ಕುಡಿಯುವ ನೀರಿಗಾಗಿ ಹಾಹಾಕಾರ: ಸುಂಕನೂರ್ ಕ್ಯಾಂಪ್

0

ರಾಯಚೂರು ಜಿಲ್ಲೆಯ ಮಸ್ಕಿ.ತಾಲ್ಲೂಕಿನ ಹಿರೇ ದಿನ್ನಿ ಪಂಚಾಯತಿ ವ್ಯಾಪ್ತಿಯ ಸುಂಕನೂರು ಕ್ಯಾಂಪ್ ನಲ್ಲಿ ಕುಡಿಯುವ ನೀರಿಗಾಗಿ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ .

ಈ ಕ್ಯಾಂಪ್ ನಲ್ಲಿ ೧೫ ಕ್ಕು ಹೆಚ್ಚು ಕುಟುಂಬ ೬೦ ಜನರು ಸುಮಾರು ೩೫ ವರ್ಷಗಳಿಂದ ವಾಸವಾಗಿದ್ದು ಇಲ್ಲಿ ಕುಡಿಯುವ ನೀರಿಗಾಗಿ ಪ್ರತಿ ವರ್ಷ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.

ಎಷ್ಟೇ ಬಾರಿ ಅಧಿಕಾರಿಗಳಿಗೆ ಸೂಚಿಸಿದರು ಬರೀ ಆಶ್ವಾಸನೆ ಹೊರತು ಕೆಲಸ ಮಾತ್ರ ಆಗಿಲ್ಲ. ಇತ್ತೀಚಿಗೆ ಪಂಚಾಯ್ತಿ ಅಭಿರುದ್ದಿ ಅಧಿಕಾರಿಗೆ ಮನವಿ ಮಾಡಿಕೊಂಡರು ಅವರಿಂದ ಉಢಾಫೆ ಉತ್ತರ ಮಾತ್ರ ಸಿಗುತ್ತಿತ್ತು.

ಈ ಕ್ಯಾಂಪ್ ನಲ್ಲೆ ಇರುವಂತ ಜನರೆಲ್ಲ ತಾವೇ ಸ್ವತಃ ಒಂದು ಸಣ್ಣ ಕೆರೆ ನಿರ್ಮಾಣ ಮಾಡಿಕೊಂಡಿದ್ದು ಅಬ್ಬಬ್ಬಾ ಅಂದರೆ ಎರಡು ತಿಂಗಳು ಮಾತ್ರ ನೀರು ಸಾಲುತ್ತ ಮುಂದಿನ ದಿನಗಳಲ್ಲಿ ನೀರಿಗಾಗಿ ಪರದಾಡುವ ಪರಿಸ್ಥಿತಿ ಇದ್ದು ,ನೀರು ಖಾಲಿಯಾದ ನಂತರ ಎರಡು ಕಿಲೋಮೀಟರ್ ದೂರದಲ್ಲಿ ಇರುವ ಪಕ್ಕದ ಕೆರೆಗೆ ಹೋಗಿ ನೀರು ತರಬೇಕು

ಒಂದು ವೇಳೆ ಮೇಳೆಯಾದರೆ ಹೋಗಲು ರಸ್ತೆ ಎಲ್ಲ ಸಂಪೂರ್ಣ ಕೆಸರು ತುಂಬಿಕೊಳ್ಳುವ ರಸ್ತೆಯಲ್ಲಿ ನಡೆದು ಹೋಗುವುದು ದುಸ್ತರವಾಗಿದೆ.

ಕೂಡಲೇ ಸಂಬಂಧ ಪಟ್ಟ ಅಧಿಕಾರಿಗಳು ಇತ್ತ ಕಡೆ ಗಮನ ಹರಿಸಿ ಜನತೆಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡಿಕೊಡಬೇಕೆಂದು ಈ ಮೂಲಕ ತಹಶೀಲ್ದಾರ್ ಮೂಲಕ ಮನವಿ ಸಲ್ಲಿಸಿದರು.

LEAVE A REPLY

Please enter your comment!
Please enter your name here