‘ಒಂದು ಕ್ಷಣ ಕೆಟ್ಟ ನಿರ್ಧಾರ ಮಾಡಿದ್ದೆ.’ -ರಿಯಾ ಚಕ್ರವರ್ತಿ ಅಮ್ಮ ಹೇಳಿದ ಮಾತುಗಳು.

0

ನಟ ಸುಶಾಂತ್ ಸಿಂಗ್ ರಜಪೂತ್​ ಸಾವಿನ ಪ್ರಕರಣದಲ್ಲಿ ಜೈಲು ಸೇರಿದ್ದ ರಿಯಾ ಚರ್ಕವರ್ತಿಗೆ ನಿನ್ನೆ ಜಾಮೀನು ಸಿಕ್ಕು, ಬಿಡುಗಡೆಯಾಗಿದ್ದಾರೆ.

ಸುಶಾಂತ್​ ಸಾವಿನ ಕೇಸ್​​ ಜತೆ ತಳುಕು ಹಾಕಿಕೊಂಡಿದ್ದ ಡ್ರಗ್ಸ್​ಗೆ ಸಂಬಂಧಪಟ್ಟಂತೆ ರಿಯಾ ಮತ್ತು ಆಕೆಯ ಸೋದರ ಶೋವಿಕ್​​ನನ್ನು ಎನ್​ಸಿಬಿ ವಿಚಾರಣೆ ನಡೆಸಿ, ನಂತರ ಬಂಧಿಸಿತ್ತು. ಒಂದು ತಿಂಗಳ ನಂತರ ರಿಯಾ ಜೈಲಿನಿಂದ ಬಿಡುಗಡೆಯಾದ ಬೆನ್ನಲ್ಲೇ ಅವರ ತಾಯಿ ಸಂಧ್ಯಾ ಚಕ್ರವರ್ತಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ.
ಈ ಎಲ್ಲ ಕಷ್ಟಗಳ ವಿರುದ್ಧ ನನ್ನ ಮಗಳು ಹೋರಾಡುತ್ತಾಳೆ. ಇವೆಲ್ಲವನ್ನೂ ಮೀರಿ ಬರುತ್ತಾಳೆ ಎಂದು ಭರವಸೆ ವ್ಯಕ್ತಪಡಿಸಿದ್ದಾರೆ.

ಅವಳು ಏನು ಮಾಡುತ್ತಾಳೆ? ಇದೆಲ್ಲ ನೋವಿನಿಂದ ಹೇಗೆ ಹೊರಬರುತ್ತಾಳೆ? ಗೊತ್ತಿಲ್ಲ..ಆದರೆ ಖಂಡಿತ ಹೋರಾಡುತ್ತಾಳೆ..ಅಷ್ಟು ಶಕ್ತಿ ಆಕೆಯಲ್ಲಿದೆ. ಅವಳ ಬೆಂಬಲಕ್ಕೆ ಸದಾ ನಾನಿದ್ದೇನೆ ಎಂದಿದ್ದಾರೆ.
ನನ್ನ ಕುಟುಂಬಕ್ಕೆ ಎದುರಾಗಿರುವ ಕಷ್ಟ ತೀರಿಲ್ಲ. ನನ್ನ ಮಗನಿನ್ನೂ ಜೈಲಿನಲ್ಲಿಯೇ ಇದ್ದಾನೆ. ನಾನಂತೂ ನಾಳೆ ಇನ್ನೇನು ಕಾದಿದೆಯೋ ಎಂಬ ಭಯದಲ್ಲೇ ಬದುಕುತ್ತಿದ್ದೇನೆ. ನನ್ನ ಮಕ್ಕಳು ಜೈಲಿನಲ್ಲಿರುವಾಗ ನಾನು ಹೇಗೆ ಸುಖವಾಗಿ ನಿದ್ದೆ ಮಾಡಲು ಸಾಧ್ಯ. ನನಗೆ ಏನೂ ತಿನ್ನು ಸಾಧ್ಯವಾಗುತ್ತಿಲ್ಲ. ಮಧ್ಯರಾತ್ರಿ ಪದೇಪದೆ ಎಚ್ಚರವಾಗುತ್ತದೆ. ಸದಾ ಆತಂಕದಲ್ಲಿಯೇ ಇರುವಂತಾಗಿದೆ ಎಂದು ತಮ್ಮ ಪರಿಸ್ಥಿತಿಯನ್ನು ವಿವರಿಸಿದ್ದಾರೆ.

ಕಳೆದ ಕೆಲವು ತಿಂಗಳುಗಳ ಬೆಳವಣಿಗೆಯಿಂದ ನಾನು ಎಷ್ಟು ಕುಗ್ಗಿಹೋಗಿದ್ದೇನೆ ಎಂದರೆ ಒಂದು ಕ್ಷಣ ಆತ್ಮಹತ್ಯೆಯ ಯೋಚನೆಯೂ ಬಂದಿತ್ತು. ಆದರೆ ಮಾನಸಿಕ ಆರೋಗ್ಯಕ್ಕಾಗಿ ಥೆರಪಿಗೆ ಒಳಗಾದೆ. ಅದರಿಂದ ನನಗೆ ಸಹಾಯವಾಯಿತು. ನನ್ನ ಮನಸ್ಥಿತಿ ಸುಧಾರಿಸಿತು. ನನ್ನ ಮಕ್ಕಳ ಮನಸ್ಥಿತಿಯನ್ನೂ ಇದೀಗ ಸರಿಪಡಿಸಬೇಕು ಎಂದಿದ್ದಾರೆ. (ಏಜೆನ್ಸೀಸ್​)

LEAVE A REPLY

Please enter your comment!
Please enter your name here