ಐಪಿಎಲ್ 2020: ನೋವಿನ ನಡುವೆ ಕಣಕ್ಕಿಳಿದಿದ್ದ ಶೇನ್ ವಾಟ್ಸನ್

0

ಆಸ್ಟ್ರೇಲಿಯಾದ ಮಾಜಿ ಆಟಗಾರ ಶೇನ್ ವಾಟ್ಸನ್ ಅವರು ಚೆನ್ನೈ ಸೂಪರ್ ಕಿಂಗ್ಸ್ ಪರ ಇನ್ನೂ ಮಿಂಚುತ್ತಿಲ್ಲವೇಕೆ ಎಂದು ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದ್ದಾರೆ. ಐಪಿಎಲ್ 2020ರಲ್ಲಿ ತಮ್ಮ ಹಿಂದಿನ ಲಯ ಕಂಡುಕೊಂಡು ತಂಡವನ್ನು ಗೆಲುವಿನತ್ತ ಮುನ್ನಡೆಸುತ್ತಾರೆ ಎಂಬ ಭರವಸೆ ಹೊಂದಿದ್ದಾರೆ.

ಆದರೆ, ವಾಟ್ಸನ್ ಅವರು ಈ ಸೀಸನ್ ನ ಎರಡು ಪಂದ್ಯಗಳಲ್ಲೂ ಕಣಕ್ಕಿಳಿಯುವಾಗ ಅತ್ಯಂತ ನೋವಿನಿಂದ ಕಣಕ್ಕಿಳಿದಿದ್ದರು ಎಂಬ ವಿಷಯ ಇದೀಗ ಬಹಿರಂಗವಾಗಿದೆ. ಮುಂಬೈ ಇಂಡಿಯನ್ಸ್ ವಿರುದ್ಧ ಆಡಿದ ವಾಟ್ಸನ್ ಕೇವಲ 4 ರನ್ ಗಳಿಸಿ ಔಟಾದರೂ ಚೆನ್ನೈ ತಂಡ ಗೆಲುವು ಸಾಧಿಸಿತ್ತು.

ಆದರೆ, ನಂತರ ರಾಜಸ್ಥಾನ್ ರಾಯಲ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಕ್ರಮವಾಗಿ 33 ಹಾಗೂ 14ರನ್ ಮಾತ್ರ ವಾಟ್ಸನ್ ಬ್ಯಾಟಿನಿಂದ ಬಂದಿದೆ. ಎರಡು ಪಂದ್ಯದಲ್ಲೂ ಚೆನ್ನೈ ಸೋಲು ಅನುಭವಿಸಿದೆ. ಡೆಲ್ಲಿ ವಿರುದ್ಧದ ಪಂದ್ಯಕ್ಕೂ ಮುನ್ನ ವಾಟ್ಸನ್ ಅವರು ತಮ್ಮ ಅಜ್ಜಿ(ತಾಯಿಯ ತಾಯಿ) ಯನ್ನು ಕಳೆದುಕೊಂಡಿದ್ದಾರೆ.

ಈ ಬಗ್ಗೆ ಮಾತನಾಡಿದ ವಾಟ್ಸನ್, ”ನನ್ನ ಅಜ್ಜಿ ಬುಧವಾರದಂದು ತೀರಿ ಹೋದರು. ನನ್ನ ಕುಟುಂಬ ಯಾವ ರೀತಿ ನೋವು ಅನುಭವಿಸುತ್ತಿದೆ ಎಂಬುದನ್ನು ಬಲ್ಲೆ, ನನ್ನ ತಾಯಿ ಹಾಗೂ ಕುಟುಂಬಸ್ಥರಿಗೆ ದೇವರು ನೋವನ್ನು ಭರಿಸುವ ಶಕ್ತಿ ನೀಡಲಿ, ಕ್ಷಮಿಸಿ ಈಗ ನಾನು ಅಲ್ಲಿಗೆ ಬರಲು ಆಗುತ್ತಿಲ್ಲ, ನನ್ನ ಪ್ರೀತಿ ನಿಮ್ಮೊಟ್ಟಿಗೆ ಸದಾ ಇರುತ್ತದೆ” ಎಂದು 39 ವರ್ಷ ವಯಸ್ಸಿನ ವಾಟ್ಸನ್ ತಮ್ಮ ಯೂಟ್ಯೂಬ್ ಕಾರ್ಯಕ್ರಮ ದಿ ಡಿಬ್ರೀಫ್ ನಲ್ಲಿ ಹೇಳಿದ್ದಾರೆ.

ಆಸ್ಟ್ರೇಲಿಯಾ ದಿಗ್ಗಜ ಡೀನ್ ಜೋನ್ಸ್ ಕಳೆದುಕೊಂಡಿದ್ದು ಕ್ರಿಕೆಟ್ ಆಸ್ಟ್ರೇಲಿಯಾಕ್ಕೆ ತುಂಬಲಾರದ ನಷ್ಟ ಎಂದಿದ್ದಾರೆ. ನನಗೆ ಕೋಚ್ ಆಗಿ ಪಾಕಿಸ್ತಾನ ಕ್ರಿಕೆಟ್ ನಲ್ಲಿ ತುಂಬಾ ವಿಷಯಗಳ ಬಗ್ಗೆ ತಿಳಿ ಹೇಳಿದ್ದರು ಎಂದಿದ್ದಾರೆ.

LEAVE A REPLY

Please enter your comment!
Please enter your name here