ಕನ್ನಡಿಗರ ಭಾವನೆಗೆ ಧಕ್ಕೆ ತರುವಂಥ ಯಾವದೇ ಹೇಳಿಕೆ ನೀಡಿಲ್ಲ:ಸಚಿವ ಶ್ರೀಮಂತ ಪಾಟೀಲ್ ಸ್ಪಷ್ಟನೆ

0

ಮಹಾರಾಷ್ಟ್ರ ಸಚಿವರಿಗೆ ಕನ್ನಡ ಭಾಷೆ ಬರದ ಹಿನ್ನೆಲೆ. ನಮ್ಮ ಮತಕ್ಷೇತ್ರದ ಬಳ್ಳಿಗೇರಿ ಗ್ರಾಮದಲ್ಲಿ ಸದ್ಯ ಆರಂಭ ಆಗುತ್ತಿರುವ ಸಕ್ಕರೆ ಕಾರ್ಖಾನೆಯಿಂದ ಈ ಭಾಗದ ರೈತರಿಗೆ ಅನುಕೂಲವಾಗಲಿದ್ದು ಸ್ಥಳಿಯರಿಗೆ ಉದ್ಯೋಗ ಕೊಡಿ ಎಂದು ಮರಾಠಿ ಭಾಷೆಯಲ್ಲಿ ಮನವರಿಕೆ ಮಾಡಿದ್ದೇನೆ.ನಮಗೆ ಕನ್ನಡ ಭಾಷೆಯ ಬಗ್ಗೆ ಅಭಿಮಾನವಿದೆ.ವಿಧಾನಸೌಧದಲ್ಲಿಯೂ ಕನ್ನಡ ಮಾತನಾಡುತ್ತೇವೆ.ಯಾರೂ ನನ್ನ ಮರಾಠಿ ಭಾಷಣವನ್ನು ತಪ್ಪಾಗಿ ಅರ್ಥೈಸಬಾರದು ಎಂದು ಜವಳಿ ಖಾತೆ ಸಚಿವ ಶ್ರೀಮಂತ ಪಾಟೀಲ ನವಕರ್ನಾಟಕ ಟೈಮ್ಸ್ ಗೆ ಸ್ಪಷ್ಟನೆ ನೀಡಿದ್ದಾರೆ

ಖಾಸಗಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಹಾರಾಷ್ಟ್ರದ ಸಚಿವರಿಗೆ ಜನತೆಯ ಸಮಸ್ಯೆ ಬಗ್ಗೆ ತಿಳಿಹೇಳುವ ಸಲುವಾಗಿ ಮರಾಠಿಯಲ್ಲಿ ಹೇಳಿದ್ದನ್ನು ಬಿಟ್ಟರೆ ಇನ್ನುಳಿದ ಎಲ್ಲ ಮಾತುಗಳನ್ನು ಕನ್ನಡದಲ್ಲಿಯೇ ಮಾತನಾಡಿದ್ದೇನೆ. ಇದನ್ನು ಯಾರು ತಪ್ಪು ಅರ್ಥೈಸಿಕೊಳ್ಳಬಾರದೆಂದು ಜವಳಿ ಮತ್ತು ಅಲ್ಪಸಂಖ್ಯಾತ ಇಲಾಖೆ ಸಚಿವ ಶ್ರೀಮಂತ ಪಾಟೀಲ್ ಕೆಂಪವಾಡದ ತಮ್ಮ ಸಕ್ಕರೆ ಕಾರ್ಖಾನೆ ವಸತಿಗ್ರಹದಲ್ಲಿ ಮಾಧ್ಯಮಗಳಿಗೆ ಸ್ಪಷ್ಟನೆ ನೀಡಿದ್ದಾರೆ

ವರದಿ ಡಾ.ಆರ್ ಎಸ್ ದೊಡ್ಡನಿಂಗಪ್ಪಗೋಳ ಅಥಣಿ

LEAVE A REPLY

Please enter your comment!
Please enter your name here