ಕಾರ್ಕಳ ಟೀಚರ್ ಮಕ್ಕಳಿಗೆ ಫೇವರೇಟ್ ಆಗಿ ಫುಲ್ ಫೇಮಸ್ | ಕಲೆಯಲ್ಲಿ ಸಾಕಾಷ್ಟು ಆಸಕ್ತಿ ಇರುವ ಶಿಕ್ಷಕಿ | ವಿಡಿಯೋ

0

ಕಾರ್ಕಳ ಟೀಚರ್ ಮಕ್ಕಳಿಗೆ ಫೇವರೇಟ್ ಆಗಿ ಫುಲ್ ಫೇಮಸ್…..

ಶಾಲೆ ಅನ್ನೋದು ಪ್ರತಿಯೊಂದು ಮಗುವಿನ ಭವಿಷ್ಯಕ್ಕೆ ಅಡಿಪಾಯ ಹಾಕೋ ದೇವಾಲಯವಿದ್ದಂತೆ. ಹೆತ್ತವರು ತಮ್ಮ ಮಕ್ಕಳ ಉಜ್ವಲ ಭವಿಷ್ಯದ ಕನಸು ಕಂಡು ಶಿಕ್ಷಕರ ಮೇಲೆ ಭರವಸೆಯಿಟ್ಟು ತಮ್ಮ ಮಕ್ಕಳನ್ನು ಶಾಲೆಗೆ ಸೇರಿಸುತ್ತಾರೆ. ಒಬ್ಬ ಶಿಕ್ಷಕ ಮಕ್ಕಳಿಗೆ ಕೇವಲ ಪಠ್ಯ ವಿಚಾರಗಳನ್ನೇ ಹೇಳಿಕೊಟ್ಟರಷ್ಟೇ ಸಾಲದು. ಮಗುವಿನ ಸರ್ವತೋಮುಖ ಅಭಿವೃದ್ಧಿಗೆ ಬೇಕಾದ ಎಲ್ಲಾ ಪೂರಕ ವಾತಾವರಣವನ್ನು ಆತ ಕಲ್ಪಿಸಿಕೊಡಬೇಕು. ಪಾಠದ ಜೊತೆ ಆಟವಿದ್ದರಷ್ಟೆ ಮಕ್ಕಳು ಖುಷಿಖುಷಿಯಿಂದ ಕಲಿಯುತ್ತಾರೆ. ಶಾಲೆಗೆ ಬರುತ್ತಾರೆ. ಆದ್ದರಿಂದ ಶಿಕ್ಷಕರ ಜವಬ್ದಾರಿ ತುಂಬಾ ಮಹತ್ತರವಾದದ್ದು.

ಈಗ ಕೊರೊನಾದ ಕಾರಣ ಶಾಲೆಗಳನ್ನು ತೆರೆಯದೆ ಮಕ್ಕಳೆಲ್ಲಾ ಮನೆಯಲ್ಲೇ ಇದ್ದಾರೆ. ಆನ್ ಲೈನ್ ಕ್ಲಾಸ್‍ಗಳಿದ್ದರೂ ಮಕ್ಕಳನ್ನು ಅದರಲ್ಲಿ ತೊಡಗಸಿಕೊಳ್ಳುವಂತೆ ಮಾಡೋದು ಹೆತ್ತವರಿಗೂ ಕಿರಿಕಿರಿ. ಇಂತಹ ಹೆತ್ತವರ ತಲೆಬಿಸಿಗೆ ಉಡುಪಿ ಜಿಲ್ಲೆಯ ಕಾರ್ಕಳದ ಜೇಸಿಸ್ ಆಂಗ್ಲ ಮಾಧ್ಯಮ ಶಾಲೆಯ ಶಿಕ್ಷಕಿ ವಂದನಾ ರೈ ಪರಿಹಾರವೊಂದನ್ನು ಕೊಟ್ಟಿದ್ದಾರೆ. ಇವರು “ಚಂದಿರನೇತಕೆ ಓಡುವನಮ್ಮ” ಹಾಡಿಗೆ ಹಾಗೂ ಇನ್ನೂ 3-4 ಹಾಡಿಗೆ ಅದ್ಬುತವಾಗಿ ಹೆಜ್ಜೆ ಹಾಕಿ, ನರ್ಸರಿ, ಎಲ್‍ಕೆಜಿ-ಯುಕೆಜಿ ಮಕ್ಕಳು ಮನೆಯಲ್ಲಿಯೇ ಕಲಿಯಲಿ ಎಂದು ಶಾಲಾ ಮಕ್ಕಳ ವಾಟ್ಸ್ಯಾಪ್ ಗ್ರೂಪ್ ಹಾಗೂ ತನ್ನ ಫೇಸ್‍ಬುಕ್ ಖಾತೆಗೆ ಪೋಸ್ಟ್ ಮಾಡಿದ್ದಾರೆ. ಶಿಕ್ಷಕಿ ವಂದನಾ ಅವರ ಈ ಡ್ಯಾನ್ಸ್ ವಿಡಿಯೋಗಳು ಸಾಕಷ್ಟು ಚಿನ್ನರ ಮನ ಕದ್ದು ಸಾಮಾಜಿಕ ಜಾಲತಾಣಗಳಲ್ಲಿ ಫುಲ್ ವೈರಲ್ ಆಗಿದೆ.

ಕಲೆಯಲ್ಲಿ ಸಾಕಾಷ್ಟು ಆಸಕ್ತಿ ಇರುವ ಶಿಕ್ಷಕಿ ವಂದನಾ, ಯಕ್ಷಗಾನ ಕಲಾವಿದೆಯೂ ಹೌದು. ಬಾಲ್ಯದಿಂದಲೂ ಸಂಗೀತ, ನೃತ್ಯದಲ್ಲಿ ಬೆಳೆಸಿಕೊಂಡು ಹಲವಾರು ಪ್ರಶಸ್ತಿಗಳನ್ನೂ ತನ್ನದಾಗಿಸಿಕೊಂಡಿರುವ ವಂದನಾ ರೈ, ಇದೀಗ ಮಕ್ಕಳ ಡ್ಯಾನ್ಸ್ ವಿಡಿಯೋದ ಮೂಲಕ ಎಲ್ಲರಿಗೂ ಫೇವರೇಟ್ ಟೀಚರ್ ಆಗಿ ಫುಲ್ ಫೇಮಸ್ ಆಗಿದ್ದಾರೆ.

ವರದಿ: ಹರೀಶ್ ಸಚ್ಚೇರಿಪೇಟೆ

LEAVE A REPLY

Please enter your comment!
Please enter your name here