ಕೃಷ್ಣರಾಜಪೇಟೆ ಪಟ್ಟಣದ ಡಾ.ಪ್ರಕಾಶ್ ಅವರಿಗೆ ಕೊರೋನಾ ಸೋಂಕು ವೈದ್ಯರಿಗೆ ಸೇರಿದ ವಾತ್ಸಲ್ಯ ಕ್ಲಿನಿಕ್ ಸೀಲ್ ಡೌನ್

0

ಕೆ ಆರ್ ಪೇಟೆಯಲ್ಲಿ ಮುಂದುವರಿದ ಕೊರೋನ ಆರ್ಭಟ !!!

ಕೃಷ್ಣರಾಜಪೇಟೆ ಪಟ್ಟಣದ ಜನಪ್ರಿಯ ವೈದ್ಯರಾದ ಡಾ.ಪ್ರಕಾಶ್ ಅವರಿಗೆ ವಕ್ಕರಿಸಿದ ಕೊರೋನಾ ಸೋಂಕು..

ವೈದ್ಯರಿಗೆ ಸೇರಿದ ವಾತ್ಸಲ್ಯ ಕ್ಲಿನಿಕ್ ಮತ್ತು ಬಸವೇಶ್ವರ ಮೆಡಿಕಲ್ಸ್ ಔಷಧದ ಅಂಗಡಿ ಸೀಲ್ ಡೌನ್…

ಆತಂಕದಲ್ಲಿ ಪಟ್ಟಣದ ಜನತೆ* …

ಕೆ.ಆರ್.ಪೇಟೆ ಪಟ್ಟಣದಲ್ಲಿ ಕೊರೋನಾ ಮಹಾಮಾರಿಯು ತನ್ನ ಅಟ್ಟಹಾಸವನ್ನು ಮುಂದುವರೆಸಿದ್ದು ಇಂದು ಪಟ್ಟಣದ ವೈದ್ಯರಾದ ಪ್ರಕಾಶ್ ಅವರಿಗೆ

ಕೊರೋನಾ ಪಾಸಿಟಿವ್ ಸೋಂಕು ಪತ್ತೆಯಾದ ಹಿನ್ನೆಲೆಯಲ್ಲಿ ಅವರ ಕ್ಲಿನಿಕ್ ಮತ್ತು ಪಕ್ಕದ ಮೆಡಿಕಲ್ ಸ್ಟೋರ್ ಅನ್ನು ಸೀಲ್ ಡೌನ್ ಮಾಡಲಾಗಿದೆ

ಕೆ.ಖಾಸಿಂಖಾನ್ ಮೆಡಿಕಲ್ಸ್ ಮಾಲೀಕರು, ಕರ್ನಾಟಕ ಗ್ರಾಮೀಣ ಬ್ಯಾಂಕ್ ಕ್ಯಾಷಿಯರ್, ಪೋಲಿಸ್ ಗಸ್ತು ವಾಹನದ ಚಾಲಕರು ಹಾಗೂ ಬೆಂಗಾವಲು ಪಡೆಯ ಎ.ಎಸ್.ಐ ಅವರಿಗೆ ಕೊರೋನಾ ಸೋಂಕು ಪತ್ತೆಯಾಗಿತ್ತು

ಇವರುಗಳೆಲ್ಲರೂ ಮಂಡ್ಯದ ಮಿಮ್ಸ್ ವೈದ್ಯಕೀಯ ಮಹಾವಿದ್ಯಾಲಯದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ..

ತಹಶೀಲ್ದಾರ್ ಎಂ.ಶಿವಮೂರ್ತಿ, ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಮಧುಸೂದನ್ ಮತ್ತು ಪಟ್ಟಣ ಠಾಣೆಯ ಸಬ್ ಇನ್ಸ್ ಪೆಕ್ಟರ್ ಬ್ಯಾಟರಾಯಗೌಡ,

ಸರ್ಕಲ್ ಇನ್ಸ್ ಪೆಕ್ಟರ್ ಕೆ.ಎನ್.ಸುಧಾಕರ್ ಜನಸಾಮಾನ್ಯರಿಗೆ ಜಾಗೃತಿ ಮೂಡಿಸಿ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದ್ದಾರೆ.

..ವಾತ್ಸಲ್ಯ ಕ್ಲಿನಿಕ್ ವೈದ್ಯರಾದ ಡಾ.ಪ್ರಕಾಶ್ ಅವರನ್ನು ಮಂಡ್ಯದ ಮಿಮ್ಸ್ ಗೆ ಹೆಚ್ಚಿನ ಚಿಕಿತ್ಸೆಗೆ ಕರೆದೊಯ್ಯಲಾಗಿದೆ

LEAVE A REPLY

Please enter your comment!
Please enter your name here