ಕರ್ನಾಟಕದ ಜೀವನದಿಯಾದ ಕಾವೇರಿ ಮಾತೆಗೆ ಕಂಟಕ…!

0

ಕಾವೇರಿ.ಕೆ.ಆರ್.ಎಸ್. ಉಳಿವಿಗಾಗಿ ಜನಾಂದೋಲನ ಸಮಿತಿಗೆ. ಸಾರಥಿಯಾದ ಸುವರ್ಣ ಕರ್ನಾಟಕ ರಕ್ಷಣಾ ಸೇನೆ.
ಮೈಸೂರು.ಕೆ.ಆರ್.ಎಸ್‌‌. ಅಣೆಕಟ್ಟಿನ ಸಮೀಪದಲ್ಲಿ ಅಕ್ರಮ ಕಲ್ಲುಗಣಿಗಾರಿಕೆ ನಡೆಸುತ್ತಿದ್ದು ಇದನ್ನು ಖಂಡಿಸಿ ಇಂದು. ಅಣೆಕಟ್ಟಿನಿಂದ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲ್ಲೂಕಿನ ತಾಲೂಕು ದಂಡಾಧಿಕಾರಿ ಕಚೇರಿವರಿಗೆ ಪಾದಯಾತ್ರೆ ನಡೆಸಿದರು.
ಇದೇ ಸಂದರ್ಭ ಮಾತನಾಡಿದ ಸುವರ್ಣ ಕರ್ನಾಟಕ ರಕ್ಷಣಾ ಸೇನೆಯ ರಾಜ್ಯ ಸಂಸ್ಥಾಪಕ ಅಧ್ಯಕ್ಷರು ಎಸ್. ರಾಘವೇಂದ್ರ ಗೌಡರವರು ಮಾತನಾಡಿ.
ಸುಮಾರು 84 ವರ್ಷಗಳ ಇತಿಹಾಸ ಹೊಂದಿರುವ.ಕೆ.ಆರ್.ಎಸ್. ಅಣೆಕಟ್ಟು ಸುಮಾರು ಎಂಟು ಜಿಲ್ಲೆಗಳ ರೈತರ ಜೀವನದಿಯಾಗಿದೆ. ಕರ್ನಾಟಕದ ಇತಿಹಾಸದ ಭವ್ಯ ಪರಂಪರೆಯಲ್ಲಿ ಈ ಅಣೆಕಟ್ಟು ಕರ್ನಾಟಕದ ಹೆಮ್ಮೆ. ಆದರೆ ಇಲ್ಲಿರುವ ಕೆಲ ಪ್ರಭಾವಿ ರಾಜಕಾರಣಿಗಳು ತಮ್ಮ ಸ್ವಾರ್ಥಕ್ಕಾಗಿ ತಮ್ಮ ಏಳಿಗೆಗಾಗಿ ಅಣೆಕಟ್ಟಿನ ಸಮೀಪ ಕಲ್ಲು ಗಣಿಗಾರಿಕೆ ನಡೆಸುತ್ತಿರುವುದನ್ನು ಖಂಡಿಸಿ ಇಂದು ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದರು.
ಅಣೆಕಟ್ಟಿನ ಸುತ್ತಲಿನ 20 ಕಿಲೋಮೀಟರ್ ವ್ಯಾಪ್ತಿಯಲ್ಲಿ ಗಣಿಗಾರಿಕೆಯನ್ನು ಶಾಶ್ವತವಾಗಿ ನಿಷೇಧಿಸಬೇಕೆಂದು ರಾಜ್ಯ ವಿಪತ್ತು ನಿರ್ವಹಣಾ ಕೇಂದ್ರವು 2018ರಲ್ಲಿ ಜಿಲ್ಲಾಡಳಿತಕ್ಕೆ ಕಟ್ಟುನಿಟ್ಟಿನ ನಿರ್ದೇಶನ ನೀಡಿದರು ಇದನ್ನು ಗಾಳಿಗೆ ತೂರಿ ರಾತೋರಾತ್ರಿ. ಮೆಗ್ಗರ್ ಬ್ಲಾಸ್ಟ್ ಗಳನ್ನು ಮಾಡುತ್ತಿರುವುದು ಖಂಡನೀಯ.
ಇದರಿಂದ ಅಣೆಕಟ್ಟು ಒಡೆದು ಹೋಗುವುದಲ್ಲದೆ.
ಅಕ್ಕಪಕ್ಕ ವಾಸಿಸುತ್ತಿರುವ ಜನರ ಬದುಕಿಗೂ ಕಂಟಕವಾಗಿದೆ. ಇದರಿಂದ . ಅವರು ಬಳಸುವ ಸಿಡಿಮದ್ದಿನಿಂದ ಪರಿಸರ ನಾಶವಾಗುವುದು ಅಲ್ಲದೆ ಜನರ ಮೇಲೆಯೂ ಪರಿಣಾಮ ಬೀರುತ್ತಿದೆ. ಇದಕ್ಕೆ ಬಳಸುವ ಸಾರಜನಿಕ ದಿಂದ ಅದೆಷ್ಟೋ ಮಹಿಳೆಯರಿಗೆ ಗರ್ಭಪಾತವಾಗುತ್ತದೆ ಅದಲ್ಲದೆ ಶುದ್ಧವಾದ ಗಾಳಿ ಇಲ್ಲದೆ ಜನರು ಕಾಯಿಲೆಗೆ ತುತ್ತಾಗುತ್ತಿದ್ದಾರೆ. ಇದ್ಯಾವುದನ್ನು ನೆನಪಿನಲ್ಲಿ ಇಟ್ಟುಕೊಳ್ಳದೆ ಪರಿಸರ ಕಾಯ್ದೆಗಳನ್ನು ಉಲ್ಲಂಘಿಸಿ ಗಣಿಗಾರಿಕೆ ನಡೆಸುತ್ತಿರುವುದು ಎಷ್ಟರ ಮಟ್ಟಿಗೆ ಸರಿ ಇದಕ್ಕೆ ಮಂಡ್ಯ ಜಿಲ್ಲಾಡಳಿತ ಕಣ್ಣಿದ್ದು ಕುರುಡರಂತೆ ಬಾಳುತ್ತಿರುವುದು ಇಡೀ ನಾಗರಿಕ ಲೋಕವೇ ತಲೆತಗ್ಗಿಸುವಂತಾಗಿದೆ. ಕಾವೇರಿ ಉಳಿವಿಗಾಗಿ ಈ ಹಿಂದೆ ಅದೆಷ್ಟು ಗಣ್ಯರು ಹೋರಾಟ ನಡೆಸಿ ಕಾವೇರಿಯನ್ನು ಉಳಿಸಿಕೊಂಡಿದ್ದಾರೆ ಅವರ ಈ ಹೋರಾಟಕ್ಕೆ ನಾವು ಎಂದಿಗೂ ಚಿರಋಣಿಯಾಗಿರಬೇಕು ಹೊರತು ಸಮಾಜಕ್ಕೆ ಮಾರಕವಾಗಬಾರದು. ಕಾವೇರಿ ಯಾರೋ ಒಬ್ಬರ ಸ್ವತ್ತು ಅಲ್ಲ ನಮ್ಮ ನಾಡಿನ ಹೆಮ್ಮೆಯ ತಾಯಿ ಕಾವೇರಿ ಇದನ್ನು ನಾವು ಕರುನಾಡ ಸಮಸ್ತ ಕನ್ನಡ ಬಂಧುಗಳು ಹೋರಾಟ ಮಾಡಿ ಉಳಿಸಿಕೊಳ್ಳಬೇಕಾಗಿದೆ. ತಾಯಿ ಕಾವೇರಿಗೆ ಇಂತಹ ಪರಿಸ್ಥಿತಿ ಬರುತ್ತದೆ ಎಂದು ಕನಸಿನಲ್ಲಿಯೂ ಕೂಡ ನಾನು ಯೋಚನೆ ಮಾಡಿರಲಿಲ್ಲ ಆದರೆ. ತಮ್ಮ ಸ್ವಾರ್ಥಕ್ಕಾಗಿ ತಾಯಿ ಕಾವೇರಿಯ ಮಡಿಲನ್ನು ಬರಿದು ಮಾಡಲು ಹೊರಟಿರುವ ಪ್ರಭಾವಿಗಳಿಗೆ ಮುಂದಿನ ದಿನಗಳಲ್ಲಿ ತಕ್ಕ ಪಾಠ ಕಲಿಸುವ ಮೂಲಕ ಯಶಸ್ವಿ ಕಾರ್ಯಾಚರಣೆ ಮಾಡುತ್ತೇವೆಂದು ತಿಳಿಸಿದರು ಇಂದು ಈ ಪಾದಯಾತ್ರೆಯಲ್ಲಿ ಮುಖ್ಯ ಪಾತ್ರ ವಹಿಸಿದ ರಾಜ್ಯ ರೈತ ಸಂಘಟನೆಗಳು ದಲಿತ ಪರ ಸಂಘಟನೆಗಳು ಹಾಗೂ ಕನ್ನಡಪರ ಸಂಘಟನೆಗಳು ನೀಡಿದ ಮನವಿಗೆ ಸ್ಪಂದಿಸದೆ ಹೋದಲ್ಲಿ ಮುಂದಿನ ದಿನಗಳಲ್ಲಿ. ಅದೇ ಅಣೆಕಟ್ಟಿನಿಂದ ಬೆಂಗಳೂರು ಬೆಂಗಳೂರು ವಿಧಾನಸೌಧದ ವರೆಗೆ ಪಾದಯಾತ್ರೆ ಮಾಡುವ ಮೂಲಕ ಉಗ್ರ ಹೋರಾಟ ಮಾಡಲಾಗುವುದು ಎಂದು ಇದೇ ಸಂದರ್ಭ ತಿಳಿಸಿದರು.
ಅದೇ ಸಂದರ್ಭ ಮಾತನಾಡಿದ ರಾಜ್ಯ ಗೌರವ ಅಧ್ಯಕ್ಷರಾದ. ಎಂ.ಬಿ‌. ಕೃಷ್ಣಮೂರ್ತಿಯವರು. ಮಾತನಾಡಿ.
ಕಳೆದ ಎರಡು ವರ್ಷಗಳ ಹಿಂದೆ ಅತಿ ಹೆಚ್ಚು ರೈತರ ಆತ್ಮಹತ್ಯೆ ನಡೆದದ್ದು ಮಂಡ್ಯ ಜಿಲ್ಲೆಯಲ್ಲಿ ಇಂದಿಗೂ ಕೂಡ ನನ್ನ ಕಣ್ಣ ಮುಂದೆ ಕಂಪಿಸುತ್ತದೆ. ಇದೇ ರೀತಿ ಮಂಡ್ಯ ಜಿಲ್ಲೆಯಲ್ಲಿ ಅಕ್ರಮ ಗಣಿಗಾರಿಕೆ ನಡೆದರೆ ಮುಂದಿನ ದಿನಗಳಲ್ಲಿ ಮಂಡ್ಯ ಜಿಲ್ಲೆಯಲ್ಲಿ ಅಲ್ಲದೆ ರಾಜ್ಯದಲ್ಲಿ ರೈತರ ಬದುಕು ಚಿಂತಾಜನಕವಾಗುತ್ತದೆ. ಕೂಡಲೇ ರಾಜ್ಯ ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಿ ಸೂಕ್ತವಾದ ಕ್ರಮವನ್ನು ಕೈಗೊಳ್ಳಬೇಕು ಎಂದು ಈ ಮೂಲಕ ತಿಳಿಸಿದರು
ಕಾರ್ಯಕ್ರಮದಲ್ಲಿ ರಾಜ್ಯ ಗೌರವ ಅಧ್ಯಕ್ಷರಾದ. ಎಂ ಬಿ ಕೃಷ್ಣಮೂರ್ತಿ. ಕಾರ್ಮಿಕ ಘಟಕದ ಉಪಾಧ್ಯಕ್ಷರಾದ ವೆಂಕಟಸ್ವಾಮಿ. ರಾಜ್ಯ ಸದಸ್ಯರು ಆದ ರಮೇಶ್ ಎನ್ ಡಿ. ರಾಜ್ಯ ಮಾಧ್ಯಮ ಘಟಕದ ಅಧ್ಯಕ್ಷರಾದ.ಸಿ.ಎನ್. ಚಂದ್ರೇಗೌಡ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here