ಕಾರ್ಗಿಲ್ ವಿಜಯೋತ್ಸವದ ನೆನಪಿಗಾಗಿ ಉತ್ತಿಷ್ಠ ಚಾರಿಟೆಬಲ್ ಸೇವಾ ಟ್ರಸ್ಟ್ ವತಿಯಿಂದ ಸ್ವಯಂ ರಕ್ತದಾನ ಶಿಬಿರ
ಕೋವಿಡ್ -19 ಸಂದರ್ಭದಲ್ಲಿಯು ಸಹ ಸಮಾಜ ಮುಖಿ ಕಾರ್ಯಕ್ಕೆ ಮುಂದಾದ ಉತ್ತಿಷ್ಠ ಚಾರಿಟೆಬಲ್ ಸೇವಾ ಟ್ರಸ್ಟ್
ಬೆಂಗಳೂರು :ಕೆಂಪೇಗೌಡ ನಗರ ಎಲ್ಲ ದಾನಗಳಲ್ಲೇ ರಕ್ತದಾನ ಶ್ರೇಷ್ಠ ದಾನ. ರಕ್ತವನ್ನು ದಾನ ಮಾಡುವುದು ಒಳ್ಳೆಯ ಕಾರ್ಯ. ರಕ್ತದಾನ ಮತ್ತೊಬ್ಬರ ಪ್ರಾಣ ಉಳಿಸುವ ಜತೆಗೆ ವ್ಯಕ್ತಿ ಆರೋಗ್ಯಯುತ ಜೀವನ ನಡೆಸಲು ಸಹಕಾರಿಯಾಗಲಿದೆ ರಕ್ತದ ಅವಶ್ಯಕತೆ ಉಂಟಾದಾಗ ಮಾತ್ರ ರಕ್ತದ ಮಹತ್ವ ಪ್ರತಿಯೊಬ್ಬರಿಗೂ ಅರಿವಾಗುತ್ತದೆ. ಆದ್ದರಿಂದ, ಯುವಕರು ರಕ್ತದಾನದ ಕುರಿತು ಇರುವ ಮೌಢ್ಯಗಳನ್ನು ತೊಡೆಯುವ ಕೆಲಸ ಮಾಡಬೇಕು. ಒಬ್ಬ ದಾನಿಯಿಂದ ಪಡೆದ ರಕ್ತವೂ ಅದೇ ರಕ್ತದ ಗುಂಪಿಗೆ ಸೇರಿದ ವ್ಯಕ್ತಿಗೆ ಉಪಯೋಗಿಸಬಹುದು. ದಾನಿಯ ಆರೋಗ್ಯದ ಮೇಲೆ ಯಾವುದೇ ತೊಂದರೆ ಉಂಟಾಗುವುದಿಲ್ಲ’ ಎಂದು ರಾಷ್ಟೋತ್ಥಾನ ಪರಿಷತ್ ನ ಜನರಲ್ ಸೆಕ್ರೆಟರಿ ದಿನೇಶ್ ಹೆಗ್ಡೆ, ರವರು ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಮಾತನಾಡಿದರು.
ಉತ್ತಿಷ್ಠ ಚಾರಿಟೆಬಲ್ ಸೇವಾ ಟ್ರಸ್ಟ್ ವತಿಯಿಂದ ಆಯೋಜಿಸಿದ್ದ ಸ್ವಯಂ ಪ್ರೇರಿತ ರಕ್ತ ದಾನ ಶಿಬಿರವನ್ನು ನಗರದ ಗವಿಪುರಂ ಗುಟ್ಟಳ್ಳಿಯಲ್ಲಿರುವ
ರಾಷ್ಟೋತ್ಥಾನ ರಕ್ತ ಕೇಂದ್ರದಲ್ಲಿ
ಸ್ವಯಂ ಪ್ರೇರಿತ ರಕ್ತದಾನ ಶಿಬಿರದಲ್ಲಿಉತ್ತಿಷ್ಠ ಚಾರಿಟೆಬಲ್ ಸೇವಾ ಟ್ರಸ್ಟಿನ ಸಂಸ್ಥಾಪಕಾಧ್ಯಕ್ಷರಾದ ಎಂ. ಸುಜಾತರವರು ಮಾತನಾಡಿ ಇಂದು ಕಾರ್ಗಿಲ್ ವಿಜಯೋತ್ಸವ ದಿವಸ ಮತ್ತು ನಮ್ಮ ಟ್ರಸ್ಟ್ ಸ್ಥಾಪನೆಗೊಂಡು ಇಂದಿಗೆ ಒಂದು ತಿಂಗಳ ಸವಿ ನೆನಪಿನ ಅಂಗವಾಗಿ ಹಮ್ಮಿಕೊಳ್ಳಲಾಗಿದೆ, ರಕ್ತಕ್ಕೆ ಪರ್ಯಾಯ ಇಲ್ಲ, ಆದ್ದರಿಂದ ಸಾವಿನ ಅಂಚಿನಲ್ಲಿರುವವರ ಜೀವ ಉಳಿಸಬೇಕಾದರೆ ರಕ್ತವೇ ನೀಡಬೇಕು. ಆದ್ದರಿಂದ ಪ್ರತಿಯೊಬ್ಬರೂ ಸ್ವಯಂ ಪ್ರೇರಿತವಾಗಿ ರಕ್ತದಾನ ಮಾಡಲು ಮುಂದೆ ಬರಬೇಕು. 18 ರಿಂದ 60 ವರ್ಷ ವಯಸ್ಸಿನ ಆರೋಗ್ಯವಂತ ಪುರುಷರು ಹಾಗೂ ಮಹಿಳೆಯರು ಪ್ರತಿ ಮೂರು ತಿಂಗಳಿಗೊಮ್ಮೆ ರಕ್ತದಾನ ಮಾಡುವುದು ರೂಢಿಸಿಕೊಳ್ಳಬೇಕು
ಒಂದು ಯೂನಿಟ್ ರಕ್ತದಿಂದ ನಾಲ್ಕು ಜನರ ಪ್ರಾಣ ಉಳಿಸಬಹುದಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ಯುವಜನರು ಉತ್ಸಾಹದಿಂದ ರಕ್ತದಾನ ಮಾಡಲು ಮುಂದೆ ಬರಬೇಕು. ಇದರಿಂದ ಪ್ರಾಣ ಹಾನಿಯನ್ನು ಸ್ವಲ್ಪ ಮಟ್ಟಿಗೆ ಕಡಿಮೆ ಮಾಡಬಹುದು. ರಕ್ತದಾನ ಇತರರಿಗೆ ಮರುಜನ್ಮನೀಡುವ ಶ್ರೇಷ್ಠ ಮತ್ತು ಸಾರ್ಥಕ ಸೇವೆಯಾಗಿದೆ’ ಎಂದು ಹೇಳಿದರು .
ಶಿಬಿರದಲ್ಲಿ ಟ್ರಸ್ಟಿನ ಕಾರ್ಯಧ್ಯಕ್ಷರಾದ ಡಿ. ಅಂಕನಾಥ್ ರವರು ಹಾಗೂ ಪದಾಧಿಕಾರಿಯಾದ ಮಹೇಶ್ ರವರು ಸ್ವತಃ ತಾವೇ ರಕ್ತ ದಾನ ಮಾಡುವ ಮೂಲಕ ರಕ್ತದಾನ ಶಿಬಿರ ಆಯೋಜಿಸಿರುವ ನಮ್ಮ ಟ್ರಸ್ಟಿನ ಸಾಮಜಿಕ ಚಿಂತನೆ, ಕಳಕಳಿಯನ್ನು ಸಮಾಜದಲ್ಲಿ ಗುರುತಿಸುವಂತೆ ನಮ್ಮ ಸಮಾಜಕ್ಕೆ ಒಳಿತು ಮಾಡುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ ಎಂದರು.ಒಟ್ಟು 65 ದಾನಿಗಳಿಂದ ರಕ್ತ ದಾನ ನೀಡಲಾಯಿತು
ಈ ಸಂದರ್ಭದಲ್ಲಿ ಉತ್ತಿಷ್ಠ ಚಾರಿಟೆಬಲ್ ಸೇವಾ ಟ್ರಸ್ಟ್ ವತಿಯಿಂದ ಭಾಗವಹಿಸಿದ ಅತಿಥಿ ಗಣ್ಯರಿಗೆ ಸನ್ಮಾನಿಸಿ ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು.
ಶಿಬಿರದಲ್ಲಿ ಟ್ರಸ್ಟಿನ ಕಾರ್ಯಧ್ಯಕ್ಷರಾದ ಡಿ, ಅಂಕನಾಥ್, ಕಾರ್ಯದರ್ಶಿ ರವಿಕುಮಾರ್. ಸಿ .ಡಿ ಪದಾಧಿಕಾರಿಗಳಾದ ಹಾರಿಕ. ಡಿ, ಹರೀಶ್ ಶರ್ಮಾ, ಮಹೇಶ್, ಕವಿತಾ, ಟ್ರಸ್ಟ್ ಸದಸ್ಯರಾದ ಚಾರುಲತ, ಪವಿತ್ರ ಪಾಲ್ಗೊಂಡು ಕಾರ್ಯಕ್ರಮದ ನಿರೂಪಣೆ ಯನ್ನು ಸದಸ್ಯ ವಾರುಣಿ ನಡೆಸಿ ದರು ಕಾರ್ಯದರ್ಶಿ ರವಿಕುಮಾರ್ ವಂದಿಸಿದರು.