ಕಡೆಗಣನೆಗೆ ಗುರಿಯಾಗಿರುವ ಗಡಿಗ್ರಾಮ ಟಿ.ಕಲ್ಲಳ್ಳಿ ಗೊಲ್ಲರಟ್ಟಿ

0

ಬಳ್ಳಾರಿ ಜಿಲ್ಲೆ ಕೂಡ್ಲಿಗಿ ತಾಲೂಕು ಪೂಜಾರಳ್ಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿ,ತಾಲೂಕಿನ ಗಡಿಗ್ರಾಮ ಟಿ.ಕಲ್ಲಳ್ಳಿ ಗೊಲ್ಲರಟ್ಟಿ.ತಾಲೂಕು ಆಡಳಿತದಿಂದ ಅಕ್ಷರಸಃ ಕಡೆಗಣನೆಗೆ ಗುರಿಯಾಗಿದೆ ಎಂದು ದೂರಿದ್ದಾರೆ,ಗ್ರಾಮದ ಪ್ರಜ್ಞಾವಂತರು ಹಾಗೂ ಗ್ರಾಮಸ್ಥರು ತಾಲೂಕಾಡಳಿತಕ್ಕೆ ಹಿಡಿಶಾಪ ಹಾಕುತ್ತಿದ್ದಾರೆ.ಮೂಲಭೂತ ಸೌಕಯ೯ಗಳ ಪರಿಚಯವೇ ಗೊಲ್ಲರಟ್ಟಿಗೆ ಇಲ್ಲವಾಗಿದೆ,ಚರಂಡಿಗಳಿಲ್ಲ,ಗ್ರಾಮಕ್ಕೆ ಸಂಪಕ೯ ಸಾಧಿಸುವ ರಸ್ಥೆ ಇಲ್ಲ,ಕುಡಿಯುವ ನೀರಿಗಾಗಿ ಹಾಹಾಕಾರ,ಬೀದಿ ಕಂಬಳಿಲ್ಲ ಕಂಬಳಿರುವೆಡೆಗಳಲ್ಲಿ ದೀಪಗಳಿಲ್ಲ.ಈಗೆ ಹತ್ತಾರು ಇಲ್ಲ,ಕೊರತೆ,ಅಭಾವ,ಅವ್ಯವಸ್ಥೆಗಳ ಪಟ್ಟಿ ಬೆಳೆಯುತ್ತದೆ.ಇದಕ್ಕೆ ಕಾರಣ ಗ್ರಾಪಂ ಅಭಿವೃದ್ಧಿ ಅಧಿಕಾರಿ ಹಾಗೂ ತಾಲೂಕು ಇಲಾಖಾದಿಕಾರಿಗಳ ದಿವ್ಯ ನಿಲ೯ಕ್ಷ್ಯ,ಗ್ರಾ ಪಂ,ತಾಪಂ,ಜಿಪಂ ಹಾಗೂ ತಾಲೂಕಿನ ಪ್ರಭಾವಿ ಜನಪ್ರತಿನಿಧಿಗಳ ಡೋಂಗೀ ತನವೇ ಕಾರಣವಾಗಿದೆ ಎನ್ನುತ್ತಾರೆ,ಗ್ರಾಮದ ಸಾಮಾಜಿಕ ಕಾಯ೯ಕತ೯ರು.ಗ್ರಾಮ ಈವರೆಗೂ ನೈಮ೯ಲ್ಯತೆಯನ್ನೇ ಕಂಡಿಲ್ಲ,ರಸ್ಥೆಗಳೇ ಚರಂಡಿಗಳಾಗಿವೆ ರಸ್ಥೆಯ ತೆಗು ಗುಂಡಿಗಳಲ್ಲಿ ತ್ಯಾಜ್ಯ ನೀರು ಕಸ ಕೊಳೆತು ನಾರುತ್ತಿವೆ,ಸೊಳ್ಳೆ, ಸಾಂಕ್ರಾಮಿಕ ಕ್ರಿಮಿಗಳ ಕಾಖಾ೯ನೆಗಳಾಗಿವೆ.ಇದರಿಂದಾಗಿ ಗ್ರಾಮದೆಲ್ಲೆಡೆ ಸ‍ಾಂಕ್ರ‍ಮಿಕ ರೋಗಗಳ ಪ್ರತಿಧ್ವನಿ ಹೆಚ್ಚಾಗಿದೆ ಎನ್ನುತ್ತಾರೆ ಗ್ರಾಮಸ್ಥರು.ಕುಡಿಯೋ ನೀರಿನ ನಳ ಇಡೀ ಗ್ರಾಮಕ್ಕೆ ಒಂದೇ ಒಂದಿದ್ದು,ನೀರಿಗಾಗಿ ನಿತ್ಯ ಹಾಹಾಕಾರ ನಿಮಾ೯ಣವಾಗಿದೆ ಎನ್ನುತ್ತಾರೆ ಹಿರಿಯರು.ಕೂಡ್ಲಿಗಿ ತಾಲೂಕಿನ ಗಡಿ ಗ್ರ‍ಾಮ ಟಿ.ಕಲ್ಲಳ್ಳಿ ಗ್ರಾಮ ಹಾಗೂ ಕಲ್ಲಳ್ಳಿ ಗೊಲ್ಲರಟ್ಟಿ ಗ್ರಾಮ,ತಾಲೂಕು ಆಡಳಿತ ಹಾಗೂ ತಾಲೂಕು ಮಟ್ಟದ ವಿವಿದ ಇಲಾಖೆಗಳಿಂದ,ನಿರಂತರ ಕಡೆಗಣನೆಗೆ ಗುರಿಯಾಗುತ್ತ‍ಲಿದೆ.ಇದು ಹೀಗೆ ಮುಂದುವರೆದಲ್ಲಿ ತಾಪಂ ಕಛೇರಿಗೆ ಬೀಗ ಹಾಕಿ ಪ್ರತಿಭಟಿಸಲಾಗುವುದೆಂದು ಈ ಮೂಲಕ ಗ್ರಾಮಸ್ಥರು ಎಚ್ಚರಿಸಿದ್ದಾರೆ. ಗಡಿಗ್ರಾಮಗಳು ಪ್ರತಿಷ್ಠೆಯ ಪ್ರತೀಕ- ತಾಲೂಕಿನ ಗಡಿಗ್ರಾಮಗಳು ಆಯಾ ತೂಕಿನ ಪ್ರತಿಷ್ಠೆಯ ಪ್ರತೀಕವಾಗಿವೆ,ಇದನ್ನು ಕ್ಷೇತ್ರದ ಶ‍ಸಕರು,ಪ್ರಭಾವಿ ಜನಪ್ರತಿನಿಧಿಗಳು,ತಾಲೂಕು ಆಡಳಿತ,ತಾಲೂಕು ಮಟ್ಟದ ಎಲ್ಲಾ ಇಲಾಖಾಧಿಕಾರಿಗಳು ಗಮನದಲ್ಲಿರಿಸಿಕೊಳ್ಳಬೇಕಿದೆ.
ತಾಲೂಕಿನ ಎಲ್ಲಾ ಗಡಿ ಗ್ರಾಮಗಳು ತಾಲೂಕನ್ನು ಪ್ರತಿನಿಧಿಸುತ್ತವೆ,ತಾಲೂಕು ಆಡಳಿತ ಹಾಗೂ ಕ್ಷೇತ್ರದ ಶಾಸಕರು,ಗಡಿಗ್ರಾಮಗಳ ಅಭಿವೃದ್ಧಿಗೆ ವಿಷೇಶ ಒತ್ತು ನೀಡಬೇಕಿದೆ.ಪ್ರಭಾವಿ ಜನಪ್ರತಿನಿಧಿಗಳು ಈ ಗ್ರಾಮಗಳನ್ನು ತಾಲೂಕಿನ ತಮ್ಮೆಲ್ಲರ ಪ್ರತಿಷ್ಠಿತ ಗ್ರಾಮಗಳೆಂದು ಪರಿಗಣಿಸಬೇಕಿದೆ. ನಿಲ೯ಕ್ಷಿಸಿದ್ದಲ್ಲಿ ತಾಲೂಕಾಧಿಕಾರಿಗಳು ಜನಪ್ರತಿನಿಧಿಗಳು,ತಮ್ಮ ಪ್ರತಿಷ್ಠೆಗೆ ಮತ್ತು ಸ್ವಾಭಿಮಾನಕ್ಕೆ ತಾವೇ ದಖ್ಖೆ ತಂದುಕೊಂಡಂತಾಗುತ್ತದೆ.ಇದು ಕಲ್ಲಳ್ಳಿ ಗ್ರಾಮಕ್ಕೆ ಮಾತ್ರ ಸೀಮಿತವಾದ ವಿಷಯವಲ್ಲ, ಇದನ್ನು ಮೊದಲು ಅವರು ತಿಳಿದು ಶೀಘ್ರವೇ ಗಡಿಗ್ರಾಮಗಳಿಗೆ ಖುದ್ದು ಬೆಟ್ಟಿಕೊಡಬೇಕಿದೆ.ಸ್ಥಳೀಯ ಆಡಲಕಿತ ಹಾಗೂ ಗ್ರಾಮ ಪಂಚಾಯ್ತಿ ಅಧಿಕಾರಿಗಳನ್ನು ಚುರುಕುಗೊಳಿಸಬೇಕಿದೆ.ಪ್ರತಿ ಗಡಿ ಗ್ರಾಮಗಳಿಗೂ ಮೂಲಭೂತ ಸೌಕಯ೯ಗಳನ್ನು, ಸಮಪ೯ಕವಾಗಿ ಒದಗಿಸಬೇಕಿದೆ ಎಂದು ವಂದೇ ಮಾತರಂ ಜಾಗೃತಿ ವೇದಿಕೆ ಈ ಮೂಲಕ ಒತ್ತಾಯಿಸಿದೆ.

LEAVE A REPLY

Please enter your comment!
Please enter your name here