ಐಪಿಎಲ್ 2020: “ಆರ್‌ಸಿಬಿ ಆಟಗಾರರು ಅದ್ಭುತ ಪ್ರದರ್ಶನ ನೀಡಲು ಸ್ಪೂರ್ತಿ ಪಡೆದುಕೊಂಡಿದ್ದಾರೆ”

0

ಈ ಬಾರಿಯ ಐಪಿಎಲ್ ಆರಂಭಕ್ಕೆ ಇನ್ನು ಕೇವಲ ಎರಡು ವಾರಗಳಷ್ಟೇ ಬಾಕಿಯಿದೆ. ಕೊರೊನಾ ವೈರಸ್‌ನ ಕಾರಣದಿಂದಾಗಿ ಯುಎಇನಲ್ಲಿ ನಡೆಯುವ ಈ ಬಾರಿಯ ಐಪಿಎಲ್‌ಗೆ ಪ್ರೇಕ್ಷಕರಿಲ್ಲದೇ ಆಡುವುದೇ ಬಹುತೇಕ ಪಕ್ಕಾ ಆಗಿದೆ. ಹೀಗಾಗಿ ಈ ರೀತಿಯ ವಾತಾವರಣದಲ್ಲಿ ಆಡಲು ಆರ್‌ಸಿಬಿ ತಂಡದ ಆಟಗಾರರು ಸ್ಪೂರ್ತಿಯನ್ನು ಪಡೆದುಕೊಂಡಿದ್ದಾರೆ ಎಂದು ಆರ್‌ಸಿಬಿ ತಂಡದ ಕೋಚ್ ಸೈಮನ್ ಕ್ಯಾಟಿಚ್ ಹೇಳಿದ್ದಾರೆ.

ಖಾಲಿ ಮೈದಾನ ಈ ಬಾರಿ ಆರ್‌ಸಿಬಿ ಆಟಗಾರರಿಗೆ ಯಾವುದೇ ರೀತಿಯಲ್ಲಿ ಅಡಚಣೆ ಮಾಡಲಾರದು. ಪ್ರೇಕ್ಷಕರು ಇಲ್ಲದೇ ಇರುವ ಸಂದರ್ಭದಲ್ಲಿ ಆಡಲು ಬೇಕಾಗುವಷ್ಟು ಸ್ಪೂರ್ತಿಯನ್ನು ಅವರು ಪಡೆದುಕೊಂಡಿದ್ದಾರೆ. ಹೀಗಾಗಿ ಆರ್‌ಸಿಬಿ ಆಟಗಾರರು ಅದ್ಭುತ ಪ್ರದರ್ಶನ ನೀಡುವುದು ಪಕ್ಕಾ ಎಂದಿದ್ದಾರೆ ಸೈಮನ್ ಕ್ಯಾಟಿಚ್.

ಎಲ್ಲಾ ಆಟಗಾರರಿಗೂ ಇದೊಂದು ದೊಡ್ಡ ಟೂರ್ನಮೆಂಟ್ ಎಂಬ ಅರಿವಿದೆ. ವೈಯಕ್ತಿಕವಾಗಿ ಹೇಳಬೇಕೆಂದರೆ ಕೆಲ ಯುವ ಆಟಗಾರರು ಸುತ್ತಲೂ ಜನರಿಲ್ಲದ ಕಾರಣದಿಂದಾಗಿ ಹೆಚ್ಚಿನ ಒತ್ತಡವಿಲ್ಲದೆ ಆಡಲಿದ್ದಾರೆ. ಇದು ತಂಡಕ್ಕೆ ಅನುಕೂಲವಾಗಲಿದೆ ಎಂಬ ಅಭಿಪ್ರಾಯವನ್ನು ಸೈಮನ್ ಕ್ಯಾಟಿಚ್ ವ್ಯಕ್ತಪಡಿಸಿದ್ದಾರೆ.

ಹಿರಿಯ ಆಟಗಾರರಿಗೆ ಇದು ಸ್ವಲ್ಪ ಕಠಿಣ ಸವಾಲೆನಿಸಬಹುದು. ಪ್ರೇಕ್ಷಕರಿಂದ ಪಡೆಯುವ ಸ್ಪೂರ್ತಿಯನ್ನು ಅವರು ಪಡೆದುಕೊಳ್ಲಲು ಸಾಧ್ಯವಾಗದೇ ಇರಬಹುದು. ಆದರೆ ನಮ್ಮ ತಂಡದೊಳಗಿನಿಂದಲೇ ಇನ್ನೂ ಹೆಚ್ಚಿನ ಸ್ಪೂರ್ತಿಯನ್ನು ಪಡೆದುಕೊಳ್ಳಲಿದ್ದಾರೆ, ಹಾಗೂ ಅದ್ಭುತ ಪ್ರದರ್ಶನವನ್ನು ನೀಡಲಿದ್ದಾರೆ ಎಂದು ಕ್ಯಾಟಿಚ್ ಆರ್‌ಸಿಬಿಯ ಟ್ವಿಟ್ಟರ್‌ ಖಾತೆಯಲ್ಲಿ ಬಿಡುಗಡೆ ಮಾಡಿದ ವಿಡಿಯೋದಲ್ಲಿ ಹೇಳಿಕೊಂಡಿದ್ದಾರೆ.

13ನೇ ಆವೃತ್ತಿಯ ಐಪಿಎಲ್ ಆರಂಭದಲ್ಲಿ ಮಾರ್ಚ್ 29 ರಿಂದ ಆರಂಭಿಸಲು ನಿಗದಿ ಮಾಡಲಾಗಿತ್ತು. ಆದರೆ ಕೊರೊನಾ ವೈರಸ್ ತೀವ್ರಗೊಂಡ ಕಾರಣದಿಂದಾಗಿ ಟೂರ್ನಿಯನ್ನೇ ಮುಂದೂಡಲಾಗಿತ್ತು. ಇದೀಗ ಸೆಪ್ಟೆಂಬರ್ 19ರಿಂದ ನವೆಂಬರ್ 10ರ ವರೆಗೆ ಯುಎಇನಲ್ಲಿ ನಿಗದಿಯಾಗಿದೆ. ದುಬೈ, ಅಬುದಾಬಿ ಹಾಗೂ ಶಾರ್ಜಾ ಮೈದಾನದಲ್ಲಿ ಈ ಟೂರ್ನಿಯ ಎಲ್ಲಾ ಪಂದ್ಯಗಳು ನಡೆಯಲಿದೆ.

LEAVE A REPLY

Please enter your comment!
Please enter your name here