ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಚಿಕ್ಕೋಡಿ ತಾಲ್ಲೂಕು ಅಧ್ಯಕ್ಷರು ಮಂಜುನಾಥ ಬಾ,ಪರಗೌಡ್ರು,ಮಾನ್ಯ ತಾಹಸಿಲ್ದಾರ ಮೂಲಕ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಮನವಿ

0

ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಚಿಕ್ಕೋಡಿ ತಾಲ್ಲೂಕು ಅಧ್ಯಕ್ಷರು ಮಂಜುನಾಥ ಬಾ,ಪರಗೌಡ್ರು,ಮಾನ್ಯ ತಾಹಸಿಲ್ದಾರ ಮೂಲಕ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಮನವಿ
ವಿಷಯ: ಭೂ ಸುಧಾರಣೆ ಕಾಯ್ದೆ,ವಿದ್ಯುತ ಖಾಸಗಿಕರಣ ,ಎ,ಪಿ,ಎಮ್,ಸಿ,ಕಾನೂನು ತಿದ್ದುಪಡಿ,ಕೃಷಿಗೆ ಕಾರ್ಪೂರೆಟರ ಕಂಪನಿಗಳ ಪ್ರದೇಶದ ವಿರುದ್ಧ ರೈತ ಹೋರಾಟದ ನಿರ್ಣಯ
ಇದು ವಿದೇಶಿ ಕಂಪನಿಗಳ ಮತ್ತು ಕಾರ್ಪೊರೆಟರ ಕಂಪನಿಗಳ ಪ್ರವೆಶಕ್ಕಾಗಿ ಈ ತಿದ್ದುಪಡಿ ಜಾರಿಗೆ ತರಲಾಗಿದೆ,ಈ ಕಾಯ್ದೆ ಕೇವಲ ರೈತರ ಉದ್ದಾರಕ್ಕೆ ಅಲ್ಲದೆ ಅಥವಾ ಸಾರ್ವಜನಿಕರ ಹಿತಾಸಕ್ತಿಗೆ ಆಗಲಿ ಅಲ್ಲ ಎಂಬುದನ್ನು ನಿಮ್ಮ ಗಮನಕ್ಕೆ ತರುತ್ತಿದ್ದೆವೆ,ಈ ಕಾಯಿದೆ ಬಂದರೆ ಮತ್ತೆ ನಮ್ಮ ರೈತರು ಹಳೆ ಪದ್ದತಿ ಜಿತದ ಪದ್ದತಿಯ ಕಾಯಿದೆಗೆ ಹೋಗುವ ಸಾದ್ಯತೆ ಕಾಣಿಸುತ್ತಿದೆ,ಅದಕ್ಕೆ ಸರ್ಕಾರ ಈ ಕಾಯಿದೆ ಕೈ ಬಿಡಬೇಕು


,ಅದೆ ರೀತಿ ಎಪಿ ಎಮ್ ಸಿ ಕಾಯ್ದೆ ತಿದ್ದುಪಡಿಗಳು ಈಗಾಗಲೆ ಸುಗ್ರೀವಾಜ್ಞೆಯೊಂದಿಗೆ ಹೊರ ಬಂದಿದ್ದು,ಈ ಸುಗ್ರೀವಾಜ್ಞೆಗೆ ರೈತರಿಂದ ರೈತನ ಮಾರುಕಟ್ಟೆಯನ್ನು ಕೈ ತಪ್ಪಿಸುವಂತಹ ಒಂದೆ ಉದ್ದೇಶ ಇದಾಗಿದೆ,ಹಾಗಾಗಿ ರೈತ ಮಾರುಕಟ್ಟೆಯನ್ನು ಕಳೆದುಕೊಂಡು ನಾಳೆ ಕಂಪನಿಯ ಮುಂದೆ ತೆಲೆ ಬಗ್ಗಿಸಿ ನಿಲ್ಲುವಂತಹ ನೀತಿಯನ್ನು ತರಲಾಗಿದೆ,ಕಾಯಿದೆ ಕೈ ಬಿಡಬೇಕು ಎಂದು ಒತ್ತಾಯ,
ಅದೆ ರೀತಿ ವಿದ್ಯುತ ಕಾಯ್ದೆ 2003 ರಲ್ಲಿ ವಿದ್ಯುತ ಕ್ಷೇತ್ರವನ್ನು ಒಡೆತನಕ್ಕೆ ವಹಿಸುವ ನಿರ್ಧಾರ ತೆಗೆದುಕೊಳ್ಳಲಾಯಿತು,ಇಂದು ನರೆಂದ್ರಮೊದಿ ಕೇಂದ್ರ ಸರ್ಕಾರ ವಿದ್ಯುತ ಶಕ್ತಿ ಉತ್ಪಾದನೆ ಮತ್ತು ವಿತರಣೆಯನ್ನು ಬಡ ಜನರಿಗೂ ಬೆಳಕು ಸಿಗಲಿ ಎಂದು ಭಾಗ್ಯ ಜ್ಯೋತಿ ಕುಟೀರ ಜ್ಯೊತಿಯಂತಹ ಯೋಜನೆಗಳನ್ನು ಇನ್ನು ಮುಂದೆ ಇರುವುದಿಲ್ಲಾ,ರೈತರ ಪಂಪಸೇಟಗಳಿಗೆ ನೀಡುತ್ತಿರುವ ಉಚಿತ ವಿದ್ಯುತ ನಿಲ್ಲುತ್ತದೆ,ರೈತರು ಕೃಷಿ ಮಾಡಲು ಕಷ್ಟಗಳನ್ನು ಸೃಷ್ಟಿಸಿ ಒಕ್ಕುಲುತನದಿಂದ ಹೊರಹಾಕಿ ಕೃಷಿಯನ್ನು ಕಾರ್ಪೊರೆಟ ಕಂಪನಿಗಳಿಗೆ ವಹಿಸುವ ವ್ಯವಸ್ಥೆ ಸೃಷ್ಟಿಸುತ್ತಿವೆ,ರೈತರು ಸರಕಾರಗಳ ಧೋರಣೆಯನ್ನು ಬಲವಾಗಿ ವಿರೋಧಿಸಬೆಕಿದೆ,
ಅದೆ ರೀತಿ ಚಿಕ್ಕೋಡಿ ತಾಲ್ಲೂಕಿನ ಕೃಷ್ಣಾನದಿ ನೆರೆಸಂತ್ರ ಸ್ಥರಿಗೆ ಇಲ್ಲಿಯವೆರೆಗೆ ನಿರಾಶೃತರಿಗೆ ಯಾವುದೇ ಮನೆ ಕಟ್ಟಡ ಹಾಗೂ ಪರಿಹಾರಧನ ಇಲ್ಲಿವರೆಗೆ ದೊರಕಿಲ್ಲಾ ಇದನ್ನು ಶೀಘ್ರವಾಗಿ ಕೊಡಿಸಬೇಕು,ಪ್ರವಾಹದಿಂದ ಬೆಳೆಹಾನಿ ಪರಿಹಾರವು ಇನ್ನು ಕೆಲವು ರೈತರಿಗೆ ಬಂದಿರುವುದಿಲ್ಲಾ ಅದನ್ನು ಸಹ ಆದಷ್ಟು ಬೇಗನೆ ಕೊಡಿಸಬೇಕು,ಈ ಮೂಲಕ ತಾಲ್ಲೂಕು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಸಂಘಟನೆ ಮೂಲಕ ಮಾನ್ಯ ತಾಲ್ಲೂಕು ದಂಡಾಧಿಕಾರಿಗಳ ಮುಖಾಂತರ ರಾಜ್ಯ ಸರಕಾರಕ್ಕೆ ಹಾಗೂ ಕೇಂದ್ರ ಸರ್ಕಾರಕ್ಕೆ ನಮ್ಮ ಒಕ್ಕೊರಲಿನ ಒತ್ತಾಯ ಇರುತ್ತದೆ,ಇಲ್ಲವಾದರೆ ಉಗ್ರ ಹೊರಾಟ ಮಾಡಲಾಗುತ್ತದೆ,

LEAVE A REPLY

Please enter your comment!
Please enter your name here