ಕಂಗನಾ ರಣಾವತ್ ವಿಚಾರ : ಮಹಾರಾಷ್ಟ್ರ ಸರ್ಕಾರದ ವಿರುದ್ಧ ದೇವೇಂದ್ರ ಫಡಣವೀಸ್ ಗುಡುಗು

0

ಮುಂಬೈ : ಬಾಲಿವುಡ್ ನಟಿ ಕಂಗನಾ ರಣಾವತ್ ವಿಚಾರದ ಕುರಿತು ಮಹಾರಾಷ್ಟ್ರ ವಿರೋಧ ಪಕ್ಷದ ನಾಯಕ ದೇವೇಂದ್ರ ಫಡಣವೀಸ್ ಮಾತನಾಡಿದ್ದಾರೆ.

ಈ ಬಗ್ಗೆ ಸೋಮವಾರ ಮಾತನಾಡಿದ ಅವರು ಶಿವಸೇನಾ ನೇತೃತ್ವದ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ. ಯಾರಾದರೂ ತಪ್ಪು ಮಾತನಾಡಿದ್ರೆ , ಅವರ ಆಲೋಚನೆ ತಪ್ಪಾಗಿದ್ದರೆ ಅದನ್ನು ನಾವು ಆಕ್ಷೇಪಿಸಬಹುದು. ಆದರೆ ಅವರ ಜೀವ ಹಾಗೂ ಆಸ್ತಿಯನ್ನು ಕಾಪಾಡುವುದು ರಾಜ್ಯ ಸರ್ಕಾರದ ಜವಾಬ್ದಾರಿಯಾಗಿದೆ ಎಂದರು.

ನಿಮಗೆ ಬೇರೆಯವರ ಅಭಿಪ್ರಾಯ ಇಷ್ಟವಾಗದಿದ್ದರೆ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಿ, ಆದರೆ ಅವರನ್ನು ರಕ್ಷಣೆ ಮಾಡುವುದು ಸಂವಿಧಾನದ ಕರ್ತವ್ಯವಾಗಿದೆ ಎಂದು ದೇವೇಂದ್ರ ಫಡಣವೀಸ್ ಹೇಳಿದ್ದಾರೆ.

ಕಳೆದ ಕೆಲವು ವಾರಗಳಿಂದ ಮಹಾರಾಷ್ಟ್ರ ಸರ್ಕಾರದೊಂದಿಗೆ ಭಿನ್ನಾಭಿಪ್ರಾಯ ಹೊಂದಿರುವ ಬಾಲಿವುಡ್ ನಟಿ ಕಂಗನಾ ರನೌತ್ ಅವರಿಗೆ ಗೃಹ ವ್ಯವಹಾರ ಸಚಿವಾಲಯ (ಎಂಎಚ್‌ಎ) ವೈ ದರ್ಜೆಯ ಭದ್ರತೆಯನ್ನು ನೀಡಿದೆ ಎಂದು ಮೂಲಗಳು ತಿಳಿಸಿವೆ. ಮಹಾರಾಷ್ಟ್ರ ಸರ್ಕಾರ ಮತ್ತು ಶಿವಸೇನೆ ಮುಖಂಡ ಸಂಜಯ್ ರೌತ್ ಅವರೊಂದಿಗೆ ನಡೆಯುತ್ತಿರುವ ಜಗಳದ ನಡುವೆ ಕಂಗನಾ ರನೌತ್ ಸೆಪ್ಟೆಂಬರ್ 9 ರಂದು ಮುಂಬೈಗೆ ತೆರಳಲಿದ್ದಾರೆ. ಈ ಹಿನ್ನೆಲೆಯಲ್ಲಿ ಭದ್ರತಾ ದೃಷ್ಟಿಯಿಂದ ಕಂಗನಾ ರನೌತ್ ಅವರಿಗೆ ವೈ ದರ್ಜೆ ಭದ್ರತೆ ನೀಡಲಾಗುವುದು ಎಂದು ಮೂಲಗಳು ತಿಳಿಸಿವೆ. ಭಾರತದಲ್ಲಿ ವೈ ವರ್ಗ ಭದ್ರತೆಯನ್ನು ಪಡೆಯುವ ವಿಐಪಿಗಳಿಗೆ ಕಮಾಂಡೋಗಳು ಸೇರಿದಂತೆ 11 ಸಿಬ್ಬಂದಿಗಳನ್ನು ಒಳಗೊಂಡ ಭದ್ರತಾ ತಂಡ ಇರುತ್ತದೆ.

LEAVE A REPLY

Please enter your comment!
Please enter your name here