ಕರಾವಳಿಯ ಕೆಲವಡೆ ಹಸುರು ಬಣ್ಣಕ್ಕೆ ತಿರುಗಿದ ಸಮುದ್ರದ ನೀರು

0

ಕರಾವಳಿಯ ಕೆಲವಡೆ ಸಮುದ್ರದ ನೀರು ಹಸುರು ಬಣ್ಣದಲ್ಲಿ ರಾತ್ರಿ ವೇಳೆ ನೀಲಿ ಬಣ್ಣದಲ್ಲೂ ಗೋಚರವಾಗಿರುವುದು ಮಂಗಳವಾರ ಕಂಡು ಬಂದಿದೆ.

ಸಮೀಪದ ಹೊಸಬೆಟ್ಟು, ಮುಕ್ಕ ಸಮುದ್ರದಲ್ಲಿ ಈ ರೀತಿ ಗೋಚರವಾಗಿದ್ದು ಕೆಲವು ದಿನಗಳಿಂದ ಸುರಿದ ಭಾರೀ ಮಳೆಯಿಂದಾಗಿ ವಿವಿಧೆಡೆಯಿಂದ ನೀರು ಸಮುದ್ರ ಸೇರಿದೆ. ನೀರಿನಲ್ಲಿ ಅತೀ ಸೂಕ್ಷ್ಮ ಆಲ್ಗಾಲ್ ನಿಂದ‌ ಹೆಚ್ಚಾಗಿ ಉಪ್ಪು ನೀರಿನ ಬಣ್ಣ ಬಣ್ಣ ಬದಲಾಗುತ್ತದೆ. ಹೀಗಾಗಿ ಸಮುದ್ರದ ಬಣ್ಣ ಹಸುರಾಗಿ ಗೋಚರಿಸುತ್ತದೆ. ಇದು ಸಮುದ್ರ ತೀರದುದ್ದಕ್ಕೂ ಗೋಚರಿಸದೇ ಕೆಲವು ಭಾಗದ ದಡದಲ್ಲಿ ಮಾತ್ರ ಕಂಡು ಬರುತ್ತದೆ ಎಂದು ತಜ್ಞರ ಅಭಿಪ್ರಾಯಟ್ಟಿದ್ದಾರೆ. ಆದರೆ ಸಮುದ್ರ ಮಾಲಿನ್ಯ ಇದಕ್ಕೆ ಕಾರಣವೇ ಎಂಬುದನ್ನು ಪರಿಶೀಲಿಸಲು ಮಂಗಳವಾರ ಶಾಸಕ ಡಾ| ಭರತ್‌ ಶೆಟ್ಟಿ ವೈ. ಅವರ ಸೂಚನೆ ಮೇರೆಗೆ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಕಾರಿ ಕೀರ್ತಿಕುಮಾರ್‌ ನೇತೃತ್ವದಲ್ಲಿ ಅಧಿಕಾರಿಗಳು ಸಮುದ್ರ ದಡದಿಂದ ನೀರು ಸಂಗ್ರಹಿಸಿ ಲ್ಯಾಬ್‌ಗ ಕಳಿಸಿದ್ದಾರೆ.

ಕೋಸ್ಟ್‌ಗಾರ್ಡ್‌ ಮಾಲಿನ್ಯ ಪರೀಕ್ಷೆಗೆ ಸಮುದ್ರದ ನೀರನ್ನು ಪರಿಶೀಲನೆಗೆ ಕೊಂಡೊಯ್ದಿದೆ ಎಂದು ತಿಳಿದುಬಂದಿದೆ.

LEAVE A REPLY

Please enter your comment!
Please enter your name here