ಯುಪಿಎಸ್‌ಸಿ ಪರೀಕ್ಷೆಯಲ್ಲಿ ೫೯೪ ನೇ ರ್ಯಾಂಕ್ ಪಡೆದ ದರ್ಶನ್‌ಗೆ ಸ್ವಗ್ರಾಮದಲ್ಲಿ ಅದ್ಧೂರಿ ಸ್ವಾಗತ…
ಹಾಸನ ಜಿಲ್ಲೆ, ಅರಸೀಕೆರೆ ತಾಲ್ಲೂಕಿನ, ಹರಳಕಟ್ಟೆ ಗ್ರಾಮದ ದರ್ಶನ್…
ಯುಪಿಎಸ್‌ಸಿಯಲ್ಲಿ ೫೯೪ ನೇ ರ್ಯಾಂಕ್ ಬಂದ ನಂತರ ಇದೇ ಮೊದಲ ಬಾರಿಗೆ ಗ್ರಾಮಕ್ಕೆ ಆಗಮಿಸಿದ್ದ ದರ್ಶನ್..
ದರ್ಶನ್‌ಗೆ ಸ್ವಗ್ರಾಮದಲ್ಲಿ ಪೂರ್ಣಕುಂಭ ಸ್ವಾಗತ.. ತೆರದ ಜೀಪಿನಲ್ಲಿ ವಾದ್ಯಗೋಷ್ಟಿಯೊಂದಿಗೆ ಅದ್ಧೂರಿ ಮೆರವಣಿಗೆ.. ಗ್ರಾಮಸ್ಥರಿಂದ ಸನ್ಮಾನ..
ಪ್ರಾಥಮಿಕ ಶಿಕ್ಷಣ ಸ್ವಗ್ರಾಮದಲ್ಲಿ ಮುಗಿಸಿ, ೫ ನೇ ತರಗತಿಯಿಂದ ೮ ನೇ ತರಗತಿ ರಾಷ್ಟ್ರೋತ್ತಾನ ಶಾಲೆ, ಬಳ್ಳಾರಿ ವ್ಯಾಸಂಗ ಮಾಡಿ, ೯ ರಿಂದ ೧೦ ನೇ ತರಗತಿ ತಿಪಟೂರಿನ ಎಸ್‌ವಿಪಿ ಶಾಲೆಯಲ್ಲಿ ಓದಿದ್ದ ದರ್ಶನ್..
೨೦೦೯ ರಲ್ಲಿ ಮೆಕ್ಯಾನಿಕಲ್ ಇಂಜಿನಿಯರಿಂಗ್ ಕಂಪ್ಲೀಟ್ ಮಾಡಿದ್ದರು..
ಇನ್ಫೋಸಿಸ್ ನಲ್ಲಿ ಒಟ್ಟು ಆರು ವರ್ಷ ಕೆಲಸ ಮಾಡಿದ್ದರು. ಅದರಲ್ಲಿ ಎರಡೂವರೆ ವರ್ಷ ಅಮೆರಿಕಾದಲ್ಲಿ ಕೆಲಸ..
ನಂತರ ಕೆಲಸ ಬಿಟ್ಟು ಯುಪಿಎಸ್‌ಸಿ ತಯಾರಿ ನಡೆಸಿ, ನಾಲ್ಕನೇ ಪ್ರಯತ್ನದಲ್ಲಿ ಯುಪಿಎಸ್‌ಸಿ ಪರೀಕ್ಷೆಯಲ್ಲಿ ಸಫಲ..
ಯುಪಿಎಸ್‌ಸಿ ಪರೀಕ್ಷೆ ಕನ್ನಡ ಮಾಧ್ಯಮದಲ್ಲೇ ಬರೆದು ಪಾಸ್ ಮಾಡಿದ್ದ ದರ್ಶನ್..
https://youtu.be/g-8tO7qXdUQ