ಕುಂದಗೋಳಕ್ಕೆ ಡಿವೈಎಸ್ಪಿ ರವಿ ನಾಯಕ ಭೇಟಿ ಲಾಕ್ ಡೌನ್ ಕ್ರಮ ಪರಿಶೀಲನೆ

0

ಕುಂದಗೋಳಕ್ಕೆ ಡಿವೈಎಸ್ಪಿ ರವಿ ನಾಯಕ ಬೇಟಿ ಲಾಕ್ ಡೌನ್ ಕ್ರಮ ಪರಿಶೀಲನೆ

ಕುಂದಗೋಳ : ಕೊರೋನಾ ವೈರಸ್ ಮುಂಜಾಗ್ರತಾ ಕ್ರಮವಾಗಿ ಸರ್ಕಾರ ಆದೇಶಿಸಿರುವ ಲಾಕ್ ಡೌನ್ ಪರಿಶೀಲನೆಗೆ ಪಟ್ಟಣಕ್ಕೆ ಜಿಲ್ಲಾ ಗ್ರಾಮೀಣ ಡಿವೈಎಸ್ಪಿ ರವಿ ನಾಯಕ ಬೇಟಿ ನೀಡಿ ಲಾಕ್ ಡೌನ್ ಕ್ರಮ ವಿಕ್ಷೀಸಿದರು.

ಇದೇ ಸಂದರ್ಭದಲ್ಲಿ ಪಟ್ಟಣದ ಅಕ್ಷಯ ಇಂಡೇನ್ ಗ್ಯಾಸ್ ಡಿಸ್ಟ್ರಿಬ್ಯೂಟರ್ ಆಪೀಸ್ ಮುಂದೆ ಸಿಲಿಂಡರ್ ಪಡೆಯಲು ಜನರು ಸೇರಿರುವುದನ್ನ ಕಂಡು ಏಜೆನ್ಸಿ ಮಾಲೀಕನಿಗೆ ಮನೆ ಮನೆಗೆ ಹೋಗಿ ಸಿಲಿಂಡರ್ ಒದಗಿಸುವಂತೇ ತಾಕೀತು ಮಾಡಿ ಆಫೀಸ್ ನಲ್ಲಿ ಸಿಲಿಂಡರ್ ನೀಡದಂತೆ ತಿಳಿಸಿ ಲಾಕ್ ಡೌನ್ ಕ್ರಮ ವಿಫಲವಾಗಲು ಇಲ್ಲಿ ಗ್ಯಾಸ್ ನೆಪದಲ್ಲಿ ಬೈಕ್ ಸವಾರರು ಸಂಚರಿಸುವುದು ಕಾರಣವಾಗುತ್ತೆ ನೀವು ಮನೆ ಮನೆಗೆ ಸಿಲಿಂಡರ್ ಒದಗಿಸಿ ಎಂದರು.

ಇನ್ನು ಡಿವೈಎಸ್ಪಿ ಬೇಟಿ ನೀಡಿದ ಸಂದರ್ಭದಲ್ಲೇ ಪಟ್ಟಣದ ಮೆಡಿಕಲ್ ಶಾಪ್ ಮುಂದೆ ಸಾಮಾಜಿಕ ಅಂತರ ಮೀರಿ ಜಮಾಯಿಸಿದ್ದ ಜನರಿಗೆ ಇನ್ಸಪೆಕ್ಟರ್ ಬಸವರಾಜ ಕಲ್ಲಮ್ಮನವರ ಸಾಮಾಜಿಕ ಅಂತರದ ಪಾಲನೆ ತಿಳಿಸಿ ಮೆಡಿಕಲ್ ಶಾಪ್ ಮಾಲೀಕನಿಗೆ ಸೂಕ್ತ ದಂಡ ವಿಧಿಸಿದರು ಪಟ್ಟಣದ ಮಾರ್ಕೇಟ್ ರಸ್ತೆ, ಬಸ್ ನಿಲ್ದಾಣ, ತಹಶೀಲ್ದಾರ ಕಛೇರಿ ರಸ್ತೆ, ಹುಬ್ಬಳ್ಳಿ ಲಕ್ಷ್ಮೇಶ್ವರ ರಸ್ತೆ ಸೇರಿದಂತೆ ಪಟ್ಟಣದ ವಿವಿಧೆಡೆ ಸಂಚರಿಸಿ ಡಿವೈಎಸ್ಪಿ ಲಾಕ್ ಡೌನ್ ಕ್ರಮವನ್ನು ಮತ್ತಷ್ಟು ಬಿಗಿಗೊಳಿಸಿದರು.

LEAVE A REPLY

Please enter your comment!
Please enter your name here