ಅದೃಷ್ಟ ಲಕ್ಷ್ಮಿ ಬಂದ್ರೆ ಹೀಗೆ ಬರಬೇಕು ನೋಡಿ… ಕೇರಳದ ಇಡುಕ್ಕಿ ಜಿಲ್ಲೆಯಲ್ಲಿ ಗುಮಾಸ್ತನಾಗಿ ಕೆಲಸ ಮಾಡುತ್ತಿದ್ದ ಯುವಕನಿಗೆ ಬರೋಬ್ಬರಿ 12 ಕೋಟಿ ರೂ ಬಂಪರ್ ಲಾಟರಿ ಹೊಡೆದಿದೆ.
ಎರ್ನಾಕುಳಂನ ಮಂದಿರವೊಂದರಲ್ಲಿ ಗುಮಾಸ್ತನಾಗಿ ಕೆಲಸ ಮಾಡುವ 24 ವರ್ಷದ ಅನಂತು ವಿಜಯನ್, ಕಳೆದ ತಿಂಗಳು ಸರಕಾರದ ಓಣಂ ಬಂಪರ್ ಲಾಟರಿಯಲ್ಲಿ 12 ಕೋಟಿ ರೂಪಾಯಿ ಗೆದ್ದಿದ್ದಾನೆ. ಆ ಮೂಲಕ ಬೆಳಗಾಗುವುದರೊಳಗೆ ಕೋಯಾಧಿಪತಿಯಾಗಿದ್ದಾನೆ.
ಈ ಕುರಿತು ಮಾಹಿತಿ ನೀಡಿದ ಯುವಕ ”ನಾನು ಲಾಟರಿ ಗೆದ್ದಿದ್ದೇನೆ ಎಂದು ಕರೆ ಬಂದಾಗ, ತಮಾಷೆ ಮಾಡುತ್ತಿದ್ದಾರೆ ಎಂದು ಭಾವಿಸಿದ್ದೆ. ಆದರೆ ನ್ಯೂಸ್ ನೋಡಿದಾಗ, ಆಶ್ಚರ್ಯವಾಯಿತು. . ಭಾನುವಾರ ಮುಂಜಾನೆ ನಾನು ಗೆಳೆಯರೊಂದಿಗೆ ಮಾತನಾಡುತ್ತಾ, ನೋಡ್ತಿರಿ ಈ ಓಣಂ ಬಂಪರ್ ಲಾಟರಿ ನನ್ನ ಬದುಕನ್ನೇ ಬದಲಿಸುತ್ತೆ ಎಂದು ತಮಾಷೆ ಮಾಡಿದ್ದೆ. ಆ ಮಾತು ನಿಜವಾಗಿಬಿಟ್ಟಿತು ಎಂದಿದ್ದಾರೆ.
ಲಾಟರಿಯಿಂದ ಏನು ಮಾಡುತ್ತೀರಿ ಎಂದಾಗ ಈಗ ಎರ್ನಾಕುಳಂನಲ್ಲಿ ಮೊದಲು ಒಂದು ಚಿಕ್ಕ ಮನೆ ಖರೀದಿಸುತ್ತೇನೆ. ಆಮೇಲೆ ತಂದೆಯ ಜತೆಗೂಡಿ ಚಿಕ್ಕ ಬ್ಯುಸಿನೆಸ್ ತೆರೆಯುತ್ತೇನೆ’ ಎನ್ನುತ್ತಾರೆ ವಿಜಯನ್.
ಲಾಟರಿ ಮತ್ತು ಮದ್ಯ ಮಾರಾಟ ಕೇರಳ ಸರಕಾರದ ಪ್ರಮುಖ ಆದಾಯ ಮಾರ್ಗಗಳಾಗಿವೆ. ಲಾಟರಿ ಟಿಕೆಟ್‌ಗಳ ಮಾರಾಟದ ಆದಾಯವೇ ವಾರ್ಷಿಕವಾಗಿ 10,000 ಕೋಟಿಯಿಂದ 12 ಸಾವಿರ ಕೋಟಿಯಷ್ಟಿದೆ.