ಮೂಡಬಿದ್ರೆ: ಮಂಗಳೂರು ಜಿಲ್ಲೆಯ ಮೂಡಬಿದ್ರೆ ತಾಲೂಕಿನ ಕಡಂದಲೆ ಶ್ರೀ ಸುಬ್ರಹ್ಮಣ್ಯ ಸ್ವಾಮಿ ಅನುದಾನಿತ ಪ್ರೌಡ ಶಾಲೆಯ ಮುಖ್ಯ ಶಿಕ್ಷಕರಾದ ದಿನಕರ ಕುಂಬಾಶಿಯವರ ನೇತೃತ್ವದಲ್ಲಿ, ಶಿಕ್ಷಕ ಸದಾಶಿವ ಉಪಧ್ಯಾಯ ಹಾಗೂ ಇತರ ಶಿಕ್ಷಕರ ಜತೆ ಸೇರಿ ಮಕ್ಕಳಿಗೆ ದಿನಕ್ಕೊಂದು ಕಡೆ ಪಾಠವನ್ನು ಆರಂಭಿಸಿದ್ದು, ಇಡೀ ಜಿಲ್ಲೆಗೆ ಮಾದರಿಯಾಗಿರುತ್ತದೆ.
ಈ ಶಾಲೆಗೆ ತುಂಬಾ ಹಳ್ಳಿ ಪ್ರದೇಶದಿಂದ ಬರುವಂತಹ ಮಕ್ಕಳಿರುವುದರಿಂದ ಕೊರೊನಾ ಕಾರಣ ಶಿಕ್ಷಣದಿಂದ ವಂಚಿತರಾಗಬಾರದೆಂದು ದಿನಕ್ಕೊಂದು ಕಡೆ ಹಳ್ಳಿ ಪ್ರದೇಶಕ್ಕೆ ತೆರಳಿ ಅಕ್ಕಪಕ್ಕದ ಕೆಲವೊಂದು ಮಕ್ಕಳನ್ನು ಒಂದೇ ಮನೆಗೆ ಕರೆದು ಸಾಮಾಜಿಕ ಅಂತರ ಇಟ್ಟುಕೊಂಡು ಪಾಠವನ್ನು ಮಾಡುತ್ತಿರುವುದು ಸಾರ್ವಜನಿಕ ವಲಯದಲ್ಲಿ ಪ್ರಶಂಸೆಗೆ ಪಾತ್ರವಾಗಿದೆ.
ಈ ಶಾಲೆಗೆ ಬರುವಂತಹ ಮಕ್ಕಳ ಹೆತ್ತವರು ಕೂಲಿ ಮಾಡಿಕೊಂಡು ಜೀವನ ಸಾಗಿಸುತ್ತಿದ್ದು, ಅವರಲ್ಲಿ online ಪಾಠಕ್ಕೆ 8-10ಸಾವಿರ ಬೆಳೆ ಬಾಳುವ ಮೊಬೈಲ್ ಕೊಂಡುಕೊಳ್ಳುವಷ್ಟು ಸಾಮರ್ಥ್ಯ ಇರುವುದಿಲ್ಲ. ಕೆಲವೊಂದು ಮನೆಯಲ್ಲಿ ಮೊಬೈಲ್ ಇದ್ದರೂ internet ಸಮಸ್ಯೆಯಾಗಿದ್ದು, ಮಕ್ಕಳು online ಪಾಠದಿಂದ ವಂಚಿತರಾಗಬಾರದೆಂದು ದಿನಕ್ಕೊಂದು ಕಡೆ ಜನವಸತಿ ಪ್ರದೇಶಕ್ಕೆ ಭೇಟಿಕೊಟ್ಟು ನಮ್ಮ ಶಾಲಾ ವಿಧ್ಯಾರ್ಥಿಗಳಿಗೆ ಮನೆ ಪಾಠ ಹೇಳಿ ಕೊಡಲು ನಿರ್ಧರಿಸಿದ್ದೇವೆ ಎಂದು ಶಿಕ್ಷಕ ಸುಧಾಕರ ಪೊಸ್ರಾಲು ತಿಳಿಸಿದರು.
ವರದಿ: ಹರೀಶ್ ಸಚ್ಚೇರಿಪೇಟೆ