ಕಸ ವಿಲೇವಾರಿ ಘಟಕ ಉದ್ಘಾಟಿಸಿದ ಸಿಇಒ

0

ಸಾವಳಗಿ : ಜಿಲ್ಲೆಯಲ್ಲಿ ಇಷ್ಟೊಂದು ಚಿಕ್ಕದಾಗ ಹಳ್ಳಿ ನಾಡಿಗೆ ಮಾದರಿಯಾಗಿರುವದು ತುಂಬಾ ಹೆಮ್ಮೆಯ ಸಂಗತಿ. ಹಿರೇಪಡಸಲಗಿ ಗ್ರಾಮದ ಪ್ರತಿಯೊಂದು ಯೋಜನೆಗಳನ್ನು ಬಹಳ ಅಚ್ಚುಕಟ್ಟಾಗಿ ನಿರ್ವಹಣೆ ಮಾಡಿದ್ದಾರೆ ಎಂದು ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಟಿ.ಬೂಬಾಲನ ಹೇಳಿದರು.
ಸಮೀಪದ ಹಿರೇಪಡಸಲಗಿ ಗ್ರಾಮದಲ್ಲಿ ನೂತನವಾಗಿ ನಿರ್ಮಾಣಗೊಂಡ ಕಸ ವಿಲೇವಾರಿ ಘಟಕ ಉದ್ಘಾಟಿಸಿ ಅವರು ಮಾತನಾಡಿದರು.
ಹಿರೇಪಡಸಲಗಿ ಗ್ರಾಮದಲ್ಲಿನ ಸ್ವಚ್ಛತೆ ನೋಡಿದಾಗ ಮಾತ್ರ ಮಹಾತ್ಮ ಗಾಂಧಿ ಅವರ ಸ್ವಚ್ಛ ಭಾರತ ಕನಸು ಇಡೇರಿದಂತಾಗುತ್ತದೆ. ತ್ಯಾಜ್ಯ ವಿಲೇವಾರಿ ಪ್ರತಿಯೊಂದು ಗ್ರಾಮ ಪಂಚಾಯತಗಳಿಗೆ ಸವಾಲಿನ ಕೆಲಸವಾಗಿದೆ. ಈ ಗ್ರಾಮದ ಸರ್ಕಾರಿ ನೌಕರರು, ವಿವಿಧ ಸಂಘಟನೆ ಹಾಗು ಗ್ರಾಮಸ್ಥರ ಸಹಕಾರದಿಂದ ಇಷ್ಟೊಂದು ಅಬಿವೃದ್ದಿ ಕೆಲಸ ಮಾಡಲು ಸಹಕಾರಿಯಾಗಿದೆ. ಕೇವಲ ಪಿಡಿಓ ಅವರಿಂದ ಮಾತ್ರ ಇಷ್ಟೊಂದು ಅಬಿವೃದ್ದಿ ಕೆಲಸ ಮಾಡಲು ಸಾದ್ಯವಿಲ್ಲ. ಅವರೊಂದಿಗೆ ಗ್ರಾಮಸ್ಥರ ಬಾಂದವ್ಯ ಹಾಗು ಸಹಕಾರ ಮುಖ್ಯ ಎಂದರು.
ಸರ್ಕಾರದಿಂದ ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಹಲವಾರು ಯೋಜನೆಗಳನ್ನು ಹಾಕಿಕೊಳ್ಳಲು ನಮ್ಮ ಸರ್ಕಾರ ವ್ಯವಸ್ಥೆ ಮಾಡಿದೆ. ಕೂಲಿ ಕಾರ್ಮಿಕರ ಜೋತೆಗೆ ಸ್ವಚ್ಛ ಗ್ರಾಮ ನಿರ್ಮಾಣ ಮಾಡಲು ಅವಕಾಶವಿದೆ. ಚರಂಡಿ ವ್ಯವಸ್ಥೆ ಇಲ್ಲದೆ ಇರುವ ಸ್ಥಳದಲ್ಲಿ ಇಂಗು ಗುಂಡಿಗಳನ್ನು ಬಹಳ ವ್ಯವಸ್ಥಿತವಾಗಿ ನಿರ್ವಹಿಸಿದ್ದಾರೆ. ನರೇಗಾ ಯೋಜನೆಯಲ್ಲಿ ಶಾಲಾ ಕಂಪೌಂಡ, ಕಿಚನ್ ಗಾರ್ಡನ, ಕೈತೋಟ ಮಾಡುವ ಅವಕಾಶವಿದೆ. ಅದನ್ನು ಕೂಡಾ ಗ್ರಾಮಸ್ಥರು ಸದುಪಯೋಗಪಡಿಸಿಕೊಳ್ಳಬೇಕೆಂದು ಹೇಳಿದರು.
ಹಿರೇಪಡಸಲಗಿ ಗ್ರಾಮದ ಪ್ರಮುಖ ಬೀದಿಗಳಿಗೆ ಹೋಗಿ ಅಲ್ಲಿನ ಚರಂಡಿ ವ್ಯವಸ್ಥೆ, ರಸ್ತೆ, ಶಾಲೆ ಹಾಗು ಶೌಚಾಲಯಗಳನ್ನು ವಿಕ್ಷಿಸಿದರು.
ಈ ಸಂದರ್ಭದಲ್ಲಿ ತಾಲೂಕ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ಅಬಿದ ಗದ್ಯಾಳ, ಪಿಡಿಓ ಸಂಗಮೇಶ ಸೋರಗಾಂವಿ ಸೇರಿದಂತೆ ಗ್ರಾಮದ ಪ್ರಮುಖರು ಹಾಗು ವಿವಿಧ ಸಂಘಟನೆಯ ಮುಖಂಡರು ಇದ್ದರು.
ಪೋಟೊ ವಿವರ : ಹಿರೇಪಡಸಲಗಿ ಗ್ರಾಮದಲ್ಲಿ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಟಿ. ಬೂಬಾಲನ ಸಸಿ ನೇಡುವದರ ಮೂಲಕ ಕಸವಿಲೇವಾರಿ ಘಟಕಕ್ಕೆ ಚಾಲನೆ ನೀಡಿದರು.

LEAVE A REPLY

Please enter your comment!
Please enter your name here