ಐಪಿಎಲ್ 2020: 2 ತಂಡಗಳು ಬಾಗಿಲು ಬಡಿದರೂ ಬಾಂಗ್ಲಾ ವೇಗಿಗೆ ಟೂರ್ನಿಯಲ್ಲಿ ಪಾಲ್ಗೊಳ್ಳುವ ಭಾಗ್ಯವಿಲ್ಲ!

0

ಈ ಬಾರಿಯ ಐಪಿಎಲ್ ಹಿಂದೆಂಗಿಂತಲೂ ಭಿನ್ನ ಪರಿಸ್ಥಿತಿಯಲ್ಲಿ ನಡೆಯುತ್ತಿದೆ. ಕೊರೊನಾ ವೈರಸ್ ಆತಂಕ ಸಹಜವಾಗಿಯೆ ಒಂದಷ್ಟು ಗೊಂದಲಕ್ಕೆ ಕಾರಣವಾಗಿದೆ. ಹೀಗಾಗಿ ವೈಯಕ್ತಿಕ ಕಾರಣವನ್ನು ನೀಡಿ ಕೆಲ ಆಟಗಾರರು ಈ ಬಾರಿಯ ಟೂರ್ನಿಯಿಂದ ಹಿಂದಕ್ಕೆ ಸರಿಯುತ್ತಿದ್ದಾರೆ. ಹೀಗೆ ಹಿಂದೆ ಸರಿದ ಆಟಗಾರರ ಸ್ಥಾನಕ್ಕೆ ಅವಕಾಶ ಪಡೆದುಕೊಳ್ಳುವ ಎರಡೆರಡು ಸಂದರ್ಭಗಳು ಬಾಂಗ್ಲಾ ಆಟಗಾರನಿಗೆ ಬಂದರೂ ಪಾಲ್ಗೊಳ್ಳಲು ಸಾಧ್ಯವಾಗುತ್ತಿಲ್ಲ.

ಬಾಂಗ್ಲಾದೇಶದ ವೇಗದ ಬೌಲರ್ ಮುಸ್ತಫಿಜುರ್ ರಹ್ಮಾನ್ ಕಳೆದ ಐಪಿಎಲ್ ಬಿಡ್ಡಿಂಗ್‌ನಲ್ಲಿ ಪಾಲ್ಗೊಂಡಿದ್ದರಾದರೂ ಯಾವುದೇ ತಂಡ ಖರೀದಿಸದೆ ಹಾಗೇ ಉಳಿದುಕೊಂಡಿದ್ದರು. ಆದರೆ ಐಪಿಎಲ್ ಆರಂಭಕ್ಕೆ ಕೆಲವೇ ದಿನಗಳು ಇರುವಾಗ ಮುಸ್ತಫುಜುರ್‌ಗೆ ಒಂದರಲ್ಲ ಎರಡೆರಡು ತಂಡಗಳು ತಂಡಕ್ಕೆ ಸೇರ್ಪಡೆಗೊಳಿಸಲು ಸಂಪರ್ಕಿಸಿದ್ದವು. ಆದರೆ ಬಾಂಗ್ಲಾ ಕ್ರಿಕೆಟ್ ಮಂಡಳಿ ಈ ವೇಗಿಗೆ ನಿರಾಸೆ ಮೂಡಿಸಿದೆ.

ಮುಂಬೈ ಇಂಡಿಯನ್ಸ್ ಹಾಗೂ ಕೊಲ್ಕತ್ತಾ ನೈಟ್ ರೈಡರ್ಸ್ ತಂಡಗಳು ಮುಸ್ತಫಿಜುರ್ ರಹ್ಮಾನ್ ಅವರನ್ನು ತಂಡಕ್ಕೆ ಸೇರ್ಪಡೆಗೊಳಿಸುವ ಉತ್ಸಾಹವನ್ನು ತೋರಿದೆ. ಈ ಎರಡು ತಂಡಗಳಿಂದ ಪ್ರಮೂಖ ಆಟಗಾರರು ಅಲಭ್ಯರಾಗುತ್ತಿದ್ದಾರೆ. ಆ ಸ್ಥಾನವನ್ನು ಮುಸ್ತಫಿಜುರ್‌ಗೆ ತುಂಬುವ ಅವಕಾಶವನ್ನು ಎರಡು ತಂಡಗಳು ನೀಡಿದ್ದವು. ಆದರೆ ಬಾಂಗ್ಲಾ ದೇಶ ಕ್ರಿಕೆಟ್ ಮಂಡಳಿ ಮುಸ್ತಫಿಜುರ್‌ಗೆ ನಿಪೇಕ್ಷಣಾ ಪತ್ರವನ್ನು ನೀಡಲು ನಿರಾಕರಿಸಿದೆ. ವಿದೇಶಿ ಆಟಗಾರರು ಟೂರ್ನಿಯಲ್ಲಿ ಪಾಲ್ಗೊಳ್ಳಬೇಕಾದರೆ ಆಯಾ ದೇಶಗಳ ಮಂಡಳಿಯ ನಿರಪೇಕ್ಷಣಾ ಪತ್ರ ಮುಖ್ಯವಾಗಿದೆ.

ಈ ಬಗ್ಗೆ ಬಾಂಗ್ಲಾದೇಶ್ ಕ್ರಿಕೆಟ್ ಚಟುವಟಿಕೆಗಳ ಮುಖ್ಯಸ್ಥ ಅಕ್ರಮ್ ಖಾನ್ ಕ್ರಿಕ್ ಬಜ್‌ಗೆ ಪ್ರತಿಕ್ರಿಯಿಸಿದ್ದು “ಐಪಿಎಲ್‌ನಿಂದ ಮುಸ್ತಪಿಜುರ್‌ಗೆ ಆಹ್ವಾನ ಬಂದಿರುವುದು ನಿಜ. ಆದರೆ ನಾವು ಅದಕ್ಕೆ ಎನ್‌ಒಸಿ ನೀಡಿಲ್ಲ. ಮುಂದಿನ ಶ್ರೀಲಂಕಾ ಪ್ರವಾಸವನ್ನು ದೃಷ್ಠಿಯಲ್ಲಿ ಇಟ್ಟುಕೊಂಡು ಈ ನಿರ್ಧಾರವನ್ನು ಕೈಗೊಳ್ಳಲಾಗಿದೆ” ಎಂದಿದ್ದಾರೆ.

ಮುಸ್ತಫಿಜುರ್ ರಹ್ಮಾನ್ ಈ ಹಿಂದೆ ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್ ಹಾಗೂ ಸನ್ ರೈಸರ್ಸ್ ಹೈದರಾಬಾದ್ ತಂಡದಲ್ಲಿ ಆಡುವ ಅವಕಾಶವನ್ನು ಪಡೆದಿದ್ದರು. 2016ರ ಆವೃತ್ತಿಯಲ್ಲಿ ಸನ್ ರೈಸರ್ಸ್ ಹೈದರಾಬಾದ್ ಮೂಲಕ ಐಪಿಎಲ್‌ಗೆ ಪದಾರ್ಪಣೆ ಮಾಡಿದ್ದ ಅವರು ಉತ್ತಮ ಪ್ರದರ್ಶನ ತೋರಿದ್ದರಾದರೂ ಮುಂಬೈಗೆ ಸೇರ್ಪಡೆಗೊಂಡ ಬಳಿಕ ಹಿಂದಿನ ಪ್ರದರ್ಶನ ತೋರಲು ವಿಫಲರಾಗಿದ್ದರು.

LEAVE A REPLY

Please enter your comment!
Please enter your name here