ಕಾರ್ಕಳ ಶಾಸಕ ಸುನೀಲ್ ಕುಮಾರ್ ಸಿಮೆಂಟ್ ಹಗರಣ ತನಿಖೆಗೆ ಒತ್ತಾಯ: ಸರ್ಕಾರಕ್ಕೆ ಮನವಿ

0

ಕಾರ್ಕಳ ಶಾಸಕ ಸುನೀಲ್ ಕುಮಾರ್ ಸಿಮೆಂಟ್ ಹಗರಣದ ತನಿಖೆಗೆ ಒತ್ತಾಯ: ಸರ್ಕಾರಕ್ಕೆ ಮನವಿ

ಜುಲೈ 28, ಉಡುಪಿ: ಇತ್ತೀಚೆಗೆ ಮಾದ್ಯಮಗಳಲ್ಲಿ ವರದಿಯಾದಂತೆ ಉಡುಪಿ ಜಿಲ್ಲೆಯ ಕಾರ್ಕಳ ಶಾಸಕರಾದ ಸುನೀಲ್ ಕುಮಾರ್ ಅವರು KRDIL ಸರ್ಕಾರಿ ಸಿಮೆಂಟನ್ನು ತನ್ನ ಕಛೇರಿ ನಿರ್ಮಾಣಕ್ಕೆ ಬಳಸಿರುವ ಬಗ್ಗೆ ಮಾದ್ಯಮಗಳಲ್ಲಿ ವೀಡಿಯೋ ಒಂದು ಹರಿದಾಡಿ ಸುದ್ದಿಯಾಗಿತ್ತು. ಇದೊಂದು ಅಕ್ರಮ ಸಿಮೆಂಟ್ ಹಗರಣ ಎನ್ನುವುದರ ಬಗ್ಗೆ ಸಂಶಯವಿದ್ದು ಇದನ್ನು ನಿವೃತ್ತ ನ್ಯಾಯಾಧೀಶರ ಮೂಲಕ ಕೂಡಲೇ ತನಿಖೆ ನಡೆಸಬೇಕೆಂದು ಉಡುಪಿ ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಕಾಂಗ್ರೆಸ್ ನಿಯೋಗದಿಂದ ಮನವಿ ಮಾಡಲಾಯಿತು.

ಮಾಜಿ ಸಚಿವರಾದ ವಿನಯ ಕುಮಾರ್ ಸೊರಕೆ, ಉಡುಪಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಅಶೋಕ್ ಕುಮಾರ್ ಕೊಡವೂರು, ಬೈಂದೂರು ಮಾಜಿ ಶಾಸಕರಾದ ಗೋಪಾಲ ಪೂಜಾರಿಯವರ ಮುಂದಾಳತ್ವದಲ್ಲಿ ತೆರಳಿದ ನಿಯೋಗದಲ್ಲಿ ಮಾಜಿ ಶಾಸಕರಾದ ಯು.ಆರ್. ಸಭಾಪತಿ, ಕೆಪಿಸಿಸಿ ಮುಖಂಡರಾದ ಮುರಳಿ ಶೆಟ್ಟಿ, ವೆರನಿಕಾ ಕರ್ನೆಲಿಯೋ, ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷರಾದ ವಿಶ್ವಾಸ್ ವಿ ಅಮೀನ್, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಹರೀಶ್ ಕಿಣಿ, ಜಿಲ್ಲಾ ಕಾಂಗ್ರೆಸ್ ಉಪಾದ್ಯಕ್ಷರಾದ ಪ್ರಖ್ಯಾತ್ ಶೆಟ್ಟಿ, ನೀರೇ ಕೃಷ್ಣ ಶೆಟ್ಟಿ , ವೈ ಸುಕುಮಾರ್, ಕಾರ್ಕಳ ಬ್ಲಾಕ್ ಅದ್ಯಕ್ಷರಾದ ಶೇಖರ ಮಡಿವಾಳ, ಲೀಗಲ್ ಸೆಲ್ ಅಧ್ಯಕ್ಷರಾದ ಹರೀಶ್ ಶೆಟ್ಟಿ ಪಾಂಗಾಳ, ಅಲ್ಪಸಂಖ್ಯಾತ ಘಟಕ ಅಧ್ಯಕ್ಷರಾದ ಇಸ್ಮಾಯಿಲ್ ಅತ್ರಾಡಿ, ಹೆಬ್ರಿ ಬ್ಲಾಕ್ ಅದ್ಯಕ್ಷರಾದ ಮಂಜುನಾಥ ಪೂಜಾರಿ, ಕಾರ್ಕಳ ಪುರಸಭಾ ಸದಸ್ಯರುಗಳಾದ ಶುಭದ್ ರಾವ್ ಹಾಗೂ ಮಧುರಾಜ್ ಶೆಟ್ಟಿ, ಕಾಂಗ್ರಸಿನ ಹಿಂದುಳಿದ ವರ್ಗದ ಅಧ್ಯಕ್ಷರಾದ ಯತೀಶ್ ಕರ್ಕೇರ, ಬ್ರಹಾವರ ಬ್ಲಾಕ್ ಅದ್ಯಕ್ಷರಾದ ನಿತ್ಯಾನಂದ ಶೆಟ್ಟಿ,ಬಾಲಕೃಷ್ಣ ಪೂಜಾರಿ, ಎಂ ಪಿ ಮೊಯಿದಿನಬ್ಬ, ಯೋಗೀಶ್ ನಯನ್ ಇನ್ನ, ಕೃಷ್ಣ ಶೆಟ್ಟಿ ನಲ್ಲೂರ್ , ಅಜಿತ್ ಹೆಗ್ಡೆ ಮಾಲಾ, ಪ್ರದೀಪ್ ಶೆಟ್ಟಿ, ಹಮದ್, ಝಮೀರ್ ಹಾಗೂ ಕಾಂಗ್ರೆಸಿನ ವಿವಿಧ ಘಟಕಗಳ ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here