಬಾರಿಸುವುದರಲ್ಲೇ ಅಲ್ಲ, ಪ್ರತಿಯೊಂದು ಎಸೆತದಲ್ಲಿ ಸಿಂಗಲ್ ಅಂಡ್​ ಡಬಲ್ ರನ್​​​ ಕದಿಯೋದ್ರಲ್ಲ್ಲೂ ಕೊಹ್ಲಿ ನಿಸ್ಸೀಮಾ. ಇದರಿಂದಲೇ ಗೊತ್ತಾಗುತ್ತೆ ಅವ್ರ ಫಿಟ್​ನೆಸ್​​ ಲೆವೆಲ್ ಏನು ಅಂತಾ.! ಒಂದೇ ಸೀಸನ್​​ನಲ್ಲಿ 4 ಶತಕಗಳನ್ನೊಳಗೊಂಡ 973 ರನ್ ಚಚ್ಚಿದ್ದ ವಿರಾಟ್​, 22 ಯಾರ್ಡ್​ನ ಸಿಂಗಲ್ಸ್​, ಡಬಲ್ಸ್​​ನಲ್ಲಿ ಅತಿ ಹೆಚ್ಚು ರನ್​ ಕಲೆಹಾಕಿದ ಆಟಗಾರ. 177 ಪಂದ್ಯಗಳಿಂದ 5,412 ರನ್​ ಬಾರಿಸಿರುವ ಕೊಹ್ಲಿ, 480 ಬೌಂಡರಿ​​, 190 ಸಿಕ್ಸರ್​​ಗಳ ಮೂಲಕ 3060 ರನ್​ ಕಲೆಹಾಕಿದ್ದಾರೆ. ನಾನ್​​ ಬೌಂಡರಿ ಮೂಲಕ 2352 ರನ್​ ಕಲೆಹಾಕಿರುವ ಕೊಹ್ಲಿ 47.3 ಕಿಲೋ ಮೀಟರ್​ ದೂರ ಕ್ರಮಿಸಿದ್ದಾರೆ…

2. ಸುರೇಶ್​ ರೈನಾ – 44.90 ಕಿಲೋ ಮೀಟರ್​
ಐಪಿಎಲ್ ಟೂರ್ನಿಯಲ್ಲಿ ಕನ್ಸಿಸ್ಟೆನ್ಸಿ ಬ್ಯಾಟಿಂಗ್ ಮೂಲಕ ಗಮನ ಸೆಳೆದ ಸುರೇಶ್​ ರೈನಾ, ಚೆನ್ನೈ ಸೂಪರ್​ ಕಿಂಗ್ಸ್​ ತಂಡದ ಆಧಾರ ಸ್ಥಂಭ ಕೂಡ ಹೌದು.. ಪ್ರತಿ ಸೀಸನ್​​ನಲ್ಲಿ 350ಕ್ಕೂ ಹೆಚ್ಚು ರನ್​​ ಗಳಿಸಿದ ಐಪಿಎಲ್​​ನ ಏಕೈಕ ಆಟಗಾರ ರೈನಾ. 22 ಯಾರ್ಡ್​ನಲ್ಲಿ 44.90 ಕಿಲೋ ಮೀಟರ್​​ ಕ್ರಮಿಸಿದ್ದಾರೆ. ಇನ್ನು ಐಪಿಎಲ್​​ನಲ್ಲಿ 193 ಪಂದ್ಯಗಳನ್ನಾಡಿರುವ ರೈನಾ, 5368 ರನ್ ಕಲೆಹಾಕಿದ್ದಾರೆ. 493 ಬೌಂಡರಿ, 194 ಸಿಕ್ಸರ್​​​ಗಳ ಮೂಲಕ 3136 ರನ್ ಕಲೆಹಾಕಿದ್ರೆ. ನಾನ್ ಬೌಂಡರಿಗಳ ಮೂಲಕ 2232 ರನ್ ಕಲೆಹಾಕಿ 44,9 ಕಿಲೋ ಮೀಟರ್​ ಕ್ರಮಿಸಿದ್ದಾರೆ. ಈ ಮೂಲಕ ಐಪಿಎಲ್​​ನಲ್ಲಿ ಹೆಚ್ಚು ಕಿಲೋ ಮೀಟರ್​ ಕ್ರಮಿಸಿದ 2ನೇ ಆಟಗಾರ ಎನಿಸಿಕೊಂಡಿದ್ದಾರೆ..

3. ರೋಹಿತ್​ ಶರ್ಮಾ – 40.43 ಕಿಲೋ ಮೀಟರ್​​
ಹಿಟ್​​ಮ್ಯಾನ್​​ ರೋಹಿತ್​ ಶರ್ಮಾ, ಐಪಿಎಲ್​​ನ ಸ್ಟಾರ್​​ ಪರ್ಫಾಮರ್​​​ ಆಯಂಡ್ ಮುಂಬೈ ಇಂಡಿಯನ್ಸ್​ನ​ ಸಕ್ಸಸ್​ ಫುಲ್ ಕ್ಯಾಪ್ಟನ್, ಓಪನರ್, ಮಿಡ್ಲ್​ ಆರ್ಡರ್​​ನಲ್ಲಿ ಬ್ಯಾಟ್​ ಬೀಸಿರುವ ರೋಹಿತ್​, ಐಪಿಎಲ್​​ ಟೂರ್ನಿಯಲ್ಲಿ ವಿಕೆಟ್​​ ನಡುವೆ 40 ಕಿಲೋ ಮೀಟರ್​​ ಕ್ರಮಿಸಿದ 3ನೇ ಆಟಗಾರ. 188 ಪಂದ್ಯಗಳಿಂದ 4898 ರನ್​ ಕಲೆಹಾಕಿರುವ ಹಿಟ್​​​​​​​​​​​ಮ್ಯಾನ್, 431 ಬೌಂಡರಿ, 194 ಸಿಕ್ಸರ್​​ಗಳಿಂದ 2888 ರನ್ ಬಾರಿಸಿದ್ರೆ. ಬೌಂಡರಿ ಇಲ್ಲದೆ 2010 ರನ್ ಕಲೆಹಾಕಿದ್ದಾರೆ. ಈ ಮೂಲಕ ರನ್ನಿಂಗ್​ ಬಿಟ್​ವೀನ್​​​ ದಿ ವಿಕೆಟ್ಸ್​​ನಲ್ಲಿ​ 40.4 ಕಿಲೋ ಮೀಟರ್​ ಕ್ರಮಿಸಿದ್ದಾರೆ..

4. ಎಮ್​​.ಎಸ್​​.ಧೋನಿ – 40.03 ಕಿಲೋ ಮೀಟರ್​​
ಮಹೇಂದ್ರ ಸಿಂಗ್ ಧೋನಿ, ಈ ಹೆಸರಿಗೆ ಪರಿಚಯಿಸುವ ಅವಶ್ಯಕತೆಯೇ ಬೇಕಿಲ್ಲ. ನಾಯಕನಾಗಿ ಯೆಲ್ಲೋ ಆರ್ಮಿಗೆ 3 ಬಾರಿ ಐಪಿಎಲ್​ ಕಿರೀಟ, 9 ಬಾರಿ ಫೈನಲ್​​ಗೆ ಕೊಂಡೊಯ್ದ ಏಕೈಕ ನಾಯಕ ಅಂದ್ರೆ ಅದು ಮಾಹಿ.​​​​ 12 ಸೀಸನ್​​ಗಳಿಂದ ಒಮ್ಮೆಯೂ ಲೀಗ್​ ಹಂತದಿಂದ ಹಿಂತಿರುಗದ ಏಕೈಕ ತಂಡ ಕೂಡ ಹೌದು. ನಾಯಕನಾಗಿ ಮಾತ್ರವಲ್ಲ ಸಿಂಗಲ್ಸ್​, ಡಬಲ್ಸ್​ ರನ್ ಕದಿಯೋದ್ರಲ್ಲಿ ಧೋನಿಗೆ ಸರಿಸಮ ಯಾರು ಇಲ್ಲ.. ಸಿಂಗಲ್​ ಅನ್ನ ಡಬಲ್​ ರನ್ ಆಗಿ ಕನ್ವರ್ಟ್​ ಮಾಡೋದು 39 ವರ್ಷದ ಯಂಗ್​ ಮ್ಯಾನ್​​ಗೆ ಮಾತ್ರ ಸಾಧ್ಯ. 190 ಮ್ಯಾಚ್​​ಗಳಿಂದ 4432 ರನ್ ಕಲೆಹಾಕಿರುವ ಮಹೇಂದ್ರ ಸಿಂಗ್ ಧೋನಿ, 297 ಬೌಂಡರಿ, 209 ಸಿಕ್ಸರ್​ ಮೂಲಕ 2442 ರನ್ ಬಾರಿಸಿದ್ರೆ. ಬೌಂಡರಿ ಇಲ್ಲದೆ 1990 ರನ್ ಕಲೆಹಾಕಿದ್ದಾರೆ.. ಈ ಮೂಲಕ ವಿಕೆಟ್​ ನಡುವೆ 40 ಕಿಲೋ ಮೀಟರ್ ಕ್ರಮಿಸಿದ್ದಾರೆ.​

5. ಶಿಖರ್ ಧವನ್- 38.4 ಕಿಲೋ ಮೀಟರ್

ಇನ್ನು ವಿರಾಟ್​ ಕೊಹ್ಲಿ, ಸುರೇಶ್​ ರೈನಾ, ರೋಹಿತ್​ ಶರ್ಮಾ, ಮಹೇಂದ್ರ ಸಿಂಗ್ ಧೋನಿ ಬಳಿಕ ವಿಕೆಟ್​​ ಮಧ್ಯೆ ಹೆಚ್ಚು ಕಿಲೋ ಮೀಟರ್​ ಓಡಿದ ಆಟಗಾರ ಗಬ್ಬರ್​ ಸಿಂಗ್ ಖ್ಯಾತಿಯ ಶಿಖರ್ ಧವನ್, 159 ಪಂದ್ಯಗಳಿಂದ 4579 ರನ್​​ ಬಾರಿಸಿರುವ ಶಿಖರ್, 524 ಬೌಂಡರಿ, 96 ಸಿಕ್ಸರ್​​ ಮೂಲಕ 2672 ರನ್ ಸಿಡಿಸಿದ್ರೆ. ನಾನ್ ಬೌಂಡಿರಿ ಮೂಲಕ 1907 ರನ್ ಕಲೆಹಾಕಿದ್ದಾರೆ. ಈ ಮೂಲಕ 38.4 ಕಿಲೋ ಮೀಟರ್​​​ ದೂರ ವಿಕೆಟ್​ ನಡುವೆ ಓಡಿದ್ದಾರೆ..

LEAVE A REPLY

Please enter your comment!
Please enter your name here