ಬೈರೂತ್ (ಲೆಬನಾನ್), ಸೆ. 10: ಲೆಬನಾನ್ ರಾಜಧಾನಿ ಬೈರೂತ್‌ನ ಬಂದರಿನಲ್ಲಿ ಗುರುವಾರ ಬೃಹತ್ ಪ್ರಮಾಣದಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎಂದು ಎಎಫ್‌ಪಿ ಸುದ್ದಿ ಸಂಸ್ಥೆ ವರದಿ ಮಾಡಿದೆ. ಕಳೆದ ತಿಂಗಳು ಇದೇ ಬಂದರು ಪ್ರದೇಶದಲ್ಲಿ ಸಂಭವಿಸಿದ ಭೀಕರ ಸ್ಫೋಟದ ಭೀತಿಯ ನೆರಳಲ್ಲೇ ಜೀವಿಸುತ್ತಿರುವ ರಾಜಧಾನಿಯ ನಿವಾಸಿಗಳು ಬೆಂಕಿಯ ಕೆನ್ನಾಲಗೆ ಕಂಡು ಮತ್ತೊಮ್ಮೆ ಬೆಚ್ಚಿಬಿದ್ದರು.
ತೈಲ ಮತ್ತು ಟಯರ್‌ಗಳನ್ನು ಸಂಗ್ರಹಿಸಿಡುವ ಉಗ್ರಾಣವೊಂದನ್ನು ಬೆಂಕಿ ಆವರಿಸಿದೆ ಹಾಗೂ ದಟ್ಟ ಕಪ್ಪು ಹೊಗೆ ಆಕಾಶಕ್ಕೆ ಚಿಮ್ಮುತ್ತಿದೆ ಎಂದು ಲೆಬನಾನ್ ಸೇನೆ ತಿಳಿಸಿದೆ.
ಬೆಂಕಿಗೆ ಕಾರಣ ತಕ್ಷಣಕ್ಕೆ ತಿಳಿದುಬಂದಿಲ್ಲ.