ಕರ್ನಾಟಕ ನೀರಾವರಿ ನಿಗಮ ವತಿಯಿಂದ 2020-21ನೇ ಸಾಲಿನ ಮುಂಗಾರು ಹಂಗಾಮಿಗೆ ಹಿಪ್ಪರಗಿ ಯೋಜನೆ

0

ಅಥಣಿ : ಕರ್ನಾಟಕ ನೀರಾವರಿ ನಿಗಮ ನಿಯಮಿತ ವತಿಯಿಂದ 2020-21 ನೇ ಸಾಲಿನ ಮುಂಗಾರು ಹಂಗಾಮಿಗೆ  ಹಿಪ್ಪರಗಿ ಯೋಜನೆಯಡಿಯಲ್ಲಿ ಬರುವ  ಐನಾಪೂರ  ಏತ ನೀರಾವರಿ ಯೋಜನೆ -1 ಮತ್ತು 2 ನೇ ‘ ಹಂತ , ಹಲ್ಯಾಳ ಏತ , ನೀರಾವರಿ ಯೋಜನೆ 1 ನೆ – ಮತ್ತು 2 ನೇ ಹಂತ , ಕರಿಮಸೂತಿ ಸಹ ನೀರಾವರಿ ಯೋಜನೆ -1 ಮತ್ತು 2 ನೇ ಹಂತ , ಸಾವಳಗಿ – ತುಂಗಳ ಏತ ನೀರಾವರಿ ಯೋಜನೆಯ ಯಂತ್ರಗಳಿಗೆ ಹಾಗೂ ಕೃಷ್ಣಾ ನದಿಗೆ ಪೂಜೆ ಸಲ್ಲಿಸುವ ಮೂಲಕ ಇಂದು ಮುಂಜಾನೆ  ಅಥಣಿ ವೃತ್ತದ ಸೂಪರಿಟೆಂಡಿಂಗ್ ಇಂಜಿನೀಯರ್  ಬಿ ಎಸ್ ಚಂದ್ರಶೇಖರ ಚಾಲನೆ ನೀಡಿದರು.

2020-21 ಸಾಲಿನ ಮುಂಗಾರು ಹಂಗಾಮಿಗೆ ಕಾಲುವೆಗಳಿಗೆ  ನೀರನ್ನು ಹರಿಸುವ  ಕೃಷ್ಣಾ ನದಿಯಲ್ಲಿ ನೀರಿನ ಹರಿವಿನ ಪ್ರಮಾಣವನ್ನು ಪರಿಗಣಿಸಿ ನೀರನ್ನು ಹರಿಬಿಡಲಾಗುತ್ತಿದೆ ಅಚ್ಚುಕಟ್ಟು ಪ್ರದೇಶದ ರೈತರಿಗೆ  ,23-06- 2020 ನ ದಿನಾಂಕದಿಂದ ನದಿಯಲ್ಲಿ ನೀರಿನ ಹರಿವಿನ ಲಭ್ಯತೆ ಹಾಗೂ ವಿದ್ಯುಚ್ಛಕ್ತಿಯ ಲಭ್ಯತೆಗೆ ಅನುಗುಣವಾಗಿ ನೀರನ್ನು ಹರಿಸಲಾಗುವುದು 2 ಕಾಲುವೆಗಳಲ್ಲಿ ಹರಿಸುವ ನೀರನ್ನು ಅಚ್ಚುಕಟ್ಟು ಪ್ರದೇಶದಲ್ಲಿ ಬರುವ ರೈತರು ಪ್ರತಿಯೊಬ್ಬರು ಸಹಕರಿಸಿಕೊಂಡು ನೀರನ್ನು ಉತ್ತಮವಾಗಿ ಬಳಕೆ ಮಾಡಿಕೊಳ್ಳಲು ಕೊರಿದ್ದಾರೆ ಮತ್ತು ನೀರನ್ನು ಅನಾವಶ್ಯಕವಾಗಿ ಪೋಲು ಮಾಡುವುದನ್ನು ನಿರ್ಬಂಧಿಸಲಾಗಿದೆ . 3. ಕಾಲುವೆಗೆ ನೀರನ್ನು ಹರಿಸುವ ಅವಧಿಯಲ್ಲಿ ಖಾಸಗಿಯಾಗಿ ಪಂಪು ಮತ್ತು ಪೈಪುಗಳ ಮೂಲಕ ನೀರನ್ನು ಬಿತ್ತುವುದು , ಕಾಲುವೆಗೆ ಅಡ್ಡ ಕಟ್ಟುವುದು , ಅನಧಿಕೃತವಾಗಿ ಕಾಲುವೆಗಳಿಗೆ ಹಾನಿ ಉಂಟು ಮಾಡುವುದು , ಕರ್ನಾಟಕ ನೀರಾವರಿ ಅಧಿನಿಯಮ 1965 ರ ನಿಯಮ 55 ರನ್ವಯ ಶಿಕ್ಷಾರ್ಹ ಅಪರಾಧ , ಆದ್ದರಿಂದ ಈ ರೀತಿ ನಡೆದುಕೊಂಡಲ್ಲಿ ಕಾನೂನಿನ ಪ್ರಕಾರ ಕ್ರಮಜರುಗಿಸಲಾಗುವುದು ಎಂದು ಹೇಳಿದ್ದಾರೆ.

ಈ ವೇಳೆ ಅಥಣಿ ವೃತ್ತದ ಸೂಪರಿಟೆಂಡಿಂಗ್ ಇಂಜಿನೀಯರ್  ಬಿ ಎಸ್ ಚಂದ್ರಶೇಖರ , ಎಇಇ ಕೆ ಕೆ ಜಾಲಿಬೇರಿ, ಎಇಇ ಆರ್ ವಾಯ್ ರೂಡಗಿ,ರೈತ ಸಂಘದ ಅಧ್ಯಕ್ಷ ಮಹಾದೇವ ಮಡಿವಾಳ ಸೇರಿದಂತೆ ನೀರಾವರಿ ಇಲಾಖೆಯ ಅಧಿಕಾರಿಗಳು  ಸಿಬ್ಬಂದಿ ಸಾರ್ವಜನಿಕರು ಉಪಸ್ಥಿತರಿದ್ದರು.

ಪ್ರೂಫ್ ವಿಡಿಯೋ

 

LEAVE A REPLY

Please enter your comment!
Please enter your name here