ಕೂಲಿ ಕಾರ್ಮಿಕನಿಗೆ ಗಣಿಯಲ್ಲಿ ಸಿಕ್ಕಿದ ಅಮೂಲ್ಯ ವಜ್ರ !

0

ಮಧ್ಯಪ್ರೇಶದ ಪನ್ನಾ ಜಿಲ್ಲೆಯಲ್ಲಿ ಕೂಲಿ ಕಾರ್ಮಿಕನೊಬ್ಬನಿಗೆ ಗಣಿಯಲ್ಲಿ 30 ರಿಂದ 35 ಲಕ್ಷ ರೂ. ಮೌಲ್ಯದ ವಜ್ರ ಸಿಕ್ಕಿದ ಹಿನ್ನೆಲೆಯಲ್ಲಿ ರಾತ್ರೋರಾತ್ರಿ ಲಕ್ಷಾಧೀಶನಾದ ಘಟನೆ ವರದಿಯಾಗಿದೆ.

ಗಣಿಯಲ್ಲಿ ಅಗೆಯುತ್ತಿದ್ದಾಗ ಸುಬಲ್ ಎಂಬ ಕಾರ್ಮಿಕನಿಗೆ ಒಟ್ಟು 7.5 ಕ್ಯಾರೆಟ್ ತೂಕದ ಮೂರು ವಜ್ರಗಳು ಸಿಕ್ಕಿವೆ ಎಂದು ಪನ್ನಾ ಜಿಲ್ಲೆಯ ವಜ್ರ ಅಧಿಕಾರಿ ಆರ್.ಕೆ.ಪಾಂಡೆ ಹೇಳಿದ್ದಾರೆ. ಈ ಅಮೂಲ್ಯ ಹರಳುಗಳ ಬೆಲೆ 30 ರಿಂದ 35 ಲಕ್ಷ ರೂ. ಎಂದು ತಜ್ಞರು ಅಂದಾಜಿಸಿದ್ದಾರೆ.

ಕಾರ್ಮಿಕ ಈ ವಜ್ರವನ್ನು ಜಿಲ್ಲಾ ವಜ್ರ ಕಚೇರಿಗೆ ತಲುಪಿಸಿದ್ದು, ಸರ್ಕಾರಿ ನಿಯಮಾವಳಿ ಪ್ರಕಾರ ಇದನ್ನು ಹರಾಜು ಮಾಡಲಾಗುವುದು ಎಂದು ಪಾಂಡೆ ಹೇಳಿದ್ದಾರೆ. ಶೇ. 12ರಷ್ಟು ತೆರಿಗೆ ಕಡಿತಗೊಳಿಸಿದ ಬಳಿಕ ಮಾರಾಟದಿಂದ ಬಂದ ಶೇಕಡ 88ರಷ್ಟು ಹಣವನ್ನು ಸಬಲ್ ಅವರಿಗೆ ನೀಡಲಾಗುತ್ತದೆ ಎಂದು ವಿವರಿಸಿದ್ದಾರೆ.

ಕೆಲ ದಿನಗಳ ಹಿಂದೆ ಮತ್ತೊಬ್ಬ ಕಾರ್ಮಿಕನಿಗೆ 10.69 ಕ್ಯಾರಟ್ ತೂಕದ ವಜ್ರ ಗಣಿಯಲ್ಲಿ ಸಿಕ್ಕಿತ್ತು. ಬುಂಡೇಲ್‌ಖಂಡ ಪ್ರದೇಶದ ಪನ್ನಾ ಜಿಲ್ಲೆ ಅತ್ಯಂತ ಹಿಂದುಳಿದ ಜಿಲ್ಲೆ ಎನಿಸಿಕೊಂಡಿದೆ.

LEAVE A REPLY

Please enter your comment!
Please enter your name here