ಕರ್ನಾಟಕ ಪ್ರೆಸ್ ಕ್ಲಬ್ ಕೌನ್ಸಿಲ್ ಮನವಿಗೆ ಸ್ಪಂದಿಸಿದ ಬೆಂಗಳೂರು ನಗರ ಪೊಲೀಸ್ ಆಯುಕ್ತರಾದ ಕಮಲ್ ಪಂತ್…..!

0

ಕರ್ನಾಟಕ ಪ್ರೆಸ್ ಕ್ಲಬ್ ಕೌನ್ಸಿಲ್ ಮನವಿಗೆ ಸ್ಪಂದಿಸಿದ ಬೆಂಗಳೂರು ನಗರ ಪೊಲೀಸ್ ಆಯುಕ್ತರಾದ ಕಮಲ್ ಪಂತ್……………….! ಇತ್ತೀಚಿಗಷ್ಟೇ ಪೊಲೀಸ್ ವಾಣಿ ಸಂಪಾದಕ ರಾಘವೇಂದ್ರ ಚಾರ್ ಮೇಲೆ ಬಿಬಿಎಂಪಿ ಜಂಟಿ ನಿರ್ದೇಶಕ ಮಂಜೇಶ್ ಮತ್ತು ಬೆಂಬಲಿಗರು ಹಲ್ಲೆಮಾಡಲು ಮುಂದಾಗಿ ಕೊಲೆ ಬೆದರಿಕೆ ಹಾಕಿದ್ದರು ಪತ್ರಕರ್ತ ರಾಘವೇಂದ್ರಚಾರ್ ಸುಬ್ರಮಣ್ಯಪುರ ಪೊಲೀಸ್ ಠಾಣೆಯಲ್ಲಿ ಕಂಪ್ಲೇಂಟ್ ಮಾಡಿದರಾದರು ಪೊಲೀಸ್ ರು ಕೇವಲ ಮುಗುಂ ಆಗಿದ್ದರು ಘಟನೆ ನಡೆದು 2 ತಿಂಗಳಾದರೂ FIR ದಾಖಲಾಗಿರಲಿಲ್ಲ ವಿಚಾರ ತಿಳಿದ ಕರ್ನಾಟಕ ಪ್ರೆಸ್ ಕ್ಲಬ್ ಕೌನ್ಸಿಲ್ ರಾಜ್ಯಧ್ಯಕ್ಷ ಡಾ. ಶಿವಕುಮಾರ್ ನಾಗರ ನವಿಲೆ ನೇತೃತ್ವದ ತಂಡ ಬೆಂಗಳೂರು ನಗರ ಪೊಲೀಸ್ ಆಯುಕ್ತರಾದ ಕಮಲ್ ಪಂತ್ ರವರಿಗೆ ಈ ವಿಚಾರವಾಗಿ ಧ್ವನಿ ಎತ್ತಿ ಪತ್ರಕರ್ತರಿಗೆ ನ್ಯಾಯ ಕೊಡಿಸಿ ಆರೋಫಿಗಳನ್ನು ಬಂಧಿಸುವಂತೆ ಮನವಿ ಮಾಡಿದ್ದರು ಘಟನೆಯ ವಿಚಾರ ತಿಳಿದ ಬೆಂಗಳೂರು ಪೊಲೀಸ್ ಆಯುಕ್ತರು ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ ಬಿಬಿಎಂಪಿ ಜಂಟಿ ನಿರ್ದೇಶಕ ಮಂಜೇಶ್ ವಿರುದ್ಧ ಸುಬ್ರಮಣ್ಯಪುರ ಪೊಲೀಸ್ ಠಾಣೆಯಲ್ಲಿ FIR ದಾಖಲಸಿ ಆರೋಪಿಗಳ ಪತ್ತೆಗಾಗಿ ಬಲೆ ಬಿಸಿದ್ದಾರೆ ಇನ್ನು ಪತ್ರಕರ್ತ ರ ಬೆಂಬಲಕ್ಕೆ ನಿಂತು ಪತ್ರಕರ್ತ ರ ಕ್ಷೇಮಾಭಿವೃದ್ಧಿಗಾಗಿ ಹಗಲಿರುಳೆನ್ನದೆ ಶ್ರಮಿಸುತ್ತಾ ಹಲವಾರು ಹೋರಾಟಗಳನ್ನು ಮಾಡುತ್ತಾ ದೇಶದಾದ್ಯಂತ ತನ್ನದೇ ಆದ ಛಾಪು ಮೂಡಿಸಿರುವ ಕರ್ನಾಟಕ ಪ್ರೆಸ್ ಕ್ಲಬ್ ಕೌನ್ಸಿಲ್ ಪ್ರಪಂಚದಾದ್ಯಂತ ತನ್ನ ಸಂಸ್ಥೆಯನ್ನು ವಿಸ್ತರಿಸಿದ್ದು ಅಲ್ಲಿಯು ಕೂಡ ವಿಭಿನ್ನ ದೃಷ್ಟಿಕೋನದಲ್ಲಿ ತನ್ನ ಕಾರ್ಯ ಆರಂಭಿಸಿದೆ ಇನ್ನು ಕರ್ನಾಟಕ ಪ್ರೆಸ್ ಕ್ಲಬ್ ಕೌನ್ಸಿಲ್ ಕಾರ್ಯಕ್ಕೆ ನಮ್ಮ ದೇಶದಲ್ಲಷ್ಟೇ ಅಲ್ಲದೆ ಹೊರ ದೇಶದಲ್ಲಿರುವ ಕನ್ನಡಿಗರು ಸಹ ಅಭಿನಂದನೆ ತಿಳಿಸಿದ್ದಾರೆ ಇನ್ನು ಪತ್ರಕರ್ತ ರು ಸಂವಿಧಾನದ ನಾಲ್ಕನೇ ಅಂಗವಾಗಿದ್ದು ಪತ್ರಕರ್ತರು ಸಮಾಜದಲ್ಲಿ ನಡೆಯುವ ಅಕ್ರಮಗಳು ಮತ್ತು ಭ್ರಷ್ಟಾಚಾರದ ಬಗ್ಗೆ ಸುದ್ದಿ ಮಾಡಿದರೆ ಭ್ರಷ್ಟಾಚಾರಿಗಳು ಸಹಿಸಿ ಕೊಳ್ಳದೆ ಇಂತಹ ನೀಚ ಕೃತ್ಯಕ್ಕೆ ಇಳಿಯುತ್ತಾರೆ ಸುದ್ದಿಗಳಲ್ಲಿ ಅವರು ಮಾಡಿರದ ತಪ್ಪುಗಳು ಮತ್ತು ಮಾನಹಾನಿಯಾಗಿದ್ದರೆ ಕಾನೂನು ಮೊರೆಹೋಗಬೇಕು ಅದನ್ನು ಬಿಟ್ಟು ಹಲ್ಲೆ ಮಾಡಲು ಮುಂದಾಗುವುದು ಕೊಲೆ ಬೆದರಿಕೆ ಹಾಕುವುದು ಸರಿಯಲ್ಲ ಇಂತವರಿಗೆ ಬೆಂಗಳೂರು ನಗರ ಪೊಲೀಸ್ ಆಯುಕ್ತರಾದ ಕಮಲ್ ಪಂತ್ ರವರು ಸುಬ್ರಮಣ್ಯಪುರ ಪೊಲೀಸ್ ಠಾಣೆಯಲ್ಲಿ FIR ದಾಖಲಾಗುವಂತೆ ಮಾಡಿದ್ದಾರೆ ಇನ್ನು ಬೆಂಗಳೂರು ನಗರ ಪೊಲೀಸ್ ಆಯುಕ್ತರ ಕಾರ್ಯವೈಖರಿಗೆ ದೇಶದೆಲ್ಲಡೆ ಮತ್ತು ಹೊರದೇಶದಲ್ಲಿರುವ ಕನ್ನಡಿಗರು ಸಹ ಅಭಿನಂದನೆ ತಿಳಿಸಿದ್ದಾರೆ

ಇನ್ನು ಈ ವಿಚಾರವಾಗಿ ಮಠಾಧೀಶರು ಚಲನಚಿತ್ರ ನಟರು ಪತ್ರಕರ್ತರು ಹೊರದೇಶದಲ್ಲಿರುವ ನಮ್ಮ ಕನ್ನಡಿಗರು ಕರ್ನಾಟಕ ಪ್ರೆಸ್ ಕ್ಲಬ್ ಕೌನ್ಸಿಲ್ ಕಾರ್ಯವೈಖರಿ ಮತ್ತು ಪತ್ರಕರ್ತರ ಮನವಿಗೆ ಸ್ಪಂದಿಸಿ ಆರೋಪಿಗಳ ವಿರುದ್ಧ FIR ದಾಖಲಾಗುವಂತೆ ಮಾಡಿದ ಬೆಂಗಳೂರು ನಗರ ಪೊಲೀಸ್ ಆಯುಕ್ತರಾದ ಕಮಲ್ ಪಂತ್ ರವರ ಕಾರ್ಯದ ಬಗ್ಗೆ ನಮ್ಮ ವಾಹಿನಿಯೊಂದಿಗೆ ತಮ್ಮ ಅಭಿಪ್ರಾಯ ಅಂಚಿಕೊಂಡಿದ್ದಾರೆ ಬನ್ನಿ ಯಾರ್ ಯಾರು ಏನ್ ಹೇಳಿದ್ದಾರೆ ನೋಡೋಣ.. ಲಂಡನ್ ನಿಂದ HNBC ಕನ್ನಡ ವಾಹಿನಿಯ ಸಂಪಾದಕರಾದ ಹರೀಶ್ ರಾಮಯ್ಯ ಮಾತನಾಡಿದ್ದಾರೆ ಏನ್ ಹೇಳಿದ್ದಾರೆ ನೋಡೋಣ ಬನ್ನಿ …………… ಖ್ಯಾತ ಚಲನಚಿತ್ರ ನಟ ಅಭಿಜಿತ್ ರವರು ಕೂಡ ಪತ್ರಕರ್ತ ರ ಪರ ಧ್ವನಿ ಎತ್ತಿ ತಮ್ಮ ಅಭಿಪ್ರಾಯ ತಿಳಿಸಿದ್ದಾರೆ……….. ಲಂಡನ್ ನಿಂದ ಗೋಕುಲ್ ಕುಲಕರ್ಣಿ ರವರು ಪತ್ರಕರ್ತರ ಮೇಲೆ ನಡೆಯುತ್ತಿರುವ ದೌರ್ಜನ್ಯ ಬಗ್ಗೆ ಮಾತನಾಡಿದ್ದಾರೆ ಏನ್ ಹೇಳಿದ್ದಾರೆ ನೋಡೋಣ……. ದುಬೈನಿಂದ ರವಿ ಮಹಾದೇವ್ ರವರು ಪೊಲೀಸ್ ವಾಣಿ ಸಂಪಾದಕರ ಕೊಲೆ ಬೆದರಿಕೆ ಖಂಡಿಸಿ ಪತ್ರಕರ್ತ ಜೊತೆ ನಾವಿದ್ದೇವೆ ಎಂಬ ಸಂದೇಶ ರವಾನಿಸಿದ್ದಾರೆ…… ಹೊಸದುರ್ಗಾ ದಿಂದ ವಿಜಯಾನಂದ ಶ್ರೀಗಳು ನಮ್ಮ ವಾಹಿನಿಯೊಂದಿಗೆ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದು ಹೀಗೆ ……. ದಕ್ಷಿಣ ಶಿರಡಿ ಪೀಠಾಧ್ಯಕ್ಷರಾದ ಶ್ರೀ ರಾಮ್ ಪ್ರಸಾದ್ ಗುರೂಜಿ ರವರು ಬೆಂಗಳೂರು ನಗರ ಪೊಲೀಸ್ ಆಯುಕ್ತರಾದ ಕಮಲ್ ಪಂತ್ ಕಾರ್ಯದ ಬಗ್ಗೆ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದು ಹೀಗೆ……. ನೆಲಮಂಗಲ ತಾಲೂಕಿನ ವನಕಲ್ಲು ಮಠದ ಪೀಠಾಧ್ಯಕ್ಷರಾದ ಬಸವರಾಮಾನಂದ ಶ್ರೀಗಳು ನಮ್ಮ ಜೊತೆ ಮಾತನಾಡಿದ್ದಾರೆ ಏನ್ ಹೇಳಿದ್ದಾರೆ ನೋಡೋಣ ಬನ್ನಿ……. ಗುಬ್ಬಿಯಿಂದ ಚೈತ್ರ ಚಿತ್ತಾರ ಪತ್ರಿಕೆ ಸಂಪಾದಕರಾದ ಪರಮ್ ರವರು ಪೊಲೀಸ್ ವಾಣಿ ಸಂಪಾದಕರ ಮೇಲೆ ನಡೆದ ಕೊಲೆ ಬೆದರಿಕೆ ಖಂಡಿಸಿ ಹೊರಟಮಾಡಿ ಆರೋಪಿ ವಿರುದ್ಧ FIR ದಾಖಲಾಗುವಂತೆ ಮಾಡಿದ ಕರ್ನಾಟಕ ಪ್ರೆಸ್ ಕ್ಲಬ್ ಕೌನ್ಸಿಲ್ ಕಾರ್ಯದ ಬಗ್ಗೆ ನಮ್ಮ ವಾಹಿನಿ ಯೊಂದಿಗೆ ತಮ್ಮ ಅಭಿಪ್ರಾಯ ಹಂಚಿಕೊಂಡು ಮಾತನಾಡಿದ್ದಾರೆ……….

LEAVE A REPLY

Please enter your comment!
Please enter your name here