ಕಾಲುಬಾಯಿ ರೋಗ ಲಸಿಕಾ ಅಭಿಯಾನಕ್ಕೆ ಚಾಲನೆ

0

ರಾಷ್ಟ್ರೀಯ ಜಾನುವಾರು ರೋಗ ನಿಯಂತ್ರಣ ಕಾರ್ಯಕ್ರಮದಡಿಯಲ್ಲಿ ಮೊದಲನೇ ಸುತ್ತಿನ ಕಾಲು ಬಾಯಿ ರೋಗ ಲಸಿಕಾ ಅಭಿಯಾನಕ್ಕೆ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ॥ಬಿ.ಸಿ.ಸತೀಶ ಚಾಲನೆ ನೀಡಿದರು.

ನಗರದ ಎಪಿಎಂಸಿ ಆವರಣದ ಪ್ರಾಥಮಿಕ ಪಶು ಚಿಕಿತ್ಸಾ ಕೇಂದ್ರದಲ್ಲಿ ಇಂದು ಗೋಪೂಜೆ ಮಾಡಿ ಲಸಿಕೆ ಹಾಕುವ ಮೂಲಕ ಚಾಲನೆ ನೀಡಿ ಮಾತನಾಡಿ, ಕಾಲು ಬಾಯಿ ರೋಗದಿಂದ ಜಾನುವಾರು ರಕ್ಷಿಸಲು ಲಸಿಕೆ ಹಾಕಿಸಬೇಕು, ಪಶುಸಾಕಾಣಿಕೆದಾರರ ಆದಾಯವೂ ಕಡಿಮೆಯಾಗದಂತೆ ಮಾಡಿಕೊಳ್ಳಬಹುದಾಗಿದೆ ಎಂದು ರೈತರಿಗೆ ಹೇಳಿದರು .

ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆ ಆಡಳಿತ ಉಪನಿರ್ದೇಶಕ ಡಾ || ಟಿ.ಪರಮೇಶ್ವರ ನಾಯ್ಕ , ಪಾಲಿಕ್ಲಿನಿಕ್ ಉಪನಿರ್ದೇಶ ಡಾ || ಲಿಂಗರಾಜ , ಸಹಾಯಕ ನಿರ್ದೇಶಕ ಡಾ || ಉಮೇಶ.ಎನ್.ಕೊಂಡಿ , ಮುಖ್ಯ ಪಶುವೈದ್ಯಾಧಿಕಾರಿ ಡಾ || ಮನೋಹರ ದ್ಯಾಬೇರಿ ಹಾಗೂ ಸಿಬ್ಬಂದಿವರ್ಗದವರು ಲಸಿಕಾ ಅಭಿಯಾನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು . ಸದರಿ ಕಾರ್ಯಕ್ರಮದಲ್ಲಿ 50 ಜಾನುವಾರುಗಳಿಗೆ ಲಸಿಕೆ ಹಾಕಲಾಯಿತು .

LEAVE A REPLY

Please enter your comment!
Please enter your name here