ಕೂಡ್ಲಿಗಿ ಪಪಂ:ಉದ್ಧಟತನದ ಸಿಬ್ಬಂದಿಗೆ ಬುದ್ಧಿ ಕಲಿಸಿ-ಮಾಜಿ ಸೈನಿಕ ಹೆಚ್.ರಮೇಶ ಆಗ್ರಹ

0

ಬಳ್ಳಾರಿ ಜಿಲ್ಲೆ ಕೂಡ್ಲಿಗಿ ಪಟ್ಟಣ ಪಂಚಾಯ್ತಿ ಕಛೇರಿಯಲ್ಲಿ,ಸಿಬ್ಬಂದಿಯೋವ೯ ಸಾವ೯ಜನಿಕರೊಂದಿಗೆ ತುಂಬಾ ಉದ್ಧಟನದಿಂದ ವತಿ೯ಸುತ್ತಿದ್ದಾನೆ,ಕೆಲಗಳನ್ನ ಅನಗತ್ಯ ವಿಳಂಬ ಮಾಡುತ್ತಿದ್ದಾನೆಂದು ಮಾಜಿ ಸೈನಿಕ ಹೆಚ.ರಮೇಶರವರು ದೂರಿದ್ದಾರೆ.ಪಪಂ ಕಛೇರಿಯ ಕಂಪ್ಯೂಟರ್ ಆಪರೇಟರ್ ಮೇಲೆ ಈ ಆರೋಪ ಕೇಳಿಬಂದಿದೆ.ಈ ಕುರಿತು ಹೆಚ್.ರಮೇಶ ಹಾಗೂ ಕೆಲ ಸಾವ೯ಜನಿಕರು,ಕಂಪ್ಯೂಟರ್ ಆಪರೇಟರ್ ನಿಂದಾಗಿ ತಮಗಾದ ನೋವು ಬೇಸರವನ್ನು,ಮುಖ್ಯಾಧಿಕಾರಿಗೆ ಲಿಖಿತ ದೂರಿನ ಮೂಲಕ ಮನವರಿಕೆ ಮಾಡಿ ಸೂಕ್ತ ಶಿಸ್ಥುಕ್ರಮಕ್ಕಾಗಿ ಒತ್ತಾಯಿಸಿದ್ದಾರೆ.ಮಾಜಿ ಸೈನಿಕ ಹೆಚ್.ರಮೇಶರವರು ಮಾತನಾಡಿ,ಹತ್ತಾರು ಸಾವಿರ ಸಂಬಳ ಪಡೆಯುವ ಕೆಲ ಅಧಿಕಾರಿಗಳು ಕೆಲ ಸಿಬ್ಬಂದಿಗಳು,ಸಾವ೯ಜನಿಕರ ಕೆಲಸ ಮಾಡದೇ ಅವರನ್ನು ವಿನಾಕಾರಣ ಅಲೆದಾಡಿಸುತ್ತಿದ್ದಾರೆ.ಇದು ಪಪಂ ಕಛೇರಿ ಸೇರಿದಂತೆ ಕೂಡ್ಲಿಗಿಯ ವಿವಿದ ಸಕಾ೯ರಿ ಇಲಾಖಾ ಕಛೇರಿಗಳ ಕಮ೯ಕಾಂಡವಾಗಿದೆ ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.ಜನಸಾಮಾನ್ಯರನ್ನು ವಿನಾಕಾರಣ ಕಛೇರಿಗೆ ಅಲೆದಾಡಿಸುವ,ಸಾವ೯ಜನಿಕರೊಂದಿಗೆ ಉದ್ಧಠನದಿಂದ ವತಿ೯ಸುವ,ಕಂಪ್ಯೂಟರ್ ಆಪರೇಟರ್ ನನ್ನು ಶೀಘ್ರವೇ ಬೇರೆಡೆಗೆ ವಗಾ೯ಯಿಸಬೇಕೆಂದು ರಮೇಶ ಆಗ್ರಹಿಸಿದ್ದಾರೆ.ಮುಖ್ಯಾಧಿಕಾರಿ ತೆಗೆದುಕೊಳ್ಳುವ ಶಿಸ್ಥು ಕ್ರಮ,ಪಪಂ ಕಛೇರಿಯ ಇತರೆ ಸಿಬ್ಬಂದಿ ಹಾಗೂ ಕೆಲ ಸಕಾ೯ರಿ ಕಛೇರಿಗಳಲ್ಲಿರುವ.ಇಂತಹ ಸಿಬ್ಬಂದಿಗಳಿಗೆ ಎಚ್ಚರಿಕೆಯ ಘಂಟೆ ಆಗಬೇಕಾಗಿದೆ ಮತ್ತು ಸಾವ೯ಜನಿಕರಿಗೆ ಅನುಕೂಲವಾಗಬೇಕಿದೆ ಎಂದು ರಮೇಶ ಕೋರಿದ್ದಾರೆ.ಕರವೇ ಸಾಲುಮನಿ ರಾಘವೇಂದ್ರ, ಓಂಕಾರಪ್ಪ ಸೇರಿದಂತೆ ಇತರರು ಇದ್ದರು.

ವಂದೇ ಮಾತರಂ ವಿ.ಜಿ.ವೃಷಭೇಂದ್ರ ಕೂಡ್ಲಿಗಿ-

LEAVE A REPLY

Please enter your comment!
Please enter your name here