ಕರೋನ‌ಗೆದ್ದು ಬಂದ ಸಿಂಗಂ..!

0

ರಾಜ್ಯದಾದ್ಯಂತ ಮಹಾಮಾರಿ ಕರೋನ‌ ತನ್ನ ವಕ್ರದೃಷ್ಠಿಯನ್ನ ಬೀರುತ್ತಲೇ ಇದೆ. ಆದ್ರೆ ಈ ಕರೋನ ನಿಯಂತ್ರಣಕ್ಕೆ ಅನೇಕ ಕರೋನ ವಾರಿಯರ್ಸ್ ಗಳು ತಮ್ಮ ಪ್ರಾಣವನ್ನೇ ಪಣಕ್ಕಿಟ್ಟು ಹಗಲಿರುಳು ಕಾರ್ಯನಿರ್ವಹಿಸುತ್ತಿದ್ದಾರೆ. ಇದಕ್ಕೆ ಪೊಲೀಸ್ ಇಲಾಖೆಯೂ ಹೊರತಾಗಿಲ್ಲ. ಹೀಗೆ ಹಗಲಿರುಳು ಕಾರ್ಯನಿರ್ವಹಿಸಿದ್ದ ವಾರಿಯರ್ಸ್ ಪೈಕಿ ಸಿಂಗಂ ಎಂದೇ ಖ್ಯಾತಿ ಪಡೆದುಕೊಂಡಿರುವ ಕುಂದಗೋಳ ತಾಲೂಕಿನ ಗುಡಗೇರಿ ಪೊಲೀಸ್ ಠಾಣಾ ಇನ್ಸ್ ಪೆಕ್ಟರ್ ನವೀನ್ ಜಕ್ಕಲಿಯವರು ಇದೀಗ ಕರೋನ ಗೆದ್ದು ಬಂದಿದ್ದಾರೆ. ಕಳೆದ ಒಂದು ವಾರದ ಹಿಂದೆಯಷ್ಟೇ ಪಾಸಿಟಿವ್ ಬಂದ ಹಿನ್ನೆಲೆ ಧಾರವಾಡದ ಖಾಸಗಿ ಆಸ್ಪತ್ರೆಯಲ್ಲಿ ಕರೋನ ವಿರುದ್ಧ ಹೋರಾಡುವ ಮೂಲಕ ಚಿಕಿತ್ಸೆ ಪಡೆಯುತ್ತಿದ್ದ ಇನ್ಸ್ ಪೆಕ್ಟರ್ ನವೀನ್ ಜಕ್ಕಲಿ ಇಂದು ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದು ಇಡೀ ಠಾಣೆಯ ಸಿಬ್ಬಂಧಿ ಬಳಗದಲ್ಲಿ ಸಂತಸವನ್ನುಂಟು ಮಾಡಿದೆ. ಇನ್ನು ಇನ್ಸ್ ಪೆಕ್ಟರ್ ಆಸ್ಪತ್ರೆಯಿಂದ ಬಿಡುಗಡೆಯಾಗುತ್ತಿದ್ದಂತೆಯೇ ತಾಲೂಕಿನ ಹಾಗೂ ಗುಡಗೇರಿ ಠಾಣೆಯ ಪೊಲೀಸ್ ಸಿಬ್ಬಂಧಿ ತಮ್ಮ ಅಧಿಕಾರಿಗೆ ಅಭಿನಂದನೆ ಸಲ್ಲಿಸುವ ಮೂಲಕ ಠಾಣೆಗೆ ಸ್ವಾಗತಿಸಿಕೊಂಡರು.

ಇನ್ನು ಇಡೀ ಕುಂದಗೋಳ ತಾಲೂಕಿನಾದ್ಯಂತ ತಮ್ಮದೇ ಅಭಿಮಾನಿ ಬಳಗವನ್ನ ಹೊಂದಿರುವ ಇನ್ಸ್ ಪೆಕ್ಟರ್ ನವೀನ್ ಜಕ್ಕಲಿ ತಮ್ಮ ಪೊಲೀಸ್ ಠಾಣೆಗೆ ದೇಶದಲ್ಲೇ ಟಾಪ್ ಟೆನ್ ಪೊಲೀಸ್ ಠಾಣೆಗಳಲ್ಲಿ ಐದನೇ ಉತ್ತಮ ಪೊಲೀಸ್ ಠಾಣೆ ಎಂಬ ಪ್ರಶಂಸೆಯನ್ನು ಕೇಂದ್ರ ಸರ್ಕಾರದಿಂದ ಗಿಟ್ಟಿಸಿಕೊಂಡಿತ್ತು. ಅಲ್ದೆ ತಾಲೂಕಿನ ಗುಡಗೇರಿ ವ್ಯಾಪ್ತಿಯಲ್ಲಿ ಬರುವ 21 ಕ್ಕೂ ಅಧಿಕ ಗ್ರಾಮಗಳಲ್ಲಿ ಉತ್ತಮ ಜಾಗೃತಿ ಹಾಗೂ ಸಾರ್ವಜನಿಕರ ಸಮಸ್ಯೆಗಳಿಗೆ ಉತ್ತಮ‌ಸ್ಪಂದನೆ ನೀಡುವ ಮೂಲಕ ಜನಮನ್ನಣೆ ಪಡೆದಿರುವ ನವೀನ್ ಜಕ್ಕಲಿ ಅವರು ಕರೋನ‌ ಗೆದ್ದು ಬಂದಿದ್ದು, ಠಾಣೆಯ ಸಿಬ್ಬಂಧಿಗಳಿಗಷ್ಟೇ ಅಲ್ದೆ ತಾಲೂಕಿನ ಸಾರ್ವಜನಿಕರಲ್ಲೂ ಸಂತಸ ಮೂಡಿಸಿದೆ. ಅಲ್ದೆ ಲಾಕ್ ಡೌನ್ ಮಧ್ಯೆಯೇ ಹೃದಯ ಸಂಬಂಧಿ ರೋಗಿಯೊಬ್ಬರಿಗೆ ರಕ್ತದ ಅವಶ್ಯಕತೆ ಇರುವ ಸಂದರ್ಭ ಸ್ವತ ಜಕ್ಕಲಿ ಅವರೇ ರೋಗಿಗೆ ಕರೆ ಮಾಡಿ ಗುಡಗೇರಿಯಿಂದ ಹುಬ್ಬಳ್ಳಿಗೆ ಆಗಮಿಸಿ ರೋಗಿಗೆ ರಕ್ತದಾನ ಮಾಡುವ ಮೂಲಕ ಮಾನವೀಯತೆ ಮೆರೆದಿದ್ದು, ಸಾರ್ವಜನಿಕ ವಲಯದಲ್ಲಿ ಪ್ರಶಂಸೆಗೆ ಪಾತ್ರರಾಗಿರುವುದನ್ನು ಇಲ್ಲಿ ಸ್ಮರಿಸಬಹುದು .

LEAVE A REPLY

Please enter your comment!
Please enter your name here