ಫೇಸ್‌ಬುಕ್ ಬಿಜೆಪಿ ಪರವಾಗಿದೆ ಎಂದು ಕಾಂಗ್ರೆಸ್ ಶುರು ಮಾಡಿದ್ದ ವಿವಾದವೀಗ ಅದಕ್ಕೇ ತಿರುಗೇಟು ನೀಡತೊಡಗಿದೆ!
ಫೇಸ್‌ಬುಕ್ ದ್ವೇಷ ಭಾಷಣ ವಿವಾದಕ್ಕೆ ಸಂಬಂಧಿಸಿದಂತೆ ಮಾಹಿತಿ ತಂತ್ರಜ್ಞಾನದ ಸಂಸದೀಯ ಸಮಿತಿ ಮುಂದೆ ಹಾಜರಾದ ಫೇಸ್‌ಬುಕ್ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ಅಜಿತ್ ಮೋಹನ್ ತಮಗೂ, ಕಾಂಗ್ರೆಸ್‌ಗೂ ಲಿಂಕ್ ಇದೆ ಎನ್ನುವುದನ್ನು ಒಪ್ಪಿಕೊಂಡಿದ್ದಾರೆ!
ನಾನು ಕೇರಳದ ಕಾಂಗ್ರೆಸ್ ಪಕ್ಷದೊಂದಿಗೆ ಸಲಹೆಗಾರರಾಗಿ ಕೆಲಸ ಮಾಡಿದ್ದೆ ಎಂದು ಅವರು ಹೇಳಿದ್ದಾರೆ. ಅಷ್ಟೇ ಅಲ್ಲದೇ ಯುಪಿಎ ಸರ್ಕಾರದ ಅಧಿಕಾರಾವಧಿಯಲ್ಲಿ ಇವರು ಯೋಜನಾ ಆಯೋಗ ಮತ್ತು ನಗರಾಭಿವೃದ್ಧಿ ಸಚಿವಾಲಯದ ಅನೇಕ ಕಾರ್ಯಗಳಲ್ಲಿ ಭಾಗಿಯಾಗಿದ್ದರು ಎಂದು ಕೂಡ ಹೇಳಲಾಗುತ್ತಿದೆ.
ನರೇಂದ್ರ ಮೋದಿ ಹಾಗೂ ಬಿಜೆಪಿ ಸರ್ಕಾರದ ವಿರುದ್ಧ ಬರೆದಿದ್ದ ಎಲ್ಲ ಲೇಖನಗಳನ್ನು ಹಿಂದಕ್ಕೆ ತೆಗೆದುಕೊಳ್ಳುತ್ತೇನೆ ಎಂದು ಅವರು ಹೇಳಿರುವುದಾಗಿ ವರದಿಯಾಗಿದೆ.
ಕೇಂದ್ರ ಮಾಹಿತಿ ತಂತ್ರಜ್ಞಾನ ಸಚಿವ ರವಿಶಂಕರ್ ಪ್ರಸಾದ್ ಅವರು ಫೇಸ್‌ಬುಕ್ ಸಿಇಒ ಮಾರ್ಕ್ ಜುಕರ್‌ಬರ್ಗ್‌ಗೆ ಪತ್ರ ಬರೆದು, ಬಲಪಂಥೀಯ ಸಿದ್ಧಾಂತ ಹೊಂದಿರುವ ಪೇಜ್‌ಗಳನ್ನು ಡಿಲೀಟ್ ಮಾಡುವ ಸಮಗ್ರ ಪ್ರಯತ್ನ ಫೇಸ್‌ಬುಕ್‌ನಿಂದ ನಡೆಯುತ್ತಿದೆ ಎಂದು ಆರೋಪಿಸಿದ್ದರು.
ಈ ಹಿನ್ನೆಲೆಯಲ್ಲಿ, ಫೇಸ್‌ಬುಕ್ ಇಂಡಿಯಾ ವ್ಯವಸ್ಥಾಪಕ ನಿರ್ದೇಶಕರು ಸ್ಥಾಯಿ ಸಮಿತಿ ಮುಂದೆ ಹಾಜರಾಗಿ ಮಾಹಿತಿ ನೀಡಿದ್ದಾರೆ.
ಫೇಸ್‌ಬುಕ್‌ನಲ್ಲಿ ಆಗುತ್ತಿರುವ ನೇಮಕಾತಿಗಳು ಎಡಪಂಥೀಯಕ್ಕೆ ಒಲವು ತೋರಿದಂತೆ ಕಾಣುತ್ತಿವೆ ಎಂದು ಬಿಜೆಪಿ ಸಂಸದರು ಆರೋಪಿಸಿದ್ದಾರೆ.
ಇಂಟರ್‌ನ್ಯಾಷನಲ್ ಫ್ಯಾಕ್ಟ್ ಚೆಕಿಂಗ್ ನೆಟ್‌ವರ್ಕ್ ಸಮಿತಿ ಹಾಗೂ ಅದರ ಮುಖ್ಯಸ್ಥ ಕಂಚನ್ ಕೌರ್ ಬಿಜೆಪಿ ಸರ್ಕಾರದ ವಿರುದ್ಧ ಅವಹೇಳನಕಾರಿ ಭಾಷೆ ಬಳಸಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.
ಅಷ್ಟೇ ಅಲ್ಲದೇ, ಫೇಸ್‌ಬುಕ್ ಸಿಬ್ಬಂದಿ ‘ಫೇಸ್‌ಬುಕ್ ಫಾರ್ ಮುಸ್ಲಿಮ್’ನಂಥ ಗುಂಪುಗಳನ್ನು ರಚಿಸುತ್ತಿದ್ದಾರೆ. ಶ್ರೀ ರಾಮ, ಹಿಂದೂ ದೇವರ ಮತ್ತು ದೇವತೆಗಳಿಗೆ ಸಂಬಂಧಪಟ್ಟ ಪೋಸ್ಟ್‌ಗಳನ್ನು ದ್ವೇಷದ ಪೋಸ್ಟ್‌ಗಳೆಂದು ಬ್ರಾಂಡ್ ಮಾಡಲಾಗುತ್ತಿದೆ ಎಂದು ಸಂಸದರು ಹೇಳಿದ್ದಾರೆ.