ಕರಡಿಗಳು ಪ್ರತ್ಯಕ್ಷ | ನಿರುಪಯುಕ್ತ ಕರಡಿ ದಾಮ | ಗಾಬರಿಗೊಂಡ ಗ್ರಾಮಸ್ಥರು ಜಿಲ್ಲಾಧಿಕಾರಿಗಳಲ್ಲಿ ಮೊರೆ | ವಿಡಿಯೋ |

0

ಭೀಮಸಮುದ್ರಗ್ರಾಮ:

ಮೂರುಕರಡಿಗಳ ಪ್ರತ್ಯಕ್ಷ-ನಿರುಪಯುಕ್ತ ಕರಡಿ ದಾಮ, ಜಿಲ್ಲಾಧಿಕಾರಿಗಳಲ್ಲಿ ಮೊರೆ

<->ಬಳ್ಳಾರಿ ಜಿಲ್ಲೆ ಕೂಡ್ಲಿಗಿ ತಾಲೂಕು ಭೀಮಸಮುದ್ರ

ಗ್ರಾಮದಲ್ಲಿ,ಜುಲೈ22ರಂದು ಮೂರು ಕರಡಿಗಳು ಗ್ರಾಮಕ್ಕೆ ಹೊಂದೊಕೊಂಡಿರುವ ತೋಟದ ಹತ್ತಿರ ಪ್ರತ್ಯಕ್ಷಗೊಂಡಿವೆ.ಜುಲೈ18ರಂದು

ಗುಂಡುಮುಣುಗು ಗ್ರಾಮದ ಹೊರವಲಯಲ್ಲಿ ಭಾರೀ ಗಾತ್ರದ ಕರಡಿಯೊಂದು ಪತ್ಯಕ್ಷವಾಗಿತ್ತು.ತಾಲೂಕಿನ ಗ್ರಾಮೀಣಭಾಗಗಳಲ್ಲಿ ನಿರಂತರ

ಕರಡಿಗಳು ಪತ್ಯಕ್ಷವಾಗುತ್ತಿದ್ದು, ರೈತರು ಹೊಲಗಳಲ್ಲಿ ತಮ್ಮ ಚಟುವಟಿಕೆಗಳಲ್ಲಿ ನಿರಾತಂಕವಾಗಿ ತೊಡಗಿಸಕೊಳ್ಳುವಲ್ಲಿ

ಅಸಾಧ್ಯವಾಗಿದೆ.ಕಾಡುಹಂದಿಗಳು,ನವಿಲುಗಳು,ಕರಡಿಗಳು ತಾಲೂಕಿನ ವಿವಿದ ಭಾಗದ ಹೊಲಗಳಲ್ಲಿ ಪದೇ ಪದೇ

ಕಾಣಸಿಗುತ್ತಿವೆ.ತಾಲೂಕಿನಲ್ಲಿ ಕರಡಿದಾಮ ಇದೆಯಾದರೂ ಯಾವುದೇ ಪ್ರಯೋಜನವಾಗುತ್ತಿಲ್ಲ,ಕೇವಲ ಕಾಗದಪತ್ರಗಳಲ್ಲಿ

ನಿವ೯ಹಣೆಯಾಗುತ್ತಿದೆ.ಯಾವುದೇ ರೀತಿಯ ಅನುಕೂಲಗಳು ಕರಡಿದಾಮ ದಿಂದ ಆಗುತ್ತಿಲ್ಲ ಎಂದು ಗ್ರಾಮಸ್ಥರು ಆಕ್ರೋಶ

ವ್ಯಕ್ತಪಡಿಸಿದ್ದಾರೆ.ಈ ಸಂಬಂದ ಅರಣ್ ಯಇಲಾಖಾಧಿಕಾರಿ ಈವರೆಗೂ ಸ್ಪಂಧಿಸುತ್ತಿಲ್ಲ ಎಂದು ಹೊಸಹಳ್ಳಿ ಹಾಗು ಗುಡೇಕೋಟೆ

ಹೋಬಳಿಯ ರೈತ ಮುಖಂಡರು ಗಂಭೀರಾಗಿ ಆರೋಪಿಸಿದ್ದಾರೆ.ತಾಲೂಕಿನಲ್ಲಿಯ ಕೆಲ ಅರಣ್ಯಪ್ರದೇಶಗಳಿಗೆ ಹೊಂದಿಕೊಂಡಿರುವಲ್ಲಿ

ಗಣಿಗಾರಿಕೆಗಳು,ಕೆಲ ಅರಣ್ಯ ಪ್ರದೇಶದಲ್ಲಿ ಹಗಲಿರುಳು ಅಕ್ರಮ ಮರಳುಗಾರಿಕೆ ಜರುಗುತ್ತಿದೆ ಎಂಬ ದೂರುಗಳಿವೆ ಎಂದು ರೈತಮುಖಂಡರು

ತಿಳಿಸಿದ್ದಾರೆ.ಈ ರೀತಿಯ ದುಷ್ಪರಿಣಾಮದಿಂದಾಗಿ,ಭಾರೀ ಪ್ರಭಾವಶಾಲಿ ಸ್ಪೋಟಕಗಳ ಬಳಕೆ ಮತ್ತು ಭಾರೀವಾಹನಗಳ ಬಳಕೆಗೆ ಬೆದರಿ

ಕೆಲ ವನ್ಯಮೃಗಗಳು ಗ್ರಾಮಗಳತ್ತ ಲಗ್ಗೆ ಇಕ್ಕುತ್ತಿವೆ ಎಂದು ಹಲವು ಗ್ರಾಮಸ್ಥರು ಅಭಿಪ್ರಾಯ ತಿಳಿಸಿದ್ದಾರೆ.ಜಿಲ್ಲಾಧಿಕಾರಿಗಳು ಕರಡಿದಾಮಕ್ಕೆ

ಬೆಟ್ಟಿಕೊಡಬೇಕು,ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕೆಂದು ವಂದೇ ಮಾತರಂ ಜಾಗೃತ ವೇದಿಕೆ ಜಿಲ್ಲಾಧ್ಯಕ್ಷ

ವಿ.ಜಿ.ವೃಷಭೇಂದ್ರ,ಭೀಮಸಮುದ್ರ,ಗುಂಡುಮುಣುಗು,ಕಡೇಕೊಳ,ಗುಡೇಕೋಟೆ,ಹೊಸಹಳ್ಳಿ ಗ್ರಾಮಗಳ

ಮುಖಂಡರು,ದಲಿತಸಂಘಟನೆ,ರೈತ ಸಂಘಟನೆ,ಮಹಿಳಾ ಸಂಘಟನೆ,ಕನ್ನಡ ಸೆನೆ,ಕನಾ೯ಟಕ ರಕ್ಷಣಾ ವೇದಿಕೆ ಸೇರಿದಂತೆ ಹಲವು

ಸಂಘಟನೆಗಳ ಪದಾಧಿಕಾರಿಗಳು,ಈ ಮೂಲಕ ಜಿಲ್ಲಾಧಿಕಾರಿಗಳಲ್ಲಿ ಒತ್ತಾಯಿಸಿದ್ದಾರೆ.

✍️ ವಂದೇ ಮಾತರಂ ವಿ.ಜಿ.ವೃಷಭೇಂದ್ರ ಕೂಡ್ಲಿಗಿ-

LEAVE A REPLY

Please enter your comment!
Please enter your name here