ಕಳ್ಳಭಟ್ಟಿ ಮುಕ್ತ ಗ್ರಾಮ ಸಭೆ . ಅಕ್ರಮ ಕಳ್ಳಬಟ್ಟಿ ಮಾಹಿತಿ ನೀಡುವದು

0

ಕಳ್ಳಭಟ್ಟಿ ಮುಕ್ತ ಗ್ರಾಮ ಸಭೆ
ಅಕ್ರಮ ಕಳ್ಳಬಟ್ಟಿ ಮಾಹಿತಿ ನೀಡುವದು
ಅಧಿಕಾರಿಗಳಿಗೆ ಕಡ್ಡಾಯ : ಉಪ ನಿರೀಕ್ಷಕ ರಾಮು

ಸವದತ್ತಿ: ತಾಲೂಕಿನ ಬಡ್ಲಿ ತಾಂಡಾದಲ್ಲಿ ಕಳ್ಳಭಟ್ಟಿ ಸಾರಾಯಿ ತಯಾರಿಕಾ ಕೇಂದ್ರ
ಅಸ್ತಿತ್ವದಲ್ಲಿದ್ದು, ಪೊಲೀಸ್ ಹಾಗೂ ಅಬಕಾರಿ ಇಲಾಖೆಗಳ ಅಧಿಕಾರಿಗಳು ನಿರಂತರ ದಾಳಿ,
ಗಸ್ತು, ಹಳೆ ಆರೋಪಿಗಳ ಮೇಲೆ ನಿಗಾವಹಿಸಿ ಈ ಕೇಂದ್ರವನ್ನು ಸಂಪೂರ್ಣವಾಗಿ ನಿರ್ಮೂಲನೆ
ಮಾಡಲು ಸಾಧ್ಯವೆಂದು ಅಬಕಾರಿ ಉಪ ನಿರೀಕ್ಷಕ ರಾಮು ಆರೆನ್ನವರ ಹೇಳಿದರು.
ತಾಲೂಕಿನ ಬಡ್ಲಿ ತಾಂಡಾದಲ್ಲಿ ಗುರುವಾರ ಪ್ರಸಕ್ತ ಬಡ್ಲಿ ತಾಂಡಾವನ್ನು ಕಳ್ಳಭಟ್ಟಿ
ಮುಕ್ತ ತಾಂಡಾವನ್ನಾಗಿಸಲು ಹಮ್ಮಿಕೊಂಡ ಸಭೆಯಲ್ಲಿ ಅವರು ಮಾತನಾಡಿದರು.
ಕಳ್ಳಭಟ್ಟಿ ಸಾರಾಯಿ ನಿರ್ಮೂಲನೆಯ ಅವಶ್ಯವಿದ್ದು ಜನರಲ್ಲಿ ಕಳ್ಳಭಟ್ಟಿಯಿಂದಾಗುವ
ದುಷ್ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಆಗಬೇಕಿದೆ. ಅಬಕಾರಿ ಆಕ್ರಮಗಳು
ಬಹುತೇಕ ಗ್ರಾಮ ಮಟ್ಟದಲ್ಲಿ ನಡೆಯುವುದರಿಂದ ಆಕ್ರಮಗಳ ಬಗ್ಗೆ ಕರ್ನಾಟಕ ಅಬಕಾರಿ
ಕಾಯ್ದೆ 1965 ರ ಕಲಂ 50 ರ ಅಡಿಯ ಪ್ರಕಾರ ಗ್ರಾಮ ಪಂಚಾಯತಿ ಅಭಿವೃದ್ಧಿ
ಅಧಿಕಾರಿಗಳು, ಕಾರ್ಯದರ್ಶಿಗಳು, ಪಂಚಾಯತಿ, ಕಂದಾಯ ಅಧಿಕಾರಿಗಳು ಹಾಗೂ
ಗ್ರಾಮ ಪಂಚಾಯತ ಚುನಾಯಿತ ಸದಸ್ಯರುಗಳು ತಮ್ಮ ವ್ಯಾಪ್ತಿಯಲ್ಲಿ ನಡೆಯುವ
ಅಬಕಾರಿ ಅಕ್ರಮಗಳ ಬಗ್ಗೆ ಮಾಹಿತಿ ನೀಡುವುದನ್ನು ಕಡ್ಡಾಯವನ್ನಾಗಿಸಿ
ಹೊಣೆಗಾರರನ್ನಾಗಿಸಲಾಗಿದೆ ಎಂದರು.
ಅಬಕಾರಿ ಉಪಅಧೀಕ್ಷಕ ರವಿ ಮರಿಗೌಡ ಮಾತನಾಡಿ, ವಿವಿಧ ಇಲಾಖೆಗಳ ಜೊತೆಗೆ
ಸಮನ್ವಯ ಸಾಧಿಸಿ ಅವರಿಂದ ಅವಶ್ಯವಿರುವ ಮಾಹಿತಿ ಹಾಗೂ ಸಹಕಾರವನ್ನು
ಪಡೆದುಕೊಂಡು ತಾಲೂಕಿನಲ್ಲಿರುವ ಬಡ್ಲಿ ತಾಂಡಾ ಕಳ್ಳಭಟ್ಟಿ ಸಾರಾಯಿ ಕೇಂದ್ರವನ್ನು
ಹಾಗೂ ಅನಧೀಕೃತ ಮದ್ಯ ಮಾರಾಟವನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಲು
ಶ್ರಮಿಸಬೇಕೆಂದರು.
ತಾಲೂಕಾ ಸಮಾಜ ಕಲ್ಯಾಣ ಅಧಿಕಾರಿ ಆರ್.ಆರ್. ಕುಲಕರ್ಣಿ ಮಾತನಾಡಿ, ತಾಲೂಕಿನ ವಿವಿಧ
ಇಲಾಖೆಯ ಅಧಿಕಾರಿಗಳ ಸಹಕಾರದಿಂದ ತಾಲೂಕಿನಲ್ಲಿರುವ ಕಳ್ಳಭಟ್ಟಿ ಸಾರಾಯಿ
ಕೇಂದ್ರಗಳ ನಿರ್ಮೂಲನೆ ಹಾಗೂ ಗ್ರಾಮಗಳಲ್ಲಿ ನಡೆಯುತ್ತಿರುವ ಅಕ್ರಮ ಮದ್ಯ
ಮಾರಾಟವನ್ನು ನಿಯಂತ್ರಿಸುವುದರ ಮೂಲಕ ಸಾರ್ವಜನಿಕ ಸ್ವಾಸ್ಥ್ಯ ಮತ್ತು ಗ್ರಾಮದಲ್ಲಿ
ಶಾಂತಿ ಕಾಪಾಡಬೇಕು. ಈ ನಿಟ್ಟಿನಲ್ಲಿ ಕ್ರಿಯಾ ಯೋಜನೆಯನ್ನು ಹಾಕಿಕೊಂಡು ಕೆಲಸ
ನಿರ್ವಹಿಸುವುದು ಅವಶ್ಯಕವಾಗಿದೆ ಎಂದು ತಿಳಿಸಿದರು.
ಈ ವೇಳೆ ತಹಶೀಲ್ದಾರ ಪ್ರಶಾಂತ ಪಾಟೀಲ, ಗ್ರಾಮ ಪಂಚಾಯತ ಅಧ್ಯಕ್ಷ ಅಶೋಕ
ಖನಗಾವಿ, ಕೃಷ್ಣಾ ಪಾಟೀಲ, ಸೋಮಪ್ಪ ಲಮಾಣಿ, ಬಸವರಾಜ ನಾಯ್ಕರ, ರವಿ ಪಾಟೀಲ ಇತರರು
ಹಾಜರಿದ್ದರು.

LEAVE A REPLY

Please enter your comment!
Please enter your name here