ಕಲಬುರಗಿ ರೈತ ವಿರೋಧಿ ಸುಗ್ರಿವಾಜ್ಞೆಯನ್ನು ಹಿಂಪಡೆಯಬೇಕೆಂದು ಎಸ್‌ಡಿಪಿಐಯಿಂದ ಬೃಹತ್ ಪ್ರತಿಭಟನೆ

0

*ಕಲಬುರಗಿ ರೈತ ವಿರೋಧಿ ಸುಗ್ರಿವಾಜ್ಞೆಯನ್ನು ಹಿಂಪಡೆಯಬೇಕೆಂದು ಎಸ್‌ಡಿಪಿಐಯಿಂದ ಬೃಹತ್ ಪ್ರತಿಭಟನೆ.ಯಡ್ರಾಮಿ (Sep.25): ಜನ ವಿರೋದಿ, ರೈತ ವಿರೋಧಿ ಸುಗ್ರಿವಾಜ್ಞೆಯನ್ನು ಹಿಂಪಡೆಯಬೇಕೆಂದು ಎಸ್‌ಡಿಪಿಐಯಿಂದ ಬೃಹತ್ ಪ್ರತಿಭಟನೆ ಮಾಡಲಾಯಿತು.ಭೂ ಸ್ವಾಧೀನ ಕಾಯ್ದೆ ೨೦೧೯, ಎ.ಪಿ.ಎಮ್.ಸಿ.ಕಾಯ್ದೆ, ಭೂ ಸುಧಾರಣೆ ಕಾಯ್ದೆ, ಅಗತ್ಯ ವಸ್ತು ಕಾಯ್ದೆ, ವಿದ್ಯುತ್ ಸರಬರಾಜು ಕಾರ್ಮಿಕ ಕಾಯ್ದೆಯನ್ನು ಹಿಂಪಡೆಯಬೇಕೆಂದು ಆಗ್ರಹಿಸಿ ಎಸ್‌ಡಿಪಿಐವತಿಯಿಂದ ಕಲಬುರಗಿ ಜಿಲ್ಲೆಯ ಯಡ್ರಾಮಿ ತಾಲೂಕಿನಲ್ಲಿ ಪ್ರತಿಭಟನೆ ಮಾಡಲಾಯಿತು.ಇದೇ ವೇಳೆ ಮಾತನಾಡಿದ ಯಡ್ರಾಮಿ ತಾಲೂಕಿನ ಎಸ್‌ಡಿಪಿಐ ಅಧ್ಯಕ್ಷ ಸದ್ದಾಮ ಹಚ್ಚಡ, ಈಗಾಗಲೇ ರಾಜ್ಯದೆಲ್ಲೆಡೆ ಪ್ರತಿಭಟನೆ ನಡೆಯುತ್ತಿದ್ದು ಯಾರೋಬ್ಬರು ಜನಪ್ರತಿನಿಧಿಗಳು, ಸಂಬಂದಪಟ್ಟ ಸಚಿವರಾಗಲಿ ಮುಖ್ಯಮಂತ್ರಿಗಳಾಗಲಿ ಯಾವುದೇ ರೀತಿಯ ಸ್ಪಂದನೆ ಮಾಡದೆ ಇರುವ ಕಾರಣ ನಮ್ಮ ಅನ್ನದಾತ ರೈತರ ಕೂಗಿಗೆ ಸ್ಪಂದಿಸಬೇಕಾಗಿ ಕೇಂದ್ರ ಮತ್ತು ರಾಜ್ಯ ಸರಕಾರಗಳಿಗೆ ವಿನಂತಿಸಿಕೊಂಡರು. ಈ ಸಂದರ್ಭದಲ್ಲಿ ಯಡ್ರಾಮಿಯ SDPI ಪ್ರದಾನ ಕಾರ್ಯದರ್ಶಿ ಗಳಾದ ಆಸಿಪ್ ಢಾಲಾಯತ್, DWC ಸದಸ್ಯರಾದ ಮುಸ್ತಫಾ ಹೊಸಮನಿ, ಮೊಹಿಯುದ್ದೀನ್ ಇನಾಂದಾರ್ ,ರಫೀಕ್ ಜಮಾದಾರ್ ಮುಸ್ತಫಾ ಮಶಾಕ ಖುರೇಶಿ,ಅನ್ವರ,ಅಜರ,ಅಕ್ಬರ, ಶೊಯಬ್,ವಾಹಿದ ಮೌಲಾನಾ, ಹುಜುರ,ಅಜಿಜ್, ದಿಲ್ದಾರ,ಕಾಸಿಂ ಮೌಲಾನಾ, ವಿಶ್ವನಾಥ್ ಪಾಟೀಲ್, ಅಪ್ರೊಜ ಅತನೂರ ಲಾಳೆಸಾಬ ಹಾಗೂ ವಿವಿಧ ಸಂಘಟನೆಗಳು ಮುಖಂಡರು ಪ್ರತಿಭಟನೆಯಲ್ಲಿ ಹಾಜರಿದ್ದರು.

LEAVE A REPLY

Please enter your comment!
Please enter your name here