ಐಪಿಎಲ್ ಟೈಟಲ್​ ಸ್ಪಾನ್ಸರ್ ರೇಸ್​ನಲ್ಲಿವೆ ಈ 3 ಕಂಪನಿಗಳು​..!

0

ಚೀನಾ ಮೂಲದ ಮೊಬೈಲ್​ ಕಂಪನಿ ವಿವೊ ಐಪಿಎಲ್​ ಸೀಸನ್​ 13 ಟೈಟಲ್​ ಸ್ಪಾನ್ಸರ್​ನಿಂದ ಹಿಂದೆ ಸರಿದಿದೆ. ಇದನ್ನ ಬಿಸಿಸಿಐ ಕೂಡ ಖಚಿತಪಡಿಸಿದೆ. ಈಗ ಐಪಿಎಲ್​ ಟೈಟಲ್​ ಸ್ಪಾನ್ಸರ್​ಗಾಗಿ ಬಿಸಿಸಿಐ ಟೆಂಡರ್​ ಕರೆದಿದೆ. ಪ್ರಮುಖ 3 ಕಂಪನಿಗಳು ಐಪಿಎಲ್​ ಟೈಟಲ್​ ಸ್ಪಾನ್ಸರ್ ಮಾಡಲು ಆಸಕ್ತಿ ತೋರಿಸಿವೆ.
ರೇಸ್​ನಲ್ಲಿವೆ ಕೊಕಾ ಕೋಲಾ, ಬೈಜುಸ್..!
ಸದ್ಯ ಐಪಿಎಲ್​ನ ಪ್ರಮುಖ ಪ್ರಾಯೋಜಕತ್ವಕ್ಕಾಗಿ ಆಮೇಜಾನ್, ಕೋಕಾ ಕೋಲಾ, ಬೈಜುಸ್ ರೇಸ್​ನಲ್ಲಿವೆ. ಈ ಮೂರರಲ್ಲಿ ಯಾವುದಾದರೊಂದಕ್ಕೆ ಐಪಿಎಲ್​ ಟೈಟಲ್​ ಸ್ಪಾನ್ಸರ್ ಮಾಡುವ ಅವಕಾಶ ಸಿಗಬಹುದು ಎಂದು ಹೇಳಲಾಗ್ತಿದೆ. ಭಾರತದ ಪ್ರಮುಖ ಆನ್​ಲೈನ್​ ಕಲಿಕಾ ಸಂಸ್ಥೆಯಾಗಿರೋ ಬೈಜುಸ್,​ ಈಗಾಗಲೇ ಟೀಮ್ ಇಂಡಿಯಾ ಸ್ಪಾನ್ಸರ್​ ಆಗಿ ವ್ಯವಹರಿಸುತ್ತಿದೆ. ಈಗ ಐಪಿಎಲ್​ ಮೇನ್​ ಸ್ಪಾನ್ಸರ್ ಆಗಲು ಬೈಜುಸ್​ ಮುಂದೆ ಬಂದಿದೆ. ಕೆಲವೇ ದಿನಗಳಲ್ಲಿ ಬಿಡ್​ ಕರೆಯಲಿದೆ ಬಿಸಿಸಿಐ
ಬಿಸಿಸಿಐ ಈ ವರ್ಷದ ಐಪಿಎಲ್​ಗಾಗಿ ಮಾತ್ರ ಟೈಟಲ್ ಸ್ಪಾನ್ಸರ್ ಬಿಡ್​ ಕರೆಯಲಿದೆ.​ ವಿವೊ ಟೈಟಲ್ ಸ್ಪಾನ್ಸರ್​ಗಾಗಿ ಬಿಸಿಸಿಐ ಜೊತೆ ಐದು ವರ್ಷಗಳ ಒಪ್ಪಂದ ಮಾಡಿಕೊಂಡಿದೆ. ಇದಕ್ಕಾಗಿ ವಿವೊ ಬಿಸಿಸಿಐಗೆ ಪ್ರತಿ ವರ್ಷ 440 ಕೋಟಿ ರೂಪಾಯಿ ನೀಡ್ತಿತ್ತು. ಆದ್ರೆ, ಈಗ ಸದ್ಯ ವಿವೊ ನೀಡುತ್ತಿದ್ದ ಮೊತ್ತವನ್ನೇ ಇತರೆ ಕಂಪನಿಗಳು ನೀಡುವುದು ಅನುಮಾನ. ಹೀಗಾಗಿ ಬಿಸಿಸಿಐ 250 ಕೋಟಿಯಿಂದ 300 ಕೋಟಿ ರೂಪಾಯಿ ಸ್ಪಾನ್ಸರ್​ಶಿಪ್​ ಮೂಲಕ ನಿರೀಕ್ಷಿಸುತ್ತಿದೆ.ಕಳೆದ ಜೂನ್​​ನಲ್ಲಿ ಲಡಾಕ್​ ಸಮೀಪದ ಗಾಲ್ವಾನ ಗಡಿಯಲ್ಲಿ ಚೀನಾ ಸೈನ್ಯ, ಕದನ ವಿರಾಮ ಭಾರತೀಯ ಯೋಧರ ಮೇಲೆ ದಾಳಿ ನಡೆಸಿತ್ತು. ಈ ದಾಳಿಯಲ್ಲಿ 40ಕ್ಕೂ ಹೆಚ್ಚು ಭಾರತೀಯ ಸೈನಿಕರು ಹತರಾಗಿದ್ದರು. ಇದಾದ ನಂತರ ಭಾರತ ಹಾಗೂ ಚೀನಾ ನಡುವಿನ ಸಂಬಂಧ ಹಳಸಿದೆ.

ಕೇಂದ್ರದ ಎನ್​ಡಿಎ ಸರ್ಕಾರ ಜನಪ್ರಿಯ ಟಿಕ್​ಟಾಕ್​ ಅಯಪ್​ ಸೇರಿದಂತೆ ಸುಮಾರು 100ಕ್ಕೂ ಹೆಚ್ಚು ಚೀನಾ ಆಯಪ್​ಗಳನ್ನ ನಿಷೇಧಿಸಿದೆ. ಇದರ ನಂತರ ಐಪಿಎಲ್​ನಲ್ಲಿ ವಿವೋ ಪ್ರಾಯೋಜಕತ್ವನ್ನ ಕೈ ಬಿಡಬೇಕೆಂದು ಕೋಟ್ಯಂತರ ಜನರು ಬಿಸಿಸಿಐ ಮೇಲೆ ಒತ್ತಡ ಹೇರಿದ್ದರು.
ಈ ಒತ್ತಾಯಕ್ಕೆ ಪ್ರತಿಕ್ರಿಯಿಸಿದ್ದ ಬಿಸಿಸಿಐ, ನಾವು ವಿವೋ ಪ್ರಾಯೋಜಕತ್ವನ್ನ ಕೈ ಬಿಡುವುದಿಲ್ಲ ಎಂದು ಕ್ಲಿಯರ್ ಕಟ್ ಆಗಿ ಹೇಳಿತ್ತು. ಆದ್ರೆ, ತಮ್ಮ ವಿರುದ್ಧ ಹರಿದು ಬರುತ್ತಿರುವ ವಿಮರ್ಶೆಗಳು, ಟೀಕೆಗಳಿಗೆ ಬೇಸತ್ತು, ಕನಿಷ್ಠ ಈ ವರ್ಷ ಐಪಿಎಲ್​ ಟೈಟಲ್​ ಸ್ಪಾನ್ಸರ್ ಮಾಡದಿರಲು ವಿವೋ ನಿರ್ಧರಿಸಿದೆ.

LEAVE A REPLY

Please enter your comment!
Please enter your name here