ಐಪಿಎಲ್ 2020: ಕೆಎಲ್ ನಾಯಕತ್ವದ ಬಗ್ಗೆ ಕೋಚ್ ಅನಿಲ್ ಕುಂಬ್ಳೆಗೆ ಭಾರೀ ನಿರೀಕ್ಷೆ

0

ಐಪಿಎಲ್‌ನಲ್ಲಿ ಇದೇ ಮೊದಲ ಬಾರಿಗೆ ಟೀಮ್ ಇಂಡಿಯಾದ ಪ್ರಮುಖ ಆಟಗಾರ ಕೆಎಲ್ ರಾಹುಲ್ ಈ ಬಾರಿ ಐಪಿಎಲ್‌ನಲ್ಲಿ ಕಿಂಗ್ಸ್ ಇಲವೆನ್ ಪಂಜಾಬ್ ತಂಡದ ಚುಕ್ಕಾಣಿ ಹಿಡಿದಿದ್ದಾರೆ. ಇನ್ನು ಇದೇ ತಂಡದ ಮುಖ್ಯ ಕೋಚ್ ಆಗಿ ಭಾರತೀಯ ಕ್ರಿಕೆಟ್‌ನ ದಿಗ್ಗಜ ಅನಿಲ್ ಕುಂಬ್ಳೆ ಈ ಬಾರಿ ಜವಾಬ್ಧಾರಿ ಹೊತ್ತಿದ್ದು ಕೆಎಲ್ ರಾಹುಲ್ ಅವರ ನಾಯಕತ್ವ ಮೇಲೆ ಸಾಕಷ್ಟು ನಿರೀಕ್ಷೆಯನ್ನು ವ್ಯಕ್ತಪಡಿಸಿದ್ದಾರೆ.

ಕೆಎಲ್ ರಾಹುಲ್‌ಗೆ ಅಂತಾರಾಷ್ಟ್ರೀಯ ಕ್ರಿಕೆಟ್‌ನ ಅನುಭವ ಚೆನ್ನಾಗಿದೆ. ಹೀಗಾಗಿ ತಂಡವನ್ನು ಸಮರ್ಥವಾಗಿ ಮುನ್ನಡೆಸಲಿದ್ದಾರೆ ಎಂದು ಅನಿಲ್ ಕುಂಬ್ಳೆ ಹೇಳಿಕೆಯನ್ನು ನೀಡಿದ್ದಾರೆ. ಕೆಎಲ್ ರಾಹುಲ್ ತುಂಬಾ ನಿರಾಳರಾಗಿದ್ದು ಪ್ರಬುದ್ಧ ಆಟಗಾರನಾಗಿದ್ದಾರೆ. ಆತನ ಬಗ್ಗೆ ಬಹಳ ಹಿಂದಿನಿಂದಲೂ ನನಗೆ ಅರಿವಿದೆ. ಕಳೆದ ಹಲವು ವರ್ಷಗಳಿಂದ ಅವರು ಕ್ರಿಕೆಟ್ ಆಡುತ್ತಿದ್ದು ಪಂಜಾಬ್ ತಂಡದಲ್ಲೂ ಕಳೆದೆರಡು ವರ್ಷಗಳಲ್ಲಿ ಪ್ರಮುಖ ಬ್ಯಾಟ್ಸ್‌ಮನ್ ಆಗಿ ಗುರುತಿಸಿಕೊಂಡಿದ್ದಾರೆ ಎಂದಿದ್ದಾರೆ ಕುಂಬ್ಳೆ.

ಕಳೆದೆರಡು ಆವೃತ್ತಿಗಳಿಂದ ಕೆಎಲ್ ರಾಹುಲ್ ಕಿಂಗ್ಸ್ ಇಲವೆನ್ ಪಂಜಾಬ್ ಪರವಾಗಿ ಆಡುತ್ತಿದ್ದು ಪ್ರಮುಖ ಅಸ್ತ್ರವಾಗಿದ್ದಾರೆ. 2018ರ ಐಪಿಎಲ್ ಆವೃತ್ತಿಯಲ್ಲಿ ರಾಹುಲ್ 14 ಪಂದ್ಯಗಳನ್ನಾಡಿದ್ದು 6 ಅರ್ಧ ಶತಕಗಳನ್ನು ಸಿಡಿಸಿ 659 ರನ್ ಗಳಿಸಿದ್ದರು. ಕಳೆದ ಆವೃತ್ತಿಯಲ್ಲೂ ಕೆಎಲ್ ರಾಹುಲ್ ತಮ್ಮ ಉತ್ತಮ ಪ್ರದರ್ಶನವನ್ನು ಮುಂದುವರೆಸಿದ್ದು 53.90 ಸರಾಸರಿಯಲ್ಲಿ 593 ರನ್ ಗಳಿಸಿದ್ದಾರೆ. ಇದರಲ್ಲಿ 6 ಅರ್ಧ ಶತಕ ಹಾಗೂ ಒಂದು ಶತಕ ಸೇರಿದೆ.

ಅನಿಲ್ ಕುಂಬ್ಲೆ ಕಿಂಗ್ಸ್ ಇಲವೆನ್ ಪಂಜಾಬ್ ತಂಡದ ಪ್ರದರ್ಶನದ ಮೇಲೂ ಸಾಕಷ್ಟು ಭರವಸೆಯನ್ನು ವ್ಯಕ್ತಡಿಸಿದ್ದಾರೆ. ಕಿಂಗ್ಸ್ ತಂಡ ಈ ಬಾರಿ ಅನುಭವಿ ಹಾಗೂ ಯುವ ಆಟಗಾರರನ್ನು ಒಳಗೊಂಡಿದ್ದು ತುಂಬಾ ಸಮತೋಲನದಿಂದ ಕೂಡಿದೆ ಎಂದು ಕಿಂಗ್ಸ್ ಇಲವೆನ್ ಪಂಜಾಬ್ ತಂಡದ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿರುವ ವಿಡಿಯೋದಲ್ಲಿ ಹೇಳಿಕೆಯನ್ನು ನೀಡಿದ್ದಾರೆ.

ಈ ಬಾರಿಯ ಆವೃತ್ತಿಯ ಮೇಲೆ ನಾವು ಬಹು ದೊಡ್ಡ ನಿರೀಕ್ಷೆಯನ್ನು ಇಟ್ಟುಕೊಂಡಿದ್ದೇವೆ. ನವು ನಿಜಕ್ಕೂ ಉತ್ತಮ ತಂಡವನ್ನು ಹೊಂದಿದ್ದು ತುಂಬಾ ಸಮತೋಲನದಿಂದ ಕೂಡಿದೆ. ಕೆಲವರ ಆಟವನ್ನು ನಾನು ಮೊದಲ ಬಾರಿಗೆ ನೆಟ್ ನಲ್ಲಿ ಗಮನಿಸುತ್ತಿದ್ದೇನೆ. ಅಭ್ಯಾಸದೊಂದಿಗೆ ತಂಡವನ್ನು ಕಟ್ಟಿಕೊಳ್ಳುತ್ತಿದ್ದು ಐಪಿಎಲ್ ಆರಂಭಕ್ಕೆ ಸಿದ್ದರಾಗುತ್ತಿದ್ದೇವೆ ಎಂದು ಅನಿಲ್ ಕುಂಬ್ಳೆ ಹೇಳಿದ್ದಾರೆ

LEAVE A REPLY

Please enter your comment!
Please enter your name here