ಕರಣ್​ ಜೋಹರ್​ ಮಾಡಿದ್ರು ಪಾರ್ಟಿ- ಡ್ರಗ್ಸ್​ ನಶೆಯಲ್ಲಿ ಕುಣಿದಾಡಿದ್ರು ತಾರೆಯರು: ದೂರು ದಾಖಲು

0

ಬಾಲಿವುಡ್​ಗೂ ಡ್ರಗ್ಸ್​ ನಂಟು ಅಂಟಿರುವ ವಿವಾದ ಇದೀಗ ಬೇರೆ ಬೇರೆ ಸ್ವರೂಪ ತಾಳುತ್ತಿದೆ. ಖ್ಯಾತ ನಿರ್ದೇಶಕ ಕರಣ್​ ಜೋಹರ್​ ಏರ್ಪಡಿಸಿದ್ದ ಪಾರ್ಟಿಯಲ್ಲಿ ಘಟಾನುಘಟಿ ನಟ-ನಟಿಯರು ಡ್ರಗ್ಸ್​ ಸೇವನೆ ಮಾಡಿದ್ದರು ಎಂದು ಶಿರೋಮಣಿ ಅಖಾಲಿ ದಳದ ಮುಖಂಡ ಮಂಜಿಂದರ್‌ ಸಿಂಗ್‌ ಸಿರ್ಸಾ ದೂರು ದಾಖಲು ಮಾಡಿದ್ದಾರೆ.

ಈ ಕುರಿತು ವಿಡಿಯೋವನ್ನು ಕೂಡ ಅವರು ದೂರಿನ ಜತೆ ನೀಡಿದ್ದಾರೆ. ಮಾದಕ ವಸ್ತು ನಿಯಂತ್ರಣ ಬ್ಯೂರೋ ಮುಖ್ಯಸ್ಥರಾದ ರಾಕೇಶ್‌ ಆಸ್ತಾನ ಅವರನ್ನು ದೆಹಲಿಯಲ್ಲಿ ಭೇಟಿಯಾಗಿರುವ ಮಂಜಿಂದರ್‌ ಸಿಂಗ್‌ ಸಿರ್ಸಾ ದೂರು ನೀಡಿದ್ದಾರೆ.

ಈ ಹಿಂದೆ ಕರಣ್‌ ಜೋಹರ್‌ ಅವರು ಪಾರ್ಟಿ ಏರ್ಪಡಿಸಿದ್ದರು. ಅದರಲ್ಲಿ ಹಿಂದಿ ಚಿತ್ರರಂಗದ ಅನೇಕ ನಟ-ನಟಿಯರು ಭಾಗವಹಿಸಿದ್ದರು. ಅವರೆಲ್ಲರೂ ಡ್ರಗ್ಸ್‌ ಸೇವನೆ ಮಾಡಿದ್ದರು ಎಂದು ಮಂಜಿಂದರ್‌ ಸಿಂಗ್‌ ಆರೋಪಿಸಿದ್ದಾರೆ. 2019ರಲ್ಲಿ ಈ ಪಾರ್ಟಿ ನಡೆದಿತ್ತು ಎನ್ನಲಾಗಿದೆ.

LEAVE A REPLY

Please enter your comment!
Please enter your name here