ಒಂದೇ ಆಂಬುಲೆನ್ಸ್​ನಲ್ಲಿ ಇಬ್ಬರಿಗೆ ಹೆರಿಗೆ!

0

ಹೆರಿಗೆ ನೋವಿನಿಂದ ಬಳಲುತ್ತಿದ್ದ ತುಂಬು ಗರ್ಭಿಣಿಯರಿಬ್ಬರಿಗೂ ಒಂದೇ ಆಂಬುಲೆನ್ಸ್​ನಲ್ಲಿ ಹೆರಿಗೆ ಆಗಿದೆ.

ಇಂತಹ ಅಪರೂಪದ ಘಟನೆ ಭಾನುವಾರ ಜಿಲ್ಲೆಯಲ್ಲಿ ಸಂಭವಿಸಿದ್ದು, ಶುಶ್ರೂಷಕ ಮತ್ತು ಸಿಬ್ಬಂದಿ ಕಾರ್ಯಕ್ಕೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.

ಅಥಣಿ ತಾಲೂಕಿನ ಮಲಾಬಾದ ಗ್ರಾಮದ ರುಕ್ಸಾನ್​ ಕಣಬರ್​ ಹಾಗೂ ಬಳ್ಳಿಗೇರಿ ಗ್ರಾಮದ ರಾಜಶ್ರೀ ಕುರಬರ ಅವರಿಗೆ ಹೆರಿಗೆ ನೋವು ಕಾಣಿಸಿಕೊಂಡಿತ್ತು. ಅಥಣಿ ಸರ್ಕಾರಿ ಆಸ್ಪತ್ರೆಗೆ ಆಂಬುಲೆನ್ಸ್​ನಲ್ಲಿ ಕರೆತರಲಾಗುತ್ತಿತ್ತು. ಮಾರ್ಗಮಧ್ಯೆ ಅತೀವ ಹೆರಿಗೆ ನೋವಿನಿಂದ ಮಹಿಯರಿಬ್ಬರಿಗೂ ಆಂಬುಲೆನ್ಸ್​ನಲ್ಲೇ ಶುಶ್ರೂಷಕ ಮಹೇಂದ್ರ ಕೊಟಗಿ ಹಾಗೂ ಸಿಬ್ಬಂದಿ ಸಂಜೀವ ಕಬ್ಬೂರ ಅವರು ಯಶಸ್ವಿಯಾಗಿ ಹೆರಿಗೆ ಮಾಡಿಸಿದ್ದಾರೆ.

ರಾಜಶ್ರೀ ಹೆಣ್ಣು ಮಗುವಿಗೆ ಹಾಗೂ ರುಕ್ಸಾನಾ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ತಾಯಿ-ಮಗು ಆರೋಗ್ಯವಾಗಿವೆ. ಆಂಬುಲೆನ್ಸ್​ ಸಿಬ್ಬಂದಿ ಕಾರ್ಯಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

LEAVE A REPLY

Please enter your comment!
Please enter your name here