ಕಾಂಗ್ರೆಸ್ ನೇತೃತ್ವದಲ್ಲಿ ಜನಧ್ವನಿ ಪ್ರತಿಭಟನೆ

0

http://match.sachitv.com ಕಾಂಗ್ರೆಸ್ ನೇತೃತ್ವದಲ್ಲಿ ಜನಧ್ವನಿ ಪ್ರತಿಭಟನೆ

ಗುಡಿಬಂಡೆ :-ತಾಲ್ಲೂಕು ಬ್ಲಾಕ್
ಕಾಂಗ್ರೆಸ್ ಸಮಿತಿಯಿಂದ ಗುಡಿಬಂಡೆ ತಾಲೂಕು ಕಚೇರಿ ಮುಂದೆ ಇಂದು ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹಾಗು ಮಾಜಿ ಮುಖ್ಯಮಂತ್ರಿ ಡಿ ದೇವರಾಜ ಅರಸು ಅವರ ಜಯಂತಿ ಪ್ರಯುಕ್ತ ಜನಧ್ವನಿ ಪ್ರತಿಭಟನೆ ನಡೆಸಿತು.

ಬೀಚಗಾನಹಳ್ಳಿ ಅಶ್ವಥಪ್ಪ ಮಾತನಾಡಿ ರಾಜ್ಯ ಹಾಗೂ ಕೇಂದ್ರ ಸರ್ಕಾರ ಜನ ವಿರೋಧಿ ನೀತಿಗಳ ವಿರುದ್ದ ಆಕ್ರೋಶ ವ್ಯಕ್ತಪಡಿಸಿತು.

ರಾಜ್ಯ ಬಿಜೆಪಿ ಸರ್ಕಾರವು ಭೂ ಸುಧಾರಣೆ ಕಾಯ್ದೆ ತಿದ್ದುಪಡಿ ಹಾಗೂ ಎಪಿಎಂಸಿ ಕಾಯ್ದೆಗಳನ್ನ ಸುಗ್ರೀವಾಜ್ಞೆ ಮೂಲಕ ಜಾರಿ ಮಾಡಿದ್ದಾರೆ. ಜಿಡಿಪಿ ಕುಸಿತ ಸೇರಿ ಹಲವು ವಲಯಗಳಲ್ಲಿ ಸರ್ಕಾರದ ಆಡಳಿತ ವಿಫಲವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬಾಗೇಪಲ್ಲಿ ತಾಲ್ಲೂಕು ಜನಪ್ರಿಯ ಶಾಸಕ ಎಸ್. ಎನ್.ಸುಬ್ಬಾರೆಡ್ಡಿ ಮಾತನಾಡಿ
ಬಿಜೆಪಿ ನೇತೃತ್ವದ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಬಂಡವಾಳಶಾಯಿಗಳ ಪರ ಇವೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಕೂಡಲೇ ಭೂ ಸುಧಾರಣೆ ಕಾಯ್ದೆಗೆ ತಿದ್ದುಪಡಿ ಮಾಡಿರೋದನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿದರು.

ಈ ಕಾರ್ಯಕ್ರಮದಲ್ಲಿ ಗುಡಿಬಂಡೆ ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಬೀಚಗಾನಹಳ್ಳಿ ಅಶ್ವಥಪ್ಪ. ಕೆಡಿಪಿ ಸದಸ್ಯರು ಕೃಷ್ಣೇಗೌಡ. ಮಾಜಿ ಪಟ್ಟಣ ಪಂಚಾಯಿತಿ ಸದಸ್ಯರು ಬಾಬು. ಚಾಂದು. ನಂರೇದ್ರ. ಗುಡಿಬಂಡೆ ತಾಲೂಕು ನೂತನ ಯುವ ಕಾಂಗ್ರೆಸ್ ಅಧ್ಯಕ್ಷರು ಮಂಜುನಾಥ್. ಪಿಎಲ್ ಡಿ hಅಧ್ಯಕ್ಷರು ಸೇರಿ ಮುಂತಾದವರು ಭಾಗವಹಿಸಿದ್ದರು.

ವರದಿ:-ಸತೀಶ ಬಾಬು.ಎ
ಗುಡಿಬಂಡೆ ತಾಲೂಕು

LEAVE A REPLY

Please enter your comment!
Please enter your name here