ಐಪಿಎಲ್​ ಉದ್ಘಾಟನೆ: ಮೊದಲ ಚೆಂಡನ್ನು ಬೌಂಡರಿಗೆ ಅಟ್ಟಿ ಭರ್ಜರಿ ಓಪನಿಂಗ್​ ಕೊಟ್ಟ ರೋಹಿತ್ ಶರ್ಮಾ

0

ಬಹುನಿರೀಕ್ಷಿತ ಐಪಿಎಲ್​ ಶುರುವಾಗಿಯೇಬಿಟ್ಟಿದೆ. ಇಂದು ಯುಎಇಯ ಪ್ರಮುಖ ಪ್ರವಾಸಿತಾಣ ಕಡಲನಗರಿಯ ಶೇಖ್ ಜಯೆದ್ ಕ್ರೀಡಾಂಗಣದಲ್ಲಿ ಮುಂಬೈ ಇಂಡಿಯನ್ಸ್​ ಮತ್ತು ಚೆನ್ನೈ ಸೂಪರ್​ ಕಿಂಗ್ಸ್​ ನಡುವೆ ಉದ್ಘಾಟನಾ ಪಂದ್ಯ ಪ್ರಾರಂಭವಾಗಿದೆ.

ಚೆನ್ನೈ ಸೂಪರ್​ ಕಿಂಗ್ಸ್ ತಂಡದ ನಾಯಕ ಎಂ.ಎಸ್​.ಧೋನಿ ಟಾಸ್​​ ಗೆದ್ದು ಮೊದಲು ಬೌಲಿಂಗ್​ ಆಯ್ಕೆ ಮಾಡಿಕೊಂಡಿದ್ದಾರೆ. ಇತ್ತ ರೋಹಿತ್​ ಶರ್ಮಾ ನೇತೃತ್ವದ ಮುಂಬೈ ಇಂಡಿಯನ್ಸ್​ ತಂಡ ಬ್ಯಾಟಿಂಗ್​ ಪ್ರಾರಂಭಿಸಿದ್ದು, ರೋಹಿತ್​ ಶರ್ಮಾ ಮತ್ತು ದೀಪಕ್​ ಚಹಾರ್​ ಓಪನರ್​​ಗಳಾಗಿ ಮೈದಾನಕ್ಕೆ ಇಳಿದಿದ್ದಾರೆ. ಸದ್ಯ ಮೂರನೇ ಓವರ್​ಗೆ ಮುಂಬೈ 40 ರನ್​ ಗಳಿಸಿದ್ದು, ಯಾವುದೇ ವಿಕೆಟ್​ ನಷ್ಟವಿಲ್ಲ. ರೋಹಿತ್​ ಶರ್ಮಾ ಮೊದಲನೇ ಬಾಲ್​​ನಲ್ಲೇ ಫೋರ್​ ಹೊಡೆದು, ಭರ್ಜರಿ ಓಪನಿಂಗ್​ ಕೊಟ್ಟಿದ್ದಾರೆ.

ಈ ಬಾರಿ ಐಪಿಎಲ್​ ಕರೊನಾ ಮಧ್ಯೆಯೂ ಶುರುವಾಗಿದ್ದು ಕ್ರಿಕೆಟ್​ ಪ್ರೇಮಿಗಳಿಗೆ ರಸದೌತಣ. ಅದರಲ್ಲೂ ಸಿಎಸ್​​ಕೆ ದುಬೈಗೆ ಹೋದಾಗಿನಿಂದ ಒಂದಲ್ಲ ಒಂದು ಸಮಸ್ಯೆ ಎದುರಿಸುತ್ತಲೇ ಇತ್ತು. ಇದೀಗ ಎಲ್ಲ ಅಡೆತಡೆಗಳನ್ನೂ ಮೀರಿ ಐಪಿಎಲ್​ ಪಂದ್ಯ ಪ್ರಾರಂಭವಾಗಿಯೇಬಿಟ್ಟಿದೆ. (ಏಜೆನ್ಸೀಸ್)

LEAVE A REPLY

Please enter your comment!
Please enter your name here