ಮಹಾಮಾರಿ ಕೊರೋನಾ ನಡುವೆ ಐಪಿಎಲ್ ಟೂರ್ನಿ ಆರಂಭವಾಗಿದ್ದು ಇಂದು ಆರ್ ಸಿಬಿ ಮತ್ತು ಹೈದರಾಬಾದ್ ನಡುವೆ ಪಂದ್ಯ ನಡೆಯುತ್ತಿದೆ. ಟಾಸ್ ಸೋತ ಆರ್ ಬಿಸಿ ಬ್ಯಾಟಿಂಗ್ ಆರಂಭಿಸಿದೆ.
ದುಬೈನಲ್ಲಿ ಪಂದ್ಯ ನಡೆಯುತ್ತಿದ್ದು ಆರ್ ಸಿಬಿ ಪರ ಪಡಿಕ್ಕಲ್ ಮತ್ತು ಆಯರೋನ್ ಪಿಂಚ್ ಬ್ಯಾಟಿಂಗ್ ಮಾಡುತ್ತಿದ್ದಾರೆ.
ಆರ್ ಸಿಬಿ ತಂಡ
ದೇವ ದತ್ತ ಪಡಿಕ್ಕಲ್, ಆಯರೋನ್ ಪಿಂಚ್, ವಿರಾಟ್ ಕೊಹ್ಲಿ, ಎಬಿಡಿ ವಿಲಿಯರ್ಸ್, ಜೋಶ್ ಫಿಲಿಪ್, ಶಿವಂ ದುಬೆ, ವಾಷಿಂಗ್ಟನ್ ಸುಂದರ್, ಉಮೇಶ್ ಯಾದವ್, ನವದೀಪ್ ಶೈನಿ, ಡೇಲ್ ಸ್ಟೈನ್, ಯಜುವೇಂದ್ರ ಚಹಾಲ್.
ಕಳೆದ ಆವೃತ್ತಿಯಲ್ಲಿ ಕಳಪೆ ಪ್ರದರ್ಶನ ತೋರಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು, ಪಾಯಿಂಟ್ಸ್ ಟೇಬಲ್‌ನಲ್ಲಿ ಕೊನೆಯ ಸ್ಥಾನವನ್ನು ಪಡೆದಿತ್ತು. ಇದರಿಂದ ನಾಯಕ ವಿರಾಟ್ ಕೊಹ್ಲಿ ವಿರುದ್ಧ ಸಾಕಷ್ಟು ಟೀಕೆಗಳು ಕೇಳಿಬಂದಿದ್ದವು. ಆದರೆ, ಈ ಬಾರಿ ತಂಡವನ್ನು ಗೆಲ್ಲಿಸಿ ಟೀಕೆಗಳಿಂದ ಮುಕ್ತಿ ಪಡೆಯುವ ಯೋಚನೆಯಲ್ಲಿ ಕೊಹ್ಲಿ ಇದ್ದಾರೆ.
ಆದಾಗ್ಯೂ, ಈ ಒಂದೇ ಒಂದು ಕಾರಣದಿಂದ ಟೂರ್ನಿಯ ಮೊದಲನೇ ಪಂದ್ಯ ಗೆಲ್ಲುವುದು ವಿರಾಟ್ ಕೊಹ್ಲಿಗೆ ತುಂಬಾ ಮುಖ್ಯವಾಗಿದೆ. ಸನ್ ರೈಸರ್ಸ್ ಹೈದರಾಬಾದ್ ತಂಡವನ್ನು ಆರ್‌ಸಿಬಿ ಮಣಿಸಿದ್ದೇ ಆದಲ್ಲಿ , ಬೆಂಗಳೂರು ಫ್ರಾಂಚೈಸಿಯ ನಾಯಕನಾಗಿ 50ನೇ ಪಂದ್ಯ ಗೆದ್ದ ಕೀರ್ತಿಗೆ ವಿರಾಟ್ ಭಾಜನವಾಗಲಿದ್ದಾರೆ.